
ಭಾನುವಾರ ಭಾರತ ವಿರುದ್ಧದ ಏಷ್ಯಾ ಕಪ್ 2025 ಪಂದ್ಯದ ವೇಳೆ ಪಾಕಿಸ್ತಾನ ಕ್ರಿಕೆಟ್ ತಂಡದ ವೇಗದ ಬೌಲರ್ ಹ್ಯಾರಿಸ್ ರೌಫ್ ತನ್ನ ಸನ್ನೆಗಳಿಂದಾಗಿ ಸುದ್ದಿಯಲ್ಲಿದ್ದರು. ಪಾಕಿಸ್ತಾನ ಪಂದ್ಯವನ್ನು 6 ವಿಕೆಟ್‌ಗಳಿಂದ ಸೋತರೆ, ಬೌಂಡರಿ ಲೈನ್ ಬಳಿ ಪ್ರೇಕ್ಷಕರೊಂದಿಗೆ ಮಾತುಕತೆ ನಡೆಸುವಾಗ ರೌಫ್ ಪ್ರಚೋದನಕಾರಿ ಸನ್ನೆಗಳನ್ನು ಮಾಡಿದರು. ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿರುವ ವಿಡಿಯೋವೊಂದರಲ್ಲಿ, ವೇಗಿ ಬೌಂಡರಿ ಲೈನ್ ಬಳಿ 'ವಿಮಾನ ಬೀಳುವ ಸನ್ನೆ' ಮಾಡುತ್ತಿರುವುದು ಕಂಡುಬಂದಿದ್ದು, ಅಭಿಮಾನಿಗಳು ಕಿಡಿಕಾರಿದ್ದಾರೆ.
ರೌಫ್ ಅವರು ಕಡೆಗೆ '6-0' ಎಂದು ಸನ್ನೆ ಮಾಡುವ ಮೊದಲು ಅಭಿಮಾನಿಗಳು 'ಕೊಹ್ಲಿ, ಕೊಹ್ಲಿ' ಎಂದು ಘೋಷಣೆ ಕೂಗುತ್ತಲೇ ಇದ್ದರು. ಆಪರೇಷನ್ ಸಿಂಧೂರದ ನಂತರ ಮಿಲಿಟರಿ ಸಂಘರ್ಷದ ಸಮಯದಲ್ಲಿ ಪಾಕಿಸ್ತಾನ ಆರು ಭಾರತೀಯ ಫೈಟರ್ ಜೆಟ್‌ಗಳನ್ನು ಹೊಡೆದುರುಳಿಸಿದೆ ಎಂಬ ಪಾಕಿಸ್ತಾನದ ದೃಢೀಕರಿಸದ ಹೇಳಿಕೆಗಳನ್ನು ಉಲ್ಲೇಖಿಸಿ ರೌಫ್ ಈ ಸನ್ನೆ ಮಾಡಿದ್ದಾರೆ ಎನ್ನಲಾಗಿದೆ.
ಅಷ್ಟಕ್ಕೇ ವಿವಾದ ತಣ್ಣಗಾಗಿಲ್ಲ. ರೌಫ್ ಅವರ ಪತ್ನಿ ಮುಜ್ನಾ ಮಸೂದ್ ಮಲಿಕ್, ತಮ್ಮ ಪತಿ '6-0' ಸನ್ನೆ ಮಾಡುತ್ತಿರುವ ಚಿತ್ರವನ್ನು ಸಾಮಾಜಿಕ ಮಾಧ್ಯಮ ಇನ್‌ಸ್ಟಾಗ್ರಾಂ ಸ್ಟೋರಿಯಲ್ಲಿ ಪೋಸ್ಟ್ ಮಾಡಿದ್ದಾರೆ ಎಂದು ವರದಿಯಾಗಿದೆ. ಚಿತ್ರದ ಜೊತೆಗೆ 'ಪಂದ್ಯವನ್ನು ಸೋತಿರಬಹುದು ಆದರೆ ಯುದ್ಧವನ್ನು ಗೆದ್ದಿದ್ದೇವೆ' ಎಂದು ಶೀರ್ಷಿಕೆ ನೀಡಿದ್ದಾರೆ.
ಆದಾಗ್ಯೂ, ಮಾಧ್ಯಮ ವರದಿಗಳ ಪ್ರಕಾರ, ಈ ಬಗ್ಗೆ ವಿವಾದ ಉಂಟಾಗುತ್ತಿದ್ದಂತೆ ಸ್ವಲ್ಪ ಸಮಯದ ನಂತರ ಇನ್‌ಸ್ಟಾಗ್ರಾಂ ಸ್ಟೋರಿಯನ್ನು ಅಳಿಸಲಾಗಿದೆ.
ಪಂದ್ಯದ ಸಮಯದಲ್ಲಿ, ಬೌಂಡರಿ ಬಾರಿಸಿದ ನಂತರ ಹ್ಯಾರಿಸ್ ರೌಫ್ ಟೀಂ ಇಂಡಿಯಾ ಬ್ಯಾಟರ್ ಅಭಿಷೇಕ್ ಶರ್ಮಾ ಅವರೊಂದಿಗೆ ಮಾತಿನ ಚಕಮಕಿ ನಡೆಸಿದರು. ಮೈದಾನದಲ್ಲಿ ಉದ್ವಿಗ್ನತೆ ಭುಗಿಲೆದ್ದಿತು ಮತ್ತು ಪಂದ್ಯದ ನಂತರ ಅಭಿಷೇಕ್, ಪಾಕಿಸ್ತಾನ ಬೌಲರ್‌ಗಳು 'ಯಾವುದೇ ಕಾರಣವಿಲ್ಲದೆ' ಭಾರತದ ಬ್ಯಾಟ್ಸ್‌ಮನ್‌ಗಳನ್ನು ಕೆರಳಿಸಲು ಪ್ರಯತ್ನಿಸುತ್ತಿದ್ದಾರೆ ಎಂದು ಹೇಳಿದರು.
'ಇಂದು ತುಂಬಾ ಸರಳವಾಗಿತ್ತು, ಅವರು ಯಾವುದೇ ಕಾರಣವಿಲ್ಲದೆ ನಮ್ಮ ಬಳಿಗೆ ಬರುತ್ತಿದ್ದರು. ನಮ್ಮನ್ನು ಕೆರಳಿಸುತ್ತಿದ್ದರು. ಅದು ನನಗೆ ಇಷ್ಟವಾಗಲಿಲ್ಲ. ಅದಕ್ಕಾಗಿಯೇ ನಾನು ಅವರ ಹಿಂದೆ ಹೋದೆ. ತಂಡಕ್ಕಾಗಿ ಉತ್ತಮ ಪ್ರದರ್ಶನ ನೀಡಲು ಬಯಸಿದ್ದೆ. ನಾವು (ಗಿಲ್) ಶಾಲಾ ದಿನಗಳಿಂದಲೂ ಆಡುತ್ತಿದ್ದೇವೆ, ನಾವು ಪರಸ್ಪರರ ಸಂಪರ್ಕವನ್ನು ಆನಂದಿಸುತ್ತೇವೆ, ನಾವು ಅದನ್ನು ಮಾಡುತ್ತೇವೆ ಎಂದು ಭಾವಿಸಿದ್ದೇವೆ ಮತ್ತು ಇಂದು ಆ ದಿನವಾಗಿತ್ತು. ಅವರು ಅದಕ್ಕೆ ಪ್ರತಿಕ್ರಿಯಿಸುತ್ತಿದ್ದ ರೀತಿ, ನನಗೆ ಇಷ್ಟವಾಯಿತು. ನಾನು ನಿಜವಾಗಿಯೂ ಕಠಿಣ ಅಭ್ಯಾಸ ಮಾಡುತ್ತಿದ್ದೇನೆ ಮತ್ತು ಇದು ನನ್ನ ದಿನವಾಗಿದ್ದರೆ, ನಾನು ನನ್ನ ತಂಡಕ್ಕಾಗಿ ಅದನ್ನು ಗೆಲ್ಲುತ್ತೇನೆ' ಎಂದು ಅವರು ಪಂದ್ಯದ ನಂತರ ಹೇಳಿದರು.
Advertisement