'ಗೊಂದಲದ ಸುಳಿಗೆ ಸಿಲುಕಿದ್ದೆ': 'ಅಷ್ಟೇನೂ' ವಿಷಾದವಿಲ್ಲ; IPL ನಿಂದ ನಿಷೇಧಕ್ಕೊಳಗಾದ ಬಗ್ಗೆ ಇಂಗ್ಲೆಂಡ್ ನಾಯಕ ಹ್ಯಾರಿ ಬ್ರೂಕ್

ಆ ಟೀಕೆಗಳಲ್ಲಿನ ಸಕಾರಾತ್ಮಕ ಅಂಶದತ್ತ ಗಮನಹರಿಸಿದೆ ಎಂದ ಇಂಗ್ಲೆಂಡ್ ತಂಡದ ನಾಯಕ, 'ಜನರು ನನ್ನ ಆಟವನ್ನು ಸೂಕ್ಷ್ಮವಾಗಿ ಗಮನಿಸಿ ಅದರ ಬಗ್ಗೆ ಅಭಿಪ್ರಾಯ ವ್ಯಕ್ತಪಡಿಸುವುದನ್ನು ನಾನು ಒಂದು ರೀತಿಯ ಮೆಚ್ಚುಗೆಯೆಂದೇ ಭಾವಿಸುತ್ತೇನೆ' ಎಂದರು.
Harry Brook
ಹ್ಯಾರಿ ಬ್ರೂಕ್
Updated on

ಸನ್‌ರೈಸರ್ಸ್ ಹೈದರಾಬಾದ್ (SRH) ತಂಡದ ಪರವಾಗಿ ಆಡಿದ ತಮ್ಮ ಏಕೈಕ ಹಾಗೂ ನಿರೀಕ್ಷಿತ ಮಟ್ಟದಲ್ಲಿರದ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ಆವೃತ್ತಿಯಲ್ಲಿ ತಾವು ಎದುರಿಸಿದ ಟೀಕೆಗಳ ಕುರಿತು ಇಂಗ್ಲೆಂಡ್‌ನ ವೈಟ್-ಬಾಲ್ ತಂಡದ ನಾಯಕ ಹ್ಯಾರಿ ಬ್ರೂಕ್ ಪ್ರತಿಕ್ರಿಯಿಸಿದ್ದಾರೆ. ಕೋಲ್ಕತ್ತಾ ನೈಟ್ ರೈಡರ್ಸ್ (KKR) ವಿರುದ್ಧ ಶತಕ ಸಿಡಿಸುವ ಮೊದಲು ಆಡಿದ ಇನಿಂಗ್ಸ್‌ಗಳಿಗಾಗಿ ಟೀಕೆಗೆ ಗುರಿಯಾಗಿದ್ದೆ; ತಮ್ಮನ್ನು ಕಟುವಾಗಿ ಟೀಕಿಸುತ್ತಿದ್ದವರ ಬಾಯಿ ಮುಚ್ಚಿಸಲು ಸಾಧ್ಯವಾಗಿದ್ದಕ್ಕೆ ನನಗೆ ಸಂತೋಷವಾಯಿತು ಎಂದು ಹೇಳಿದ್ದಾರೆ.

2023ರ ಆವೃತ್ತಿಯಲ್ಲಿ ಶತಕವೊಂದನ್ನು ಸಿಡಿಸಿದ್ದರೂ, ಬ್ರೂಕ್ ಒಟ್ಟಾರೆಯಾಗಿ ಕೇವಲ 190 ರನ್‌ಗಳನ್ನು ಮಾತ್ರ ಗಳಿಸಲು ಶಕ್ತರಾದರು. ಆದಾಗ್ಯೂ, ಆ ನಂತರ ಅವರ ಆಟದ ಫಾರ್ಮ್ ಕುಸಿಯಿತು ಮತ್ತು ಅವರು ತೀವ್ರ ಒತ್ತಡದ ಸನ್ನಿವೇಶವನ್ನು ಎದುರಿಸಬೇಕಾಯಿತು.

ವಿಶ್ವದ ಶ್ರೀಮಂತ ಲೀಗ್‌ನಲ್ಲಿ ತಾನು ಭಾಗವಹಿಸಿದ್ದ ಏಕೈಕ ಸೀಸನ್ ಬಗ್ಗೆ ಬ್ರೂಕ್ ಇದೀಗ ಮಾತನಾಡಿದ್ದಾರೆ. 'ಐಪಿಎಲ್‌ನಲ್ಲಿದ್ದಾಗ, ತೀವ್ರ ಪರಿಶೀಲನೆ ಮತ್ತು ಸಾಮಾಜಿಕ ಜಾಲತಾಣಗಳ ವಿಷಯದಲ್ಲಿ ನಾನು ಒಂದು ರೀತಿಯ ಜಟಿಲವಾದ ಪರಿಸ್ಥಿತಿಯಲ್ಲಿ ಸಿಲುಕಿಕೊಂಡಿದ್ದೆ' ಎಂದು ಬ್ರೂಕ್ 'ಬಿಬಿಸಿ ಸ್ಪೋರ್ಟ್'ಗೆ ತಿಳಿಸಿದರು.

'ಇದು ಮೈದಾನದ ಒಳಗಾಗಲಿ ಅಥವಾ ಹೊರಗಾಗಲಿ, ಒಬ್ಬ ವ್ಯಕ್ತಿಯಾಗಿ ನನಗೆ ಯಾವುದೇ ರೀತಿಯಲ್ಲಿ ಸಹಾಯ ಮಾಡಲಿಲ್ಲ. ಹಾಗಾಗಿ, ನಾನು ಸಾಮಾಜಿಕ ಜಾಲತಾಣಗಳಿಂದ ಸಂಪೂರ್ಣವಾಗಿ ದೂರವಿರುವುದಿಲ್ಲ, ಆದರೆ ಅದನ್ನೇ ಹುಡುಕಿಕೊಂಡು ಹೋಗಿ ನೋಡುವುದೂ ಇಲ್ಲ ಎಂದು ನಿರ್ಧರಿಸಿದೆ' ಎಂದರು.

Harry Brook
'ಇದರ ಬಗ್ಗೆ ಅಸೂಯೆ ಪಡುವವರಿಗೆ': ಕೋಟ್ಯಂತರ ರೂಪಾಯಿ ಐಪಿಎಲ್ ಟ್ರೇಡ್ ಬಗ್ಗೆ BCCIಗೆ ಸುನೀಲ್ ಗವಾಸ್ಕರ್ ಸಂದೇಶ

ಆ ಟೀಕೆಗಳಲ್ಲಿನ ಸಕಾರಾತ್ಮಕ ಅಂಶದತ್ತ ಗಮನಹರಿಸಿದೆ ಎಂದ ಇಂಗ್ಲೆಂಡ್ ತಂಡದ ನಾಯಕ, 'ಜನರು ನನ್ನ ಆಟವನ್ನು ಸೂಕ್ಷ್ಮವಾಗಿ ಗಮನಿಸಿ ಅದರ ಬಗ್ಗೆ ಅಭಿಪ್ರಾಯ ವ್ಯಕ್ತಪಡಿಸುವುದನ್ನು ನಾನು ಒಂದು ರೀತಿಯ ಮೆಚ್ಚುಗೆಯೆಂದೇ ಭಾವಿಸುತ್ತೇನೆ. ಜನರು ನನ್ನನ್ನು ಟೀಕಿಸುವುದನ್ನು ನೋಡುವುದು ಖಂಡಿತವಾಗಿಯೂ ಆಹ್ಲಾದಕರವಲ್ಲ ಎಂಬುದು ನನಗೆ ಗೊತ್ತು; ಆದರೆ, ಇದರರ್ಥ ಜನರಿಗೆ ನನ್ನ ಬಗ್ಗೆ ಕಾಳಜಿಯಿದೆ ಮತ್ತು ಅಂದು ನಾನು ನೀಡಿದ ಪ್ರದರ್ಶನಕ್ಕಿಂತ ಉತ್ತಮವಾಗಿ ಆಡುವ ಸಾಮರ್ಥ್ಯ ನನಗಿದೆ ಎಂದು ಅವರು ಭಾವಿಸುತ್ತಾರೆ' ಎಂದು ಅವರು ಹೇಳಿದರು.

ಭಾರತದ ಈ ಪ್ರತಿಷ್ಠಿತ ಹಾಗೂ ಶ್ರೀಮಂತ ಲೀಗ್‌ನಿಂದ ಹಿಂದೆ ಸರಿದಿರುವ ಕಾರಣ ಏನೆಂದರೆ, 27 ವರ್ಷದ ಈ ಆಟಗಾರನ ಮೇಲೆ 2027ರವರೆಗೆ ಐಪಿಎಲ್ (IPL) ನಿಷೇಧ ಹೇರಲಾಗಿದೆ. ಹೀಗಾಗಿ, ಅವರು 2028ರ ಮೆಗಾ ಹರಾಜಿನ ಮೂಲಕ ಮತ್ತೆ ಲೀಗ್‌ಗೆ ಮರಳಲು ಸಾಧ್ಯವಿದೆ.

2023ರ ನಂತರ ಎಸ್‌ಆರ್‌ಎಚ್ (SRH) ತಂಡವು ಅವರನ್ನು ಕೈಬಿಟ್ಟಿತ್ತು ಮತ್ತು 2024ರಲ್ಲಿ ಡೆಲ್ಲಿ ಕ್ಯಾಪಿಟಲ್ಸ್ (DC) ಇವರನ್ನು 4 ಕೋಟಿ ರೂ.ಗೆ ಖರೀದಿಸಿತ್ತು. ಆದರೆ, ತಮ್ಮ ಅಜ್ಜಿ ನಿಧನರಾದ ಕಾರಣ ಅವರು 2024ರ ಸೀಸನ್‌ನಿಂದ ಹಿಂದೆ ಸರಿದಿದ್ದರು. 2025ರ ಮೆಗಾ ಹರಾಜಿನಲ್ಲಿ ಡಿಸಿ (DC) ತಂಡವು ಇವರನ್ನು 6.25 ಕೋಟಿ ರೂ.ಗೆ ಖರೀದಿಸಿತ್ತಾದರೂ, ಅಂತರರಾಷ್ಟ್ರೀಯ ಪಂದ್ಯಗಳ ಬದ್ಧತೆಗೆ ಆದ್ಯತೆ ನೀಡಲು ಅವರು ಮತ್ತೆ ಹಿಂದೆ ಸರಿದರು; ಇದರ ಪರಿಣಾಮವಾಗಿ ಅವರಿಗೆ ಎರಡು ವರ್ಷಗಳ ನಿಷೇಧ ವಿಧಿಸಲಾಯಿತು.

ಲೀಗ್‌ನಿಂದ ಹೊರಗಿಡಲ್ಪಟ್ಟಿರುವ ಕುರಿತು ಮಾತನಾಡಿದ ಬ್ರೂಕ್, ಆ ಬಗ್ಗೆ ತಮಗೆ 'ಅಷ್ಟೇನೂ' ವಿಷಾದವಿಲ್ಲ ಎಂದು ಹೇಳಿದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com