IPL 2026: 'ಫೀಲ್ಡಿಂಗ್‌ಗೆ ಅಡ್ಡಿಪಡಿಸಿದ್ದಕ್ಕೆ ಔಟ್: ಕೆಕೆಆರ್ ಆಕ್ರೋಶ, ಬೌಂಡರಿ ಲೈನ್ ನಲ್ಲಿ ರಘುವಂಶಿ ಮಾಡಿದ್ದೇನು? VIDEO ನೋಡಿ...

ಪ್ರಿನ್ಸ್ ಯಾದವ್ ಎಸೆದ ಎಸೆತವನ್ನು ರಘುವಂಶಿ ಬಾರಿಸಿ ರನ್ ಕದಿಯಲು ಮುಂದಾದರು. ಆದರೆ ನಾನ್-ಸ್ಟ್ರೈಕರ್ ಎಂಡ್‌ನಲ್ಲಿದ್ದ ಕ್ಯಾಮೆರಾನ್ ಗ್ರೀನ್ ರನ್ ಓಡಲು ನಿರಾಕರಿಸಿದರು. ತಕ್ಷಣ ಅಂಗ್‌ ಕ್ರಿಶ್ ರಘುವಂಶಿ ಮತ್ತೆ ಸ್ಟ್ರೈಕರ್ ಎಂಡ್‌ಗೆ ಮರಳಲು ಯತ್ನಿಸಿದರು
Raghuvanshi, Abhishek Sharma
ರಘುವಂಶಿ, ಅಭಿಷೇಕ್ ನಾಯ್ಯರ್
Updated on

ಲಖನೌ: ಲಖನೌದಲ್ಲಿ ಭಾನುವಾರ ನಡೆದ ಕೋಲ್ಕತ್ತಾ ನೈಟ್ ರೈಡರ್ಸ್ ಮತ್ತು ಲಕ್ನೋ ಸೂಪರ್ ಜೈಂಟ್ಸ್ ನಡುವಿನ ಪಂದ್ಯ ವಿವಾದಕ್ಕೆ ಕಾರಣವಾಯಿತು. ಫೀಲ್ಡಿಂಗ್‌ಗೆ ಅಡ್ಡಿಪಡಿಸಿದ್ದಕ್ಕೆ ಅಂಗ್‌ಕ್ರಿಶ್ ರಘುವಂಶಿಯನ್ನು ಔಟ್ ಮಾಡಲಾಯಿತು.ಪಂದ್ಯದ 5ನೇ ಓವರ್‌ನ ಕೊನೆಯ ಎಸೆತದಲ್ಲಿ ಈ ಘಟನೆ ನಡೆಯಿತು.

ಪ್ರಿನ್ಸ್ ಯಾದವ್ ಎಸೆದ ಎಸೆತವನ್ನು ರಘುವಂಶಿ ಬಾರಿಸಿ ರನ್ ಕದಿಯಲು ಮುಂದಾದರು. ಆದರೆ ನಾನ್-ಸ್ಟ್ರೈಕರ್ ಎಂಡ್‌ನಲ್ಲಿದ್ದ ಕ್ಯಾಮೆರಾನ್ ಗ್ರೀನ್ ರನ್ ಓಡಲು ನಿರಾಕರಿಸಿದರು. ತಕ್ಷಣ ಅಂಗ್‌ ಕ್ರಿಶ್ ರಘುವಂಶಿ ಮತ್ತೆ ಸ್ಟ್ರೈಕರ್ ಎಂಡ್‌ಗೆ ಮರಳಲು ಯತ್ನಿಸಿದರು.

ಈ ವೇಳೆ ಮೊಹಮ್ಮದ್ ಶಮಿ ಎಸೆದ ಚೆಂಡು ರಘುವಂಶಿ ಅವರ ಪ್ಯಾಡ್‌ಗೆ ತಗುಲಿತು. ಲಖನೌ ತಂಡ ಔಟ್‌ಗಾಗಿ ಮನವಿ ಮಾಡಿದಾಗ, ಟಿವಿ ಅಂಪೈರ್ ಇದನ್ನು ಪರಿಶೀಲಿಸಿ 'ಬ್ಯಾಟರ್ ಉದ್ದೇಶಪೂರ್ವಕವಾಗಿ ಫೀಲ್ಡಿಂಗ್‌ಗೆ ಅಡ್ಡಿಪಡಿಸಿದ್ದಾರೆ' ಎಂದು ಔಟ್ ನೀಡಿದರು. ಇದೇ ವಿವಾದಕ್ಕೆ ಕಾರವಾಗಿದೆ.

Raghuvanshi, Abhishek Sharma
IPL 2026: LSG ವಿರುದ್ಧ ಸೂಪರ್​ ಓವರ್​ನಲ್ಲಿ ಗೆದ್ದು ಬೀಗಿದ KKR

ಬಳಿಕ ಅಸಮಾಧಾನಗೊಂಡು ಕ್ರೀಸ್ ನಿಂದ ಹೊರಬಂದ ಅಂಗ್ ಕ್ರಿಶ್ , ಬೌಂಡರಿ ಲೈನ್ ನಲ್ಲಿ ಕುಶನ್ ನನ್ನು ಬ್ಯಾಟ್ ನಿಂದ ಬಡಿದರು. ಕೆಕೆಆರ್ ಕೋಚ್‌ಗಳಾದ ಶೇನ್ ವಾಟ್ಸನ್ ಮತ್ತು ಅಭಿಷೇಕ್ ನಾಯರ್ ಈ ತೀರ್ಪಿನ ಬಗ್ಗೆ ಬೌಂಡರಿ ಲೈನ್‌ನಲ್ಲಿ ಪಂದ್ಯದ ಅಧಿಕಾರಿಗಳ ಜೊತೆ ಸುದೀರ್ಘ ವಾದಕ್ಕಿಳಿದ ದೃಶ್ಯಗಳು ಕಂಡುಬಂದವು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com