
ದುಬೈ: ಏಷ್ಯಾಕಪ್ ಕ್ರಿಕೆಟ್ ಟೂರ್ನಿಯ ಸೂಪರ್ 4 ಹಂತದ ಇಂದಿನ ಪಂದ್ಯದಲ್ಲಿ ಬಾಂಗ್ಲಾದೇಶದ ವಿರುದ್ಧ ಭಾರತ 168 ರನ್ ಕಲೆಹಾಕಿದೆ.
ದುಬೈ ಅಂತಾರಾಷ್ಟ್ರೀಯ ಕ್ರಿಕೆಟ್ ಮೈದಾನದಲ್ಲಿ ನಡೆಯುತ್ತಿರುವ ಸೂಪರ್ 4 ಹಂತದ ಪಂದ್ಯದಲ್ಲಿ ಟಾಸ್ ಸೋತರೂ ಮೊದಲು ಬ್ಯಾಟಿಂಗ್ ಮಾಡಿದ ಭಾರತ ತಂಡ ನಿಗಧಿತ 20 ಓವರ್ ನಲ್ಲಿ 6 ವಿಕೆಟ್ ನಷ್ಟಕ್ಕೆ 168 ರನ್ ಕಲೆಹಾಕಿತು. ಆ ಮೂಲಕ ಭಾರತಕ್ಕೆ ಗೆಲ್ಲಲು 169 ರನ್ ಗಳ ಸವಾಲಿನ ಗುರಿ ನೀಡಿತು.
ಟಾಸ್ ಸೋತರೂ ಮೊದಲು ಬ್ಯಾಟಿಂಗ್ ಮಾಡುವ ಅವಕಾಶ ಪಡೆದ ಭಾರತ ತಂಡ ಭರ್ಜರಿ ಆರಂಭ ಪಡೆಯಿತು. ಆರಂಭಿಕರಾಗಿ ಕಣಕ್ಕಿಳಿದ ಶುಭ್ ಮನ್ ಗಿಲ್ (29 ರನ್) ಮತ್ತು ಅಭಿಷೇಕ್ ಶರ್ಮಾ (75) ಭಾರತ ತಂಡಕ್ಕೆ ಭರ್ಜರಿ ಆರಂಭ ಒದಗಿಸಿದರು.
ಮೊದಲ ವಿಕೆಟ್ ಗೆ ಈ ಜೋಡಿ 77 ರನ್ ಕಲೆಹಾಕಿತು. ಒಂದು ಹಂತದಲ್ಲಿ ಭಾರತ 200ರ ಗಡಿ ದಾಡಲಿದೆ ಎಂದು ಅಂದಾಜಿಸಲಾಗಿತ್ತು. ಆದರೆ ಗಿಲ್ ಮತ್ತು ಅಭಿಶೇಕ್ ಶರ್ಮಾ ಔಟಾದ ಬಳಿಕ ಭಾರತದ ರನ್ ವೇಗಕ್ಕೆ ಕಡಿವಾಣ ಬಿತ್ತು.
ಅಭಿಷೇಕ್ ಶರ್ಮಾ ರನೌಟ್ ಗೆಬಲಿಯಾದರೆ ಶಿವಂ ದುಬೆ (2), ನಾಯಕ ಸೂರ್ಯ ಕುಮಾರ್ ಯಾದವ್ (5) ಮತ್ತು ತಿಲಕ್ ವರ್ಮಾ (5) ಬಂದಷ್ಟೇ ವೇಗವಾಗಿ ಪೆವಿಲಿಯನ್ ಸೇರಿಕೊಂಡರು. ಹಾರ್ದಿಕ್ ಪಾಂಡ್ಯಾ 38 ರನ್ ಗಳಿಸಿದರು. ಅಕ್ಸರ್ ಪಟೇಲ್ 15 ಎಸೆತಗಳಲ್ಲಿ ಕೇವಲ 10 ರನ್ ಗಳನ್ನಷ್ಟೇ ಗಳಿಸಿದರು.
ಅತ್ತ ಬಾಂಗ್ಲಾದೇಶ ಪರ ರಿಷಾದ್ ಹೊಸೈನ್ 2 ವಿಕೆಟ್ ಪಡೆದರೆ, ಸೈಫುದ್ದೀನ್, ಮುಸ್ತಫಿಜುರ್ ರೆಹಮಾನ್ ಮತ್ತು ಟಂಜಿಮ್ ಹಸನ್ ಸಕಿಬ್ ತಲಾ 1 ವಿಕೆಟ್ ಪಡೆದರು.
Advertisement