ಗುರುಗ್ರಾಮದಲ್ಲಿ ವಿಸ್ಕಿ ಪ್ರಚಾರ ಮಾಡಿದ ಐಪಿಎಲ್ ಕಮೆಂಟೇಟರ್ ಕೆವಿನ್ ಪೀಟರ್ಸನ್; ವಿಡಿಯೋ ವೈರಲ್

ಭಾರತದಲ್ಲಿ ಡ್ರಾಮ್ ಬೆಲ್ ವಿಸ್ಕಿಯ ಯಶಸ್ಸಿಗೆ ಅದರ ಗುಣಮಟ್ಟ ಮತ್ತು ಅದರ ಹಿಂದಿನ ತಂಡದ ಕಠಿಣ ಪರಿಶ್ರಮ ಕಾರಣ ಎಂದು ಕೆವಿನ್ ಪೀಟರ್ಸನ್ ಹೇಳುತ್ತಾರೆ.
Kevin Pietersen launched Dram Bell in India in 2024 in association with Ardent Alcobev.
ಕೆವಿನ್ ಪೀಟರ್ಸನ್ 2024ರಲ್ಲಿ ಆರ್ಡೆಂಟ್ ಅಲ್ಕೋಬೆವ್ ಸಹಯೋಗದೊಂದಿಗೆ ಭಾರತದಲ್ಲಿ ಡ್ರಾಮ್ ಬೆಲ್ ಅನ್ನು ಪ್ರಾರಂಭಿಸಿದರು.
Updated on

ಇಂಗ್ಲೆಂಡ್‌ನ ಮಾಜಿ ನಾಯಕ ಕೆವಿನ್ ಪೀಟರ್ಸನ್ ತಮ್ಮ ವಿಸ್ಕಿ ಬ್ರ್ಯಾಂಡ್ ಡ್ರಾಮ್ ಬೆಲ್ ಅನ್ನು ಪ್ರಚಾರ ಮಾಡಲು ಗುರುಗ್ರಾಮ್‌ನ ಮದ್ಯದಂಗಡಿಯಲ್ಲಿ ಕಾಣಿಸಿಕೊಂಡರು. ಸದ್ಯ, ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ನ ಕಮೆಂಟೇಟರ್ ಆಗಿ ಕಾರ್ಯನಿರ್ವಹಿಸುತ್ತಿರುವ ಪೀಟರ್ಸನ್, ಆರ್ಡೆಂಟ್ ಅಲ್ಕೋಬೆವ್ ಅವರ ಸಹಯೋಗದೊಂದಿಗೆ 2024ರಲ್ಲಿ ಭಾರತದಲ್ಲಿ ಡ್ರಾಮ್ ಬೆಲ್ ಅನ್ನು ಪ್ರಾರಂಭಿಸಿದರು. ಸ್ಕಾಟ್ಲೆಂಡ್‌ನಿಂದ ಆಮದು ಮಾಡಿಕೊಂಡು, ಬಾಟಲ್ ಮಾಡಲಾಗುವ ಡ್ರಾಮ್ ಬೆಲ್, ಭಾರತೀಯ ಮಾರುಕಟ್ಟೆಯಲ್ಲಿ ಎರಡು ರೂಪಾಂತರಗಳಲ್ಲಿ ಲಭ್ಯವಿದೆ. ಒಂದು ಪ್ರೀಮಿಯಂ ಮತ್ತು 5 ವರ್ಷ ಹಳೆಯ ರಿಸರ್ವ್. ಐಪಿಎಲ್ ಕಮೆಂಟೇಟರ್ ಆಗಿ ತಮ್ಮ ಸೇವೆಯ ನಡುವೆ, ಪೀಟರ್ಸನ್ ಇತ್ತೀಚೆಗೆ ಗುರುಗ್ರಾಮ್‌ನ ಸೆಕ್ಟರ್ 26ರಲ್ಲಿರುವ ಡಿಸ್ಕವರಿ ಲಿಕ್ಕರ್ ವೇರ್‌ಹೌಸ್‌ನಲ್ಲಿ ಕಾಣಿಸಿಕೊಂಡರು.

ವೈರಲ್ ಆಗಿರುವ ವಿಡಿಯೋದಲ್ಲಿ, ಪೀಟರ್ಸನ್ ಅವರನ್ನು ಅಂಗಡಿಯ ಸಿಬ್ಬಂದಿ ಸ್ವಾಗತಿಸಿದರು. ಅವರು ಐದು ವರ್ಷ ಹಳೆಯ ರೂಪಾಂತರದ ಬಾಟಲಿ ಹಿಡಿದು ನೇರವಾಗಿ ಕುಡಿಯುವಂತೆ ನಟಿಸುತ್ತಿರುವುದು ಕಂಡುಬಂದಿದೆ.

ಡ್ರಾಮ್ ಬೆಲ್ ವಿಸ್ಕಿಯ ಹೊರತಾಗಿ, ಪೀಟರ್ಸನ್ ಜಿನ್ ಸೋಕ್ ಪ್ರೀಮಿಯಂ ಡ್ರೈ ಜಿನ್ ಮತ್ತು ಗ್ಲಾಸಿರ್ ವೋಡ್ಕಾದಂತಹ ಮದ್ಯದ ಬ್ರಾಂಡ್‌ಗಳಲ್ಲಿಯೂ ಹೂಡಿಕೆ ಮಾಡಿದ್ದಾರೆ. ಭಾರತದಲ್ಲಿ ಡ್ರಾಮ್ ಬೆಲ್ ವಿಸ್ಕಿಯ ಯಶಸ್ಸಿಗೆ ಅದರ ಗುಣಮಟ್ಟ ಮತ್ತು ಅದರ ಹಿಂದಿನ ತಂಡದ ಕಠಿಣ ಪರಿಶ್ರಮ ಕಾರಣ ಎಂದು ಕೆವಿನ್ ಪೀಟರ್ಸನ್ ಹೇಳುತ್ತಾರೆ.

'ಒಂದು ಬ್ರ್ಯಾಂಡ್ ಅನ್ನು ರಾಯಭಾರಿಯಾಗಿ ಪ್ರಚಾರ ಮಾಡುವುದು ವ್ಯವಹಾರದ ಒಂದು ಭಾಗವನ್ನು ಹೊಂದಿರುವುದಕ್ಕಿಂತ ಭಿನ್ನವಾಗಿದೆ. ಆಟದಲ್ಲಿ ಪ್ರಮುಖ ಪಾತ್ರ ಹೊಂದಿರುವಾಗ, ನೀವು ಹೆಚ್ಚು ಕಾಳಜಿ ವಹಿಸುತ್ತೀರಿ, ಹೆಚ್ಚು ಸಮಯ ಮತ್ತು ಶ್ರಮವನ್ನು ಹೂಡಿಕೆ ಮಾಡುತ್ತೀರಿ' ಎಂದು ಪೀಟರ್ಸನ್ ಕಳೆದ ವರ್ಷ NDTVಗೆ ನೀಡಿದ ಸಂದರ್ಶನದಲ್ಲಿ ಹೇಳಿದ್ದರು.

ಪೀಟರ್ಸನ್ 2018ರ ಮಾರ್ಚ್‌ನಲ್ಲಿ ಕ್ರಿಕೆಟ್ ವೃತ್ತಿಜೀವನಕ್ಕೆ ನಿವೃತ್ತಿ ಘೋಷಿಸಿದರು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com