
ನವದೆಹಲಿ: ಭಾನುವಾರ ಪಾಕಿಸ್ತಾನ ವಿರುದ್ಧ ನಡೆದ ಏಷ್ಯಾ ಕಪ್ 2025 ಸೂಪರ್ 4 ಪಂದ್ಯದಲ್ಲಿ ಅಭಿಷೇಕ್ ಶರ್ಮಾ 74 ರನ್ ಗಳಿಸಿ ಭರ್ಜರಿ ಪ್ರದರ್ಶನ ನೀಡಿದರು. ಭಾರತ ತಂಡ 172 ರನ್ ಗಳ ಗುರಿಯನ್ನು 7 ಎಸೆತಗಳು ಬಾಕಿ ಇರುವಾಗಲೇ ಬೆನ್ನಟ್ಟಿದ ಅಭಿಷೇಕ್ 39 ಎಸೆತಗಳಲ್ಲಿ 5 ಸಿಕ್ಸರ್ ಮತ್ತು 6 ಬೌಂಡರಿಗಳನ್ನು ಗಳಿಸಿದರು.
ಹ್ಯಾರಿಸ್ ರೌಫ್ ಮತ್ತು ಶಾಹೀನ್ ಶಾ ಅಫ್ರಿದಿ ಅವರಂತಹ ವೇಗಿಗಳನ್ನು ಎದುರಿಸಿದರೂ, ಅಭಿಷೇಕ್ ಈ ಸವಾಲಿನಿಂದ ವಿಚಲಿತರಾಗಲಿಲ್ಲ ಮತ್ತು ತಮ್ಮ ಯೋಜನೆಯನ್ನು ಯಶಸ್ವಿಯಾಗಿ ಕಾರ್ಯಗತಗೊಳಿಸಿದರು. ಪಂದ್ಯದ ನಂತರ ಭಾರತದ ಮಾಜಿ ಕ್ರಿಕೆಟಿಗ ವೀರೇಂದ್ರ ಸೆಹ್ವಾಗ್ ಅವರೊಂದಿಗೆ ಮಾತನಾಡಿದ ಅಭಿಷೇಕ್, ಪ್ರಸ್ತುತ ಪಾಕಿಸ್ತಾನಿ ಬೌಲರ್‌ಗಳು ತಮಗೆ ಸವಾಲೊಡ್ಡಲು ಏಕೆ ವಿಫಲರಾಗಿದ್ದಾರೆಂದು ವಿವರಿಸಿದ್ದಾರೆ.
ಸೋನಿ ಲಿವ್‌ನಲ್ಲಿ ಚಾಟ್ ಮಾಡುವಾಗ ಅಭಿಷೇಕ್, ಪಾಕಿಸ್ತಾನ ತಂಡ ಪ್ರಸ್ತುತ ಹೊಂದಿರುವ ಬೌಲರ್‌ಗಳ ಗುಣಮಟ್ಟದ ಬಗ್ಗೆ ದಿಟ್ಟ ಹೇಳಿಕೆ ನೀಡಿ, ಪಾಕಿಸ್ತಾನದ ಗಾಯದ ಮೇಲೆ ಉಪ್ಪು ಸುರಿದಿದ್ದಾರೆ. ಗಡಿಯಾಚೆಗಿನ ಭಾರತದ ಪ್ರತಿಸ್ಪರ್ಧಿಗಳು ವೀರೇಂದ್ರ ಸೆಹ್ವಾಗ್ ಅವರಂತಹ ಬ್ಯಾಟ್ಸ್ ಮನ್ ಗಳನ್ನು ಎದುರಿಸುವ ಬೌಲರ್‌ಗಳನ್ನು ಹೊಂದಿಲ್ಲ ಎಂದು ಅಭಿಷೇಕ್ ಭಾವಿಸಿದ್ದಾರೆ.
"ವಿರು ಪಾಜಿ ಎದುರಿಸಿದ ಬೌಲರ್‌ಗಳಂತಹ ಬೌಲರ್‌ಗಳು ಈಗ ಆ ತಂಡದಲ್ಲಿ ಯಾರೂ ಇಲ್ಲ ಎಂದು ನಾನು ಭಾವಿಸುತ್ತೇನೆ" ಎಂದು ಅಭಿಷೇಕ್ ಸೋನಿ ಸ್ಪೋರ್ಟ್ಸ್‌ನಲ್ಲಿ ಹೇಳಿದ್ದಾರೆ.
ಸಂಭಾಷಣೆಯ ಸಮಯದಲ್ಲಿ, ಸೆಹ್ವಾಗ್ ಅಭಿಷೇಕ್‌ಗೆ ಒಂದು ಪ್ರಮುಖ ಸಲಹೆ ನೀಡಿದ್ದು, ಅವರು 50 ಮತ್ತು 70 ರನ್ ಗಳನ್ನು ಶತಕಗಳಾಗಿ ಪರಿವರ್ತಿಸಲು ಪ್ರಾರಂಭಿಸಬೇಕು, ಇಲ್ಲದೇ ಇದ್ದಲ್ಲಿ ಮುಂದೆ ಹಾಗೆ ಮಾಡದಿದ್ದಕ್ಕೆ ವಿಷಾದಿಸುವ ಸಮಯ ಬರುತ್ತದೆ ಎಂದು ಕಿವಿ ಮಾತು ಹೇಳಿದ್ದಾರೆ.
"ನೀವು 70 ತಲುಪಿದಾಗಲೆಲ್ಲಾ, 100 ನ್ನು ಕಳೆದುಕೊಳ್ಳಬೇಡಿ ಏಕೆಂದರೆ ಸುನಿಲ್ ಗವಾಸ್ಕರ್ ನನಗೆ ಹೇಳಿದರು - ನೀವು ನಿವೃತ್ತರಾದಾಗ, ನೀವು 70 ಅಥವಾ 80 ರಲ್ಲಿ ಔಟಾದ ಇನ್ನಿಂಗ್ಸ್ ನ್ನು ನೆನಪಿಸಿಕೊಳ್ಳುತ್ತೀರಿ. ನೀವು ಅವುಗಳನ್ನು ಪರಿವರ್ತಿಸಿದರೆ, ಬಹುಶಃ ನಿಮ್ಮ ವೃತ್ತಿಜೀವನವು ಹೆಚ್ಚಿನ ಶತಕಗಳನ್ನು ಹೊಂದಿರುತ್ತದೆ ಏಕೆಂದರೆ ಈ ಅವಕಾಶಗಳು ಮತ್ತೆ ಮತ್ತೆ ಬರುವುದಿಲ್ಲ. ನೀವು ಚೆನ್ನಾಗಿ ಬ್ಯಾಟಿಂಗ್ ಮಾಡುವಾಗ, , ನಾಟ್ ಔಟ್ ಆಗಲು ಪ್ರಯತ್ನಿಸಿ ಅದು ಉತ್ತಮ" ಎಂಬ ಸಲಹೆಯನ್ನು ಸೆಹ್ವಾಗ್ ನೀಡಿದ್ದಾರೆ.
Advertisement