

ಗಾಲೆ: ಭಾರತ ಮತ್ತು ಶ್ರೀಲಂಕಾ ನಡುವಿನ ಪ್ರಥಮ ಟೆಸ್ಟ್ ಪಂದ್ಯದ ಮೊದಲ ದಿನದಾಟದ ವೇಳೆ ಕನ್ನಡಿಗ ಕೆ.ಎಲ್. ರಾಹುಲ್ ಹೊಡೆತಕ್ಕೆ ಶ್ರೀಲಂಕಾದ ಆಟಗಾರನೊಬ್ಬ ಆಸ್ಪತ್ರೆ ಸೇರುವಂತಾಗಿದೆ.
ಹೌದು. ಭಾರತದ ಇನ್ನಿಂಗ್ಸ್‌ನಲ್ಲಿ ಭಾರತದ ಬ್ಯಾಟ್ಸ್‌ಮನ್ ಕೆ.ಎಲ್. ರಾಹುಲ್ ಪ್ರಬಲವಾದ ಸ್ವೀಪ್ ಶಾಟ್ ಹೊಡೆದಾಗ ಈ ಘಟನೆ ನಡೆಯಿತು.
ಚೆಂಡು ನೇರವಾಗಿ ಶಾರ್ಟ್-ಲೆಗ್ ಫೀಲ್ಡರ್‌ಗೆ ಬಡಿದು ಶ್ರೀಲಂಕಾದ ಆಟಗಾರ ಗಾಯಗೊಂಡರು. ಫೀಲ್ಡರ್ ಗೆ ಬಾಲ್ ಬಡಿದಿರುವುದನ್ನು ಅರಿತ ಕೆಎಲ್ ರಾಹುಲ್ ಕೂಡಾ ಅವರ ಬಳಿಗೆ ಬಂದು ವಿಚಾರಿಸಿದರು.
ತಕ್ಷಣವೇ ಕ್ರೀಡಾಂಗಣದಕ್ಕೆ ಧಾವಿಸಿದ ವೈದ್ಯಕೀಯ ತರಬೇತುದಾರರು ಪ್ರಾಥಮಿಕ ಚಿಕಿತ್ಸೆ ನೀಡಿದರು. ಬಳಿಕ ಅವರನ್ನು ಹೆಚ್ಚಿನ ತಪಾಸಣೆಗಾಗಿ ಮೈದಾನದಿಂದ ಹೊರಗೆ ಕರೆದೊಯ್ಯಲು ನಿರ್ಧರಿಸಲಾಯಿತು. ಕೊಲಂಬೊದ ಆಸ್ಪತ್ರೆಗೆ ಕರೆದೊಯ್ದು, ತಪಾಸಣೆ ಮತ್ತು ಸ್ಕ್ಯಾನ್ ಮಾಡಲಾಗಿದೆ ಎಂದು ವರದಿಗಳು ತಿಳಿಸಿವೆ.
ವೈದ್ಯಕೀಯ ಸಿಬ್ಬಂದಿ ಮಧ್ಯಪ್ರವೇಶಿಸಿದಾಗ ಶ್ರೀಲಂಕಾ ಆಟಗಾರರೊಂದಿಗೆ ಬೆಂಬಲ ನೀಡಿದರು. ಆಟಗಾರನ ಸದ್ಯದ ಆರೋಗ್ಯದ ಕುರಿತು ಇನ್ನೂ ಮಾಹಿತಿ ತಿಳಿದುಬರಬೇಕಾಗಿದೆ.