IPL 2026: ಸಂಜೀವ್ ಗೋಯೆಂಕಾ ಒಡೆತನದ LSG ತಂಡಕ್ಕೆ 'ಐಡೆಂಟಿಟಿ'ಯೇ ಇಲ್ಲ ಎಂದ ಭಾರತದ ಮಾಜಿ ಆಟಗಾರ

ಲಕ್ನೋ ಸೂಪರ್ ಜೈಂಟ್ಸ್ ತಂಡವು ಒಂದು ತಂಡವಾಗಿ ಹೇಗೆ ಪ್ರದರ್ಶನ ನೀಡುತ್ತದೆ ಎಂಬುದರ ಬಗ್ಗೆ ತನಗೆ ವಿಶ್ವಾಸವಿಲ್ಲ. ಇಂಡಿಯನ್ ಪ್ರೀಮಿಯರ್ ಲೀಗ್‌ನಲ್ಲಿ LSG ಇನ್ನೂ ಯುವ ತಂಡವಾಗಿದೆ.
Lucknow Super Giants
ಲಕ್ನೋ ಸೂಪರ್ ಜೈಂಟ್ಸ್
Updated on

ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧದ ಪಂದ್ಯದ ನಂತರ ಲಕ್ನೋ ಸೂಪರ್ ಜೈಂಟ್ಸ್ ತಂಡದಲ್ಲಿ ಐಡೆಂಟಿಟಿ ಮತ್ತು ಸಮತೋಲನದ ಕೊರತೆಯ ಬಗ್ಗೆ ಭಾರತದ ಮಾಜಿ ಬ್ಯಾಟ್ಸ್‌ಮನ್ ಅಭಿನವ್ ಮುಕುಂದ್ ಗಂಭೀರ ಕಳವಳ ವ್ಯಕ್ತಪಡಿಸಿದ್ದಾರೆ. ತಂಡದ ಸಂಯೋಜನೆ ಮತ್ತು ವಿಧಾನದ ಬಗ್ಗೆ ಟೀಕಿಸಿದ್ದಾರೆ. ಶ್ರೀ ಅಟಲ್ ಬಿಹಾರಿ ವಾಜಪೇಯಿ ಏಕಾನಾ ಕ್ರಿಕೆಟ್ ಕ್ರೀಡಾಂಗಣದಲ್ಲಿ ಗುರುವಾರ ನಡೆದ ಪಂದ್ಯದಲ್ಲಿ ಆತಿಥೇಯ ಎಲ್‌ಎಸ್‌ಜಿ ವಿರುದ್ಧ ಆರು ವಿಕೆಟ್‌ಗಳ ಭರ್ಜರಿ ಜಯ ಸಾಧಿಸುವ ಮೂಲಕ ಡಿಸಿ ತಂಡವು ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) 2026ರ ಅಭಿಯಾನವನ್ನು ಆರಂಭಿಸಿತು. ಸಮೀರ್ ರಿಜ್ವಿ ಅವರ ಅಜೇಯ 70 ಮತ್ತು ಟ್ರಿಸ್ಟಾನ್ ಸ್ಟಬ್ಸ್ ಜೊತೆಗಿನ 119 ರನ್‌ಗಳ ಪಾಲುದಾರಿಕೆ ತಂಡದ ಗೆಲುವಿಗೆ ಸಹಾಯ ಮಾಡಿತು. ಈ ಆವೃತ್ತಿಯ ತನ್ನ ಮೊದಲ ಪಂದ್ಯದಲ್ಲಿ ಎಲ್‌ಎಸ್‌ಜಿ ಕೇವಲ 18.4 ಓವರ್‌ಗಳಲ್ಲಿ 141 ರನ್‌ಗಳಿಗೆ ಆಲೌಟ್ ಆಯಿತು.

'ಲಕ್ನೋ ಸೂಪರ್ ಜೈಂಟ್ಸ್ ತಂಡವು ಒಂದು ತಂಡವಾಗಿ ಹೇಗೆ ಪ್ರದರ್ಶನ ನೀಡುತ್ತದೆ ಎಂಬುದರ ಬಗ್ಗೆ ತನಗೆ ವಿಶ್ವಾಸವಿಲ್ಲ. ಇಂಡಿಯನ್ ಪ್ರೀಮಿಯರ್ ಲೀಗ್‌ನಲ್ಲಿ LSG ಇನ್ನೂ ಯುವ ತಂಡವಾಗಿದೆ. ಆದ್ದರಿಂದ, ಅವರು ಸ್ಪಷ್ಟವಾದ ಆಟದ ಶೈಲಿ ಅಥವಾ ಗುರುತನ್ನು ಸಂಪೂರ್ಣವಾಗಿ ಅಭಿವೃದ್ಧಿಪಡಿಸಿಕೊಂಡಿಲ್ಲ. ಗುಜರಾತ್ ಟೈಟಾನ್ಸ್ ಕೂಡ ಹೊಸ ತಂಡವಾದರೂ, ಅವರು ಕ್ರಮೇಣ ಹೆಚ್ಚು ಸ್ಥಿರವಾಗುತ್ತಿದ್ದಾರೆ ಮತ್ತು ಅವರು ಆಡುವ ರೀತಿಯಲ್ಲಿ ಗುರುತಿಸಲ್ಪಡುತ್ತಿದ್ದಾರೆ. ಅವರು ಒಂದು ಪಂದ್ಯ ಸೋತರೂ ಸಹ, ಜನರಿಗೆ ಅವರ ಕಾರ್ಯತಂತ್ರ ಮತ್ತು ಸಾಮರ್ಥ್ಯದ ಬಗ್ಗೆ ಇನ್ನೂ ಒಂದು ಕಲ್ಪನೆ ಇದೆ' ಎಂದರು.

'ತಂಡವು ಕೆಲವು ಪ್ರಮುಖ ಆಟಗಾರರ ಮೇಲೆ (ಸಾಮಾನ್ಯವಾಗಿ ಅಗ್ರ ಕ್ರಮಾಂಕದಲ್ಲಿರುವವರು) ಹೆಚ್ಚು ಅವಲಂಬಿತವಾಗಿದೆ. ಅವರ ಪ್ರಮುಖ ಶಕ್ತಿ ಅವರ ಬೌಲಿಂಗ್ ದಾಳಿಯಾಗಿದೆ. ವಿಶೇಷವಾಗಿ ಮಧ್ಯಮ ಓವರ್‌ಗಳಲ್ಲಿ ಅನುಭವಿ ಸ್ಪಿನ್ ಬೌಲರ್‌ಗಳು ಇದ್ದಾರೆ. ಇದಕ್ಕೆ ವ್ಯತಿರಿಕ್ತವಾಗಿ, ಲಕ್ನೋ ಸೂಪರ್ ಜೈಂಟ್ಸ್ ತಂಡವು ಸ್ಪಷ್ಟವಾದ, ಸ್ಥಿರವಾದ ಆಟದ ಶೈಲಿಯನ್ನು ಹೊಂದಿಲ್ಲ ಅಥವಾ ತಂಡವಾಗಿ ಯಾವುದೇ ಐಡೆಂಟಿಟಿ ಹೊಂದಿಲ್ಲ' ಎಂದು ಅವರು ESPNCricinfoಗೆ ತಿಳಿಸಿದರು.

Lucknow Super Giants
'ರಿಷಭ್ ಪಂತ್ ಮೇಲೆ ನನಗೆ ವಿಶ್ವಾಸವಿದೆ': ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ LSG ಸೋಲಿಗೆ ಸಂಜೀವ್ ಗೋಯೆಂಕಾ ಪ್ರತಿಕ್ರಿಯೆ!

'ತಂಡವಾಗಿ ಆಡುವ ಬದಲು ಎಲ್‌ಎಸ್‌ಜಿ ವೈಯಕ್ತಿಕ ಪ್ರತಿಭೆಯ ಮೇಲೆ ಅವಲಂಬಿತವಾಗಿದೆ ಎಂಬುದು ಪುನರಾವರ್ತಿತ ಸಮಸ್ಯೆಯಾಗಿದೆ. ನೀವು ಅವರನ್ನು ಗಮನಿಸಿದರೆ, ಮಾರ್ಕ್ ವುಡ್ ಕೆಲವೊಮ್ಮೆ ಬಂದು ಐದು ವಿಕೆಟ್‌ಗಳನ್ನು ಪಡೆಯುವಂತೆಯೇ ನೀವು ಹಠಾತ್ ಪ್ರದರ್ಶನವನ್ನು ನಿರೀಕ್ಷಿಸುತ್ತೀರಿ. ಯಾವುದೇ ಆಟಗಾರನೊಬ್ಬನ ವೈಯಕ್ತಿಕ ಅದ್ಭುತ ಪ್ರದರ್ಶನಗಳು ನಿಮ್ಮ ತಂಡವನ್ನು ಮುನ್ನಡೆಸಲೆಂದು ನೀವು ಬಯಸುತ್ತೀರಿ. ಲಕ್ನೋ ತಂಡ ಯಾವಾಗಲೂ ಹಾಗೆಯೇ ಬಯಸುತ್ತದೆ' ಎಂದರು.

'ತಂಡದ ಸಮತೋಲನವು ಸಾಕಷ್ಟು ಕೆಟ್ಟದಾಗಿದೆ. ಏಳು ಬ್ಯಾಟ್ಸ್‌ಮನ್‌ಗಳು ಮತ್ತು ನಾಲ್ಕು ಬೌಲರ್‌ಗಳು ಇದ್ದಾರೆ. ತಂಡದ ಆಯ್ಕೆಯು ಸಮತೋಲನದಿಂದ ಕೂಡಿಲ್ಲ ಮತ್ತು ಇತ್ತೀಚಿನ ಫಾರ್ಮ್ ಕುಸಿದ ಕಾರಣಕ್ಕೆ ಭರವಸೆಯ ಆಟಗಾರನನ್ನು ಕೈಬಿಡುವ ಮೂಲಕ ಅವರು ಪ್ರಶ್ನಾರ್ಹ ನಿರ್ಧಾರ ತೆಗೆದುಕೊಂಡಿರಬಹುದು' ಎಂದು ತಿಳಿಸಿದರು.

'ದೇಶೀಯ ಕ್ರಿಕೆಟ್‌ನಲ್ಲಿ ಉತ್ತಮ ಪ್ರದರ್ಶನ ನೀಡಿಲ್ಲ ಎಂಬ ಕಾರಣಕ್ಕೆ ನೀವು ರವಿ ಬಿಷ್ಣೋಯ್ ಅವರನ್ನು ಬಿಡುಗಡೆ ಮಾಡಿದ್ದೀರಿ. ದಿಗ್ವೇಶ್ ರಾಠಿ ಮೇಲೆ ನಂಬಿಕೆ ಇಟ್ಟಿದ್ದೀರಿ. ಆದರೆ, 'ನೀವು ನಮ್ಮ ನಂಬರ್ ಒನ್ ಸ್ಪಿನ್ನರ್ ಎಂದು ಹೇಳಿದ್ದೀರಿ. ಆದರೂ, ನೀವು ಅವರನ್ನು ಮೊದಲ ಪಂದ್ಯದಲ್ಲಿ ಆಡಿಸಿಲ್ಲ'' ಎಂದು ಅವರು ಗಮನಿಸಿದರು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com