Asia Cup 2025: ಡೈವ್ ಯಾಕ್ ಹೊಡೆದ್ಯೋ..? Dasun Shanaka ವಿರುದ್ಧ ಕೋಚ್ ಸನತ್ ಜಯಸೂರ್ಯ ಗರಂ.. ಆಗಿದ್ದೇನು?

ಅಚ್ಚರಿಯಾದ್ರೂ ಇದು ಸತ್ಯ.. ದುಬೈ ಇಂಟರ್ನ್ಯಾಷನಲ್ ಸ್ಟೇಡಿಯಂನಲ್ಲಿ ನಡೆದ ಏಷ್ಯಾಕಪ್ ನ 18ನೇ ಹಾಗೂ ಸೂಪರ್ 4 ಹಂತದ ಕೊನೆಯ ಪಂದ್ಯವು ರಣರೋಚಕ ಹೋರಾಟಕ್ಕೆ ಸಾಕ್ಷಿಯಾಗಿತ್ತು.
Dasun Shanaka-sanath Jayasurya
ಡೈವ್ ಹೊಡೆದ ಶನಕ, ಕೋಟ್ ಜಯಸೂರ್ಯ ಆಕ್ರೋಶ
Updated on

ದುಬೈ: ಏಷ್ಯಾಕಪ್ ಕ್ರಿಕೆಟ್ ಟೂರ್ನಿಯ ಸೂಪರ್ 4 ಹಂತದ ಕೊನೆಯ ಪಂದ್ಯದಲ್ಲಿ ಶ್ರೀಲಂಕಾದ ದಸುನ್ ಶನಕ (Dasun Shanaka) ಮಾಡಿದ ಸಣ್ಣ ಎಡವಟ್ಟು ಭಾರತ ತಂಡಕ್ಕೆ ಗೆಲುವು ತಂದುಕೊಟ್ಟಿತು.

ಅಚ್ಚರಿಯಾದ್ರೂ ಇದು ಸತ್ಯ.. ದುಬೈ ಇಂಟರ್ನ್ಯಾಷನಲ್ ಸ್ಟೇಡಿಯಂನಲ್ಲಿ ನಡೆದ ಏಷ್ಯಾಕಪ್ ನ 18ನೇ ಹಾಗೂ ಸೂಪರ್ 4 ಹಂತದ ಕೊನೆಯ ಪಂದ್ಯವು ರಣರೋಚಕ ಹೋರಾಟಕ್ಕೆ ಸಾಕ್ಷಿಯಾಗಿತ್ತು.

ಈ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಟೀಮ್ ಇಂಡಿಯಾ 20 ಓವರ್‌ಗಳಲ್ಲಿ ಬರೋಬ್ಬರಿ 202 ರನ್ ಕಲೆಹಾಕಿತ್ತು. 203 ರನ್ ಗಳ ಗುರಿ ಬೆನ್ನತ್ತಿದ ಶ್ರೀಲಂಕಾ ಕೂಡ 20 ಓವರ್ ನಲ್ಲಿ 202 ರನ್ ಕಲೆಹಾಕಿತು.

ಹೀಗಾಗಿ ಪಂದ್ಯದ ಫಲಿತಾಂಶ ನಿರ್ಣಯಿಸಲು ಸೂಪರ್ ಓವರ್ ಮೊರೆ ಹೋಗಲಾಯಿತು. ಅಲ್ಲಿ ಶ್ರೀಲಂಕಾ ಮುಗ್ಗರಿಸಿ ಜಯ ಭಾರತದ ಪಾಲಾಯಿತು.

ಆದರೆ ಈ ಪಂದ್ಯದಲ್ಲಿ ಭಾರತದ ಬೃಹತ್ ಮೊತ್ತದ ಹೊರತಾಗಿಯೂ ದೃತಿಗೆಡದ ಶ್ರೀಲಂಕಾ ಕೆಚ್ಚೆದೆಯ ಹೋರಾಟ ಪ್ರದರ್ಶಿಸಿತು. ಪ್ರಮುಖವಾಗಿ ಶ್ರೀಲಂಕಾದ ಪಾತುಮ್ ನಿಸ್ಸಂಕಾ (107) ಮತ್ತು ಕುಶಾಲ್ ಪೆರೇರಾ (58) ಲಂಕಾ ಪರ ಅಬ್ಬರ ಬ್ಯಾಟಿಂಗ್ ನಡೆಸಿ ಸಮಬಲದ ಹೋರಾಟ ನೀಡಿದರು.

Dasun Shanaka-sanath Jayasurya
Asia Cup 2025: ಸೂಪರ್ ಓವರ್ ಹೈಡ್ರಾಮಾ, Dasun Shanaka ರನೌಟ್ ವಿವಾದ, ಔಟ್ ಆಗಿದ್ದರೂ ನಾಟೌಟ್ ಕೊಟ್ಟಿದ್ದೇಕೆ? ಇಲ್ಲಿದೆ ಉತ್ತರ

ಫೈನಲ್ ಓವರ್ ಹೈಡ್ರಾಮಾ, ಶ್ರೀಲಂಕಾ ಗೆಲುವಿಗೆ ಮುಳುವಾದ ಶನಕ ಡೈವ್

ನಿಸ್ಸಂಕಾ ಶತಕದ ನೆರವಿನೊಂದಿಗೆ ಲಂಕಾ ತಂಡವು 19 ಓವರ್‌ಗಳಲ್ಲಿ 191 ರನ್ ಕಲೆಹಾಕಿದ್ದರು. ಅದರಂತೆ ಕೊನೆಯ ಓವರ್‌ನಲ್ಲಿ ಶ್ರೀಲಂಕಾ ತಂಡಕ್ಕೆ 12 ರನ್ ಗಳ ಅವಶ್ಯಕತೆಯಿತ್ತು. 20ನೇ ಓವರ್ ಎಸೆದ ಹರ್ಷಿತ್ ರಾಣಾ ಮೊದಲ ಎಸೆತದಲ್ಲೇ ನಿಸ್ಸಂಕಾ ವಿಕೆಟ್ ಪಡೆದರು. ಇನ್ನು ದ್ವಿತೀಯ ಎಸೆತದಲ್ಲಿ ನೀಡಿದ್ದು ಕೇವಲ 2 ರನ್ ಮಾತ್ರ. ಮೂರನೇ ಎಸೆತದಲ್ಲಿ 1 ರನ್ ಬಿಟ್ಟು ಕೊಟ್ಟರು. ನಾಲ್ಕನೇ ಎಸೆತದಲ್ಲಿ 2 ರನ್ ನೀಡಿದರು. ಐದನೇ ಎಸೆತದಲ್ಲಿ ದಸುನ್ ಶಾನಕ ಬೌಂಡರಿ ಬಾರಿಸಿದರು.

ಅದರಂತೆ ಶ್ರೀಲಂಕಾ ತಂಡಕ್ಕೆ ಗೆಲ್ಲಲು ಕೊನೆಯ ಎಸೆತದಲ್ಲಿ 3 ರನ್ ಗಳು ಬೇಕಿತ್ತು. ದಸುನ್ ಶಾನಕ ಲಾಂಗ್ ಆನ್​ನತ್ತ ಬಾರಿಸಿದರು. ಚೆಂಡು ಹಿಡಿಯಲು ಬಂದ ಅಕ್ಷರ್ ಪಟೇಲ್ ಮಿಸ್ ಫೀಲ್ಡ್ ಮಾಡಿದರು. ಇದರ ನಡುವೆ ದಸುನ್ ಶನಕ ಎರಡನೇ ರನ್ ಓಡಿದರು. ಅಲ್ಲದೆ ಎರಡನೇ ರನ್ ಪೂರೈಸಲು ಡೈವ್ ಹೊಡೆದರು. ಇತ್ತ ಅಕ್ಷರ್ ಪಟೇಲ್ ಮಿಸ್ ಫೀಲ್ಡ್ ಮಾಡಿರುವುದನ್ನು ಗಮನಿಸಿದ ಜೆನಿತ್ ಲಿಯಾನಘೆ ಮೂರನೇ ರನ್ ಓಡಲು ಮುಂದಾಗಿದ್ದರು. ಆದರೆ ಅತ್ತ ಶಾನಕ ಡೈವ್ ಹೊಡೆದು ಎರಡನೇ ರನ್ ಪೂರೈಸಿ ಮಲಗಿದ್ದರು. ಚೆಂಡನ್ನು ಗಮನಿಸದೇ ಡೈವ್ ಹೊಡೆದು ಮಲಗಿದ್ದರಿಂದ ಇತ್ತ ಮೂರನೇ ರನ್ ಓಡುವ ಅವಕಾಶವನ್ನು ಕೈತಪ್ಪಿಸಿಕೊಂಡರು. ಹೀಗಾಗಿ ಪಂದ್ಯ ಟೈ ಆಯಿತು.

3ನೇ ರನ್ ಬಗ್ಗೆ ಯೋಚಿಸಲೇ ಇಲ್ಲ ಶನಕ

ಇನ್ನು ಶನಕ ತಾವು ಬ್ಯಾಟ್ ಬೀಸುವಾಗಲೇ 2 ರನ್ ಗೇ ತಮ್ಮನ್ನು ತಾವು ಸೀಮಿತ ಮಾಡಿಕೊಂಡಂತಿತ್ತು. ಮೂರು ರನ್ ಓಡುವ ಅವಕಾಶದ ಬಗ್ಗೆ ದಸುನ್ ಶಾನಕ ಚಿಂತಿಸಿಯೇ ಇರಲಿಲ್ಲ. ಬದಲಾಗಿ ಪಂದ್ಯವನ್ನು ಟೈ ಮಾಡಲು ನಿರ್ಧರಿಸಿದ್ದರು. ಇದರಿಂದಾಗಿ ಮೂರನೇ ರನ್ ಓಡಿ ಗೆಲ್ಲುವ ಅವಕಾಶ ಇದ್ದೂ ಗೆಲುವು ಶ್ರೀಲಂಕಾ ತಂಡದ ಕೈ ತಪ್ಪಿತು.

ಡೈವ್ ಯಾಕ್ ಹೊಡೆದ್ಯೋ... ಲಂಕಾ ಕೋಚ್ ಜಯಸೂರ್ಯ ಆಕ್ರೋಶ

ದಸುನ್ ಶಾನಕ ಮೂರನೇ ರನ್ ಓಡುವ ಅವಕಾಶವನ್ನು ಕೈ ಚೆಲ್ಲುತ್ತಿದ್ದಂತೆ ಡ್ರೆಸ್ಸಿಂಗ್ ರೂಮ್​ನಲ್ಲಿ ಶ್ರೀಲಂಕಾ ಆಟಗಾರರು ಆಕ್ರೋಶ ವ್ಯಕ್ತಪಡಿಸುತ್ತಿರುವುದು ಕಂಡು ಬಂತು. ಮುಖ್ಯವಾಗಿ ಲಂಕಾ ಕೋಚ್ ಸನತ್ ಜಯಸೂರ್ಯ ಶನಕ ಪೆವಿಲಿಯನ್ ಗೆ ಬರುತಲ್ಲೇ ಅವರನ್ನು ತರಾಟೆಗೆ ತೆಗೆದುಕೊಂಡರು. ಆದಾಗ್ಯೂ ಸೂಪರ್ ಓವರ್ ನಲ್ಲಿ ಪ್ರಬಾವಿ ಪ್ರದರ್ಶನ ನೀಡದೇ ಶ್ರೀಲಂಕಾ ಪಂದ್ಯ ಕೈ ಚೆಲ್ಲಿತು.

ಹೀಗೆ ಸಿಕ್ಕ ಅವಕಾಶವನ್ನು ಬಳಸಿಕೊಳದ್ದೇ ಶ್ರೀಲಂಕಾ ಪಂದ್ಯವನ್ನು ಟೈನಲ್ಲಿ ಅಂತ್ಯಗೊಳಿಸಿದರು. ಆ ಬಳಿಕ ನಡೆದ ಸೂಪರ್ ಓವರ್‌ನಲ್ಲಿ ಶ್ರೀಲಂಕಾ ಕಲೆಹಾಕಿದ್ದು ಕೇವಲ 2 ರನ್ ಮಾತ್ರ. ಈ ಗುರಿಯನ್ನು ಮೊದಲ ಎಸೆತದಲ್ಲೇ ಕಲೆಹಾಕುವ ಮೂಲಕ ಟೀಮ್ ಇಂಡಿಯಾ ಜಯ ಸಾಧಿಸಿತು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com