ಭಾರತದ ಸಾರ್ವಕಾಲಿಕ ಶ್ರೇಷ್ಠ ಕ್ರಿಕೆಟಿಗ! ಆರ್. ಅಶ್ವಿನ್ ಆಯ್ಕೆ ಮಾಡಿದ್ದು ಯಾರನ್ನ ಗೊತ್ತಾ?

ESPNcricinfo ಕ್ರಿಕ್‌ಇನ್ಫೋ ಟಾಕ್ ಶೋನಲ್ಲಿ ಮಾತನಾಡಿದ ಅಶ್ವಿನ್, ವಿರಾಟ್ ಕೊಹ್ಲಿ, ಎಂ.ಎಸ್. ಧೋನಿ, ಸುನಿಲ್ ಗವಾಸ್ಕರ್, ಜಸ್ಪ್ರೀತ್ ಬುಮ್ರಾ, ವಿರೇಂದ್ರ ಸೆಹ್ವಾಗ್, ರವೀಂದ್ರ ಜಡೇಜಾ ಅವರಂತಹ ದಿಗ್ಗಜರನ್ನು ಹೋಲಿಕೆ ಮಾಡಿ ಅಂತಿಮವಾಗಿ ಸಚಿನ್ ಹೆಸರನ್ನು ಫೈನಲ್ ಮಾಡಿದರು.
Ashwin, Kohli
ಆರ್. ಅಶ್ವಿನ್, ವಿರಾಟ್ ಕೊಹ್ಲಿ
Updated on

ಚೆನ್ನೈ: ಭಾರತೀಯ ಕ್ರಿಕೆಟ್ ಇತಿಹಾಸದಲ್ಲಿ ಸಾರ್ವಕಾಲಿಕ ಶ್ರೇಷ್ಠ ಆಟಗಾರ ಯಾರು? ಎಂಬ ಪ್ರಶ್ನೆಗೆ ಟೀಂ ಇಂಡಿಯಾದ ಮಾಜಿ ಸ್ಪಿನ್ನರ್ ರವಿಚಂದ್ರನ್ ಅಶ್ವಿನ್ ಪ್ರತಿಕ್ರಿಯಿಸಿದ್ದು, ಬ್ಯಾಟಿಂಗ್ ದಂತಕಥೆ ಸಚಿನ್ ತೆಂಡೂಲ್ಕರ್ ಅವರನ್ನು ಆಯ್ಕೆ ಮಾಡಿದ್ದಾರೆ.

ESPNcricinfo ಕ್ರಿಕ್‌ಇನ್ಫೋ ಟಾಕ್ ಶೋನಲ್ಲಿ ಮಾತನಾಡಿದ ಅಶ್ವಿನ್, ವಿರಾಟ್ ಕೊಹ್ಲಿ, ಎಂ.ಎಸ್. ಧೋನಿ, ಸುನಿಲ್ ಗವಾಸ್ಕರ್, ಜಸ್ಪ್ರೀತ್ ಬುಮ್ರಾ, ವಿರೇಂದ್ರ ಸೆಹ್ವಾಗ್, ರವೀಂದ್ರ ಜಡೇಜಾ ಅವರಂತಹ ದಿಗ್ಗಜರನ್ನು ಹೋಲಿಕೆ ಮಾಡಿ ಅಂತಿಮವಾಗಿ ಸಚಿನ್ ಹೆಸರನ್ನು ಫೈನಲ್ ಮಾಡಿದರು.

ಕೊಹ್ಲಿಗಿಂತ ಬುಮ್ರಾನೇ ಗ್ರೇಟ್ ! ಇನ್ನೂ ಬೇರೆ ಬೇರೆ ತಲೆಮಾರಿನ ಆಟಗಾರರನ್ನು ಹೋಲಿಸಿ ಶ್ರೇಷ್ಠರನ್ನು ಆಯ್ಕೆ ಮಾಡುವ ಪ್ರಕ್ರಿಯೆ ಬಹಳ ಕುತೂಹಲಕಾರಿಯಾಗಿತ್ತು. ವಿರಾಟ್ ಕೊಹ್ಲಿ ಮತ್ತು ಜಸ್ಪ್ರೀತ್ ಬುಮ್ರಾ ನಡುವೆ ಆಯ್ಕೆ ಮಾಡುವಾಗ, ಅಶ್ವಿನ್ ಕೊಹ್ಲಿಯನ್ನು ಕೈಬಿಟ್ಟು ಬುಮ್ರಾರನ್ನು ಆಯ್ಕೆ ಮಾಡಿದರು. ನಾನೊಬ್ಬ ಬೌಲರ್ ಆಗಿರೋದ್ರಿಂದ ಬುಮ್ರಾರನ್ನು ಆಯ್ದುಕೊಂಡಿರುವುದಾಗಿ ಅಶ್ವಿನ್ ಹೇಳಿದರು.

ರವೀಂದ್ರ ಜಡೇಜಾ ಮತ್ತು ಮಾಜಿ ನಾಯಕ ಎಂ.ಎಸ್. ಧೋನಿ ನಡುವಿನ ಹೋಲಿಕೆಯಲ್ಲಿ ಅಶ್ವಿನ್, ಧೋನಿಯನ್ನು ಆಯ್ಕೆ ಮಾಡಿದರು. ಆದರೆ, ವಿರೇಂದ್ರ ಸೆಹ್ವಾಗ್ ಮತ್ತು ಧೋನಿ ನಡುವೆ ಆಯ್ಕೆ ಬಂದಾಗ, ಧೋನಿಯನ್ನು ಬಿಟ್ಟು ಸೆಹ್ವಾಗ್‌ ಅವರನ್ನು ಆಯ್ದುಕೊಂಡರು.

ಇದಕ್ಕೂ ಮುನ್ನ ಅವರು ಸುನಿಲ್ ಗವಾಸ್ಕರ್ ಅವರನ್ನೂ ಬದಿಗಿಟ್ಟು ಸೆಹ್ವಾಗ್ ಅವರನ್ನೇ ಉತ್ತಮ ಆಟಗಾರ ಎಂದು ಆಯ್ಕೆ ಮಾಡಿದ್ದರು. ಸೌರವ್ ಗಂಗೂಲಿ ಮತ್ತು ತಮ್ಮ ನಡುವಿನ ಹೋಲಿಕೆಯಲ್ಲಿ, ಅಶ್ವಿನ್ ಮಾಜಿ ನಾಯಕ ಗಂಗೂಲಿಯನ್ನೇ ಆರಿಸಿಕೊಂಡರು.

Ashwin, Kohli
'ರವೀಂದ್ರ ಜಡೇಜಾ ಈಗ ಆಕ್ರಮಣಕಾರಿ ಸ್ಪಿನ್ನರ್ ಆಗಿ ಉಳಿದಿಲ್ಲ': ಸ್ಫೋಟಕ ವಿಚಾರ ಹಂಚಿಕೊಂಡ ಆರ್ ಅಶ್ವಿನ್

ಅಂತಿಮ ನಾಲ್ವರ ಪಟ್ಟಿಯಿಂದ ಇಬ್ಬರನ್ನು ಆಯ್ಕೆ ಮಾಡುವಾಗ, ವಿರೇಂದ್ರ ಸೆಹ್ವಾಗ್ ಅವರನ್ನು ಕೈಬಿಟ್ಟು ಸಚಿನ್ ತೆಂಡೂಲ್ಕರ್ ಅವರನ್ನು ಉಳಿಸಿಕೊಂಡರು. ಹಾಗೆಯೇ, ಜಸ್ಪ್ರೀತ್ ಬುಮ್ರಾ ಬದಲಿಗೆ 1983ರ ವಿಶ್ವಕಪ್ ವಿಜೇತ ನಾಯಕ ಕಪಿಲ್ ದೇವ್ ಅವರನ್ನು ಆಯ್ಕೆ ಮಾಡಿದರು. ಕೊನೆಯಲ್ಲಿ, ಕಪಿಲ್ ದೇವ್ ಮತ್ತು ಸಚಿನ್ ತೆಂಡೂಲ್ಕರ್ ನಡುವೆ ಆಯ್ಕೆ ಮಾಡುವಾಗ, ತಮ್ಮ ವೈಯಕ್ತಿಕ ಇಷ್ಟವನ್ನು ಪರಿಗಣಿಸಿ ಸಚಿನ್ ಅವರೇ ಸಾರ್ವಕಾಲಿಕ ಶ್ರೇಷ್ಠ ಆಟಗಾರ ಎಂದು ಅಶ್ವಿನ್ ಘೋಷಿಸಿದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com