
ಲಂಡನ್: ವಿಭಿನ್ನ ಶೈಲಿಯ ಅಂಪೈರಿಂಗ್ ಮೂಲಕ ಗುರುತಿಸಿಕೊಂಡಿದ್ದ ಅಂಪೈರಿಂಗ್ ದಿಗ್ಗಜ ಹೆರಾಲ್ಡ್ ಡೆನ್ನಿಸ್ 'ಡಿಕಿ' ಬರ್ಡ್ ಅವರು 92ನೇ ವಯಸ್ಸಿನಲ್ಲಿ ಮನೆಯಲ್ಲಿ ನಿಧನರಾದರು ಎಂದು ಯಾರ್ಕ್‌ಷೈರ್ ಕೌಂಟಿ ಕ್ರಿಕೆಟ್ ಕ್ಲಬ್ ಮಂಗಳವಾರ ತಿಳಿಸಿದೆ.
"ಕ್ರಿಕೆಟ್‌ನ ಅತ್ಯಂತ ಪ್ರೀತಿಯ ವ್ಯಕ್ತಿಗಳಲ್ಲಿ ಒಬ್ಬರಾದ ಹೆರಾಲ್ಡ್ ಡೆನ್ನಿಸ್ "ಡಿಕಿ' ಬರ್ಡ್ ಎಂಬಿಇ ಒಬಿಇ" ಅವರ ನಿಧನವನ್ನು ಯಾರ್ಕ್‌ಷೈರ್ ಕೌಂಟಿ ಕ್ರಿಕೆಟ್ ಕ್ಲಬ್ ಅತ್ಯಂತ ದುಃಖದಿಂದ ಪ್ರಕಟಿಸುತ್ತಿದೆ" ಎಂದು ಯಾರ್ಕ್‌ಷೈರ್ ಕೌಂಟಿ ಕ್ರಿಕೆಟ್ ಕ್ಲಬ್ ಎಕ್ಸ್‌ನಲ್ಲಿ ಪೋಸ್ಟ್ ಮಾಡಿದೆ.
ವಿಶ್ವ ಕ್ರಿಕೆಟ್‌ನಲ್ಲಿ ಅತ್ಯಂತ ಗೌರವಾನ್ವಿತ ಅಂಪೈರ್‌ಗಳಲ್ಲಿ ಒಬ್ಬರೆಂದು ಪರಿಗಣಿಸಲ್ಪಟ್ಟ ಬರ್ಡ್, ಅಂತರರಾಷ್ಟ್ರೀಯ ವೇದಿಕೆಯಲ್ಲಿ ಎರಡು ದಶಕಗಳಿಗೂ ಹೆಚ್ಚು ಕಾಲ ಅಂಪೈರಿಂಗ್ ಮಾಡಿದ್ದಾರೆ.
2014 ರಲ್ಲಿ, ಅವರನ್ನು ಯಾರ್ಕ್‌ಷೈರ್ ಕೌಂಟಿ ಕ್ರಿಕೆಟ್ ಕ್ಲಬ್‌ನ ಅಧ್ಯಕ್ಷರನ್ನಾಗಿ ನೇಮಿಸಿತ್ತು. ಅವರ ಅಧಿಕಾರಾವಧಿಯಲ್ಲಿ ಕ್ಲಬ್ ಎರಡು ಕೌಂಟಿ ಚಾಂಪಿಯನ್‌ಶಿಪ್ ಪ್ರಶಸ್ತಿಗಳನ್ನು ಗೆದ್ದಿತು.
ಏಪ್ರಿಲ್ 19, 1933 ರಂದು ಯಾರ್ಕ್‌ಷೈರ್‌ನ ಬಾರ್ನ್ಸ್ಲಿಯಲ್ಲಿ ಜನಿಸಿದ ಡಿಕಿ ಬರ್ಡ್ ಅವರ ಜೀವನ ಸಂಪೂರ್ಣ ಕ್ರಿಕೆಟ್‌ಗೆ ಮುಡಿಪಾಗಿತ್ತು.
ಕ್ರೀಡಾಂಗಣದಲ್ಲೇ ಗಾವಸ್ಕರ್ ಕೂದಲು ಕತ್ತರಿಸಿದ್ದ ಡಿಕಿ ಬರ್ಡ್
1974 ಭಾರತ ಮತ್ತು ಇಂಗ್ಲೆಂಡ್ ನಡುವಿನ ಟೆಸ್ಟ್ ಪಂದ್ಯದಲ್ಲಿ ಕ್ರಿಕೆಟ್ ದಿಗ್ಗಜ ಸುನಿಲ್ ಗಾವಸ್ಕರ್ ಅವರ ಕಣ್ಣಿಗೆ ತಲೆಗೂದಲು ತೊಂದರೆ ಮಾಡುತ್ತಿದ್ದರಿಂದ, ಡಿಕಿ ಬರ್ಡ್ ಅವರು ಕ್ರೀಡಾಂಗಣದಲ್ಲೇ ಬಾಲ್ ನ ತ್ರೆಡ್ ಕತ್ತರಿಸುವ ಕತ್ತರಿಯಲ್ಲಿ ಗಾವಸ್ಕರ್ ಅವರ ಕೂದಲು ಕತ್ತರಿಸಿದ್ದರು.
Advertisement