ಅಶ್ಲೀಲ ಸನ್ನೆ: India-Pakistan ಫೈನಲ್‌ಗೂ ಮುನ್ನ ಅರ್ಶ್‌ದೀಪ್ ಸಿಂಗ್‌ಗೆ ಸಂಕಷ್ಟ; ICCಗೆ ಪಿಸಿಬಿ ದೂರು!

2025ರ ಏಷ್ಯಾ ಕಪ್ ಫೈನಲ್‌ಗೆ ಮುನ್ನ ಪಾಕಿಸ್ತಾನ ಕ್ರಿಕೆಟ್ ಮಂಡಳಿ (PCB) ಭಾರತದ ಸ್ಟಾರ್ ವೇಗಿ ಅರ್ಶ್‌ದೀಪ್ ಸಿಂಗ್ ವಿರುದ್ಧ ದೂರು ದಾಖಲಿಸಿದೆ.
Arshdeep singh
ಅರ್ಶ್‌ದೀಪ್ ಸಿಂಗ್‌
Updated on

2025ರ ಏಷ್ಯಾ ಕಪ್ ಫೈನಲ್‌ಗೆ ಮುನ್ನ ಪಾಕಿಸ್ತಾನ ಕ್ರಿಕೆಟ್ ಮಂಡಳಿ (PCB) ಭಾರತದ ಸ್ಟಾರ್ ವೇಗಿ ಅರ್ಶ್‌ದೀಪ್ ಸಿಂಗ್ ವಿರುದ್ಧ ದೂರು ದಾಖಲಿಸಿದೆ. ಭಾರತೀಯ ಬೌಲರ್ ಅರ್ಶ್‌ದೀಪ್ ಸಿಂಗ್‌ ಅಶ್ಲೀಲ ಸನ್ನೆಗಳನ್ನು ಮಾಡಿದ್ದಾರೆ ಎಂದು ಪಾಕಿಸ್ತಾನ ಕ್ರಿಕೆಟ್ ಮಂಡಳಿ ಆರೋಪಿಸಿ ಐಸಿಸಿಗೆ ದೂರು ನೀಡಿದೆ. ಈ ಆರೋಪಗಳ ಹಿಂದಿನ ಸತ್ಯ ಈ ವಿಷಯದಲ್ಲಿ ಐಸಿಸಿ ನಿರ್ಧಾರದ ನಂತರವೇ ತಿಳಿಯಲಿದೆ. ಅರ್ಶ್‌ದೀಪ್ ಸಿಂಗ್‌ಗೂ ಮೊದಲು, ಪಿಸಿಬಿ ಭಾರತೀಯ ನಾಯಕ ಸೂರ್ಯಕುಮಾರ್ ಯಾದವ್ ವಿರುದ್ಧವೂ ದೂರು ದಾಖಲಿಸಿತ್ತು.

ಮೂಲಗಳ ಪ್ರಕಾರ, ಅರ್ಶ್‌ದೀಪ್ ಸಿಂಗ್ ವಿರುದ್ಧ ದೂರು ದಾಖಲಾಗಲು ಕಾರಣವಾದ ಘಟನೆ ಸೆಪ್ಟೆಂಬರ್ 21 ರಂದು ಭಾರತ ಮತ್ತು ಪಾಕಿಸ್ತಾನ ನಡುವಿನ ಸೂಪರ್ ಫೋರ್ ಪಂದ್ಯದ ಸಂದರ್ಭದಲ್ಲಿ ಸಂಭವಿಸಿದೆ. ಪಾಕಿಸ್ತಾನ ಕ್ರಿಕೆಟ್ ಮಂಡಳಿಯ ಪ್ರಕಾರ, ಆ ಪಂದ್ಯದ ಸಂದರ್ಭದಲ್ಲಿ ಅರ್ಶ್‌ದೀಪ್ ಸಿಂಗ್ ಪ್ರೇಕ್ಷಕರ ಕಡೆಗೆ ಅಶ್ಲೀಲ ಸನ್ನೆಗಳನ್ನು ಮಾಡಿದ್ದಾರೆ. ಹಾಗೆ ಮಾಡುವ ಮೂಲಕ ಅರ್ಶ್‌ದೀಪ್ ಸಿಂಗ್ ಐಸಿಸಿ ನೀತಿ ಸಂಹಿತೆಯನ್ನು ಉಲ್ಲಂಘಿಸಿದ್ದಾರೆ ಎಂದು ಪಿಸಿಬಿ ಆರೋಪಿಸಿದೆ.

ಪಿಸಿಬಿಯ ದೂರಿನ ಪ್ರಕಾರ, ಎಡಗೈ ಭಾರತೀಯ ವೇಗಿ ವರ್ತನೆಯು ಬೇಜವಾಬ್ದಾರಿಯುತ ಮತ್ತು ಆಟಕ್ಕೆ ಅಡ್ಡಿಪಡಿಸುವಂತಿತ್ತು. ಅರ್ಶ್‌ದೀಪ್ ಸಿಂಗ್ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕೆಂದು ಪಾಕಿಸ್ತಾನ ಕ್ರಿಕೆಟ್ ಮಂಡಳಿ ಈಗ ಒತ್ತಾಯಿಸಿದೆ.

Arshdeep singh
Asia Cup 2025, IND vs PAK: ನಿದ್ರೆಯಿಂದ ಎಬ್ಬಿಸಿದರೂ ಸಹ, ಅರ್ಶದೀಪ್ ಸಿಂಗ್ ಹೆಸರೇಳುವೆ; ಆರ್ ಅಶ್ವಿನ್

ಬಿಸಿಸಿಐ ದೂರಿನ ಆಧಾರದ ಮೇಲೆ ಹ್ಯಾರಿಸ್ ರೌಫ್‌ಗೆ ಶಿಕ್ಷೆ

ಬಿಸಿಸಿಐ ಹ್ಯಾರಿಸ್ ರೌಫ್ ಮತ್ತು ಸಾಹಿಬ್‌ಜಾದಾ ಫರ್ಹಾನ್ ವಿರುದ್ಧ ಬಿಸಿಸಿಐ ಐಸಿಸಿಗೆ ದೂರು ನೀಡಿದೆ. ಇದರ ನಂತರ, ಐಸಿಸಿ ರೆಫರಿ ಹ್ಯಾರಿಸ್ ರೌಫ್‌ಗೆ ಅವರ ಪಂದ್ಯ ಶುಲ್ಕದ 30 ಪ್ರತಿಶತದಷ್ಟು ದಂಡ ವಿಧಿಸಿದ್ದಾರೆ. ಏತನ್ಮಧ್ಯೆ, ರೌಫ್ ವಿರುದ್ಧ ಐಸಿಸಿಯ ನಿರ್ಧಾರವನ್ನು ಪಿಸಿಬಿ ಮೇಲ್ಮನವಿ ಸಲ್ಲಿಸಬಹುದು ಎಂಬ ವರದಿಗಳಿವೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X
Google Preferred source

Advertisement

X
Kannada Prabha
www.kannadaprabha.com