

ಕೊಯಂಬತ್ತೂರು: ಕೊಯಂಬತ್ತೂರಿನಲ್ಲಿ ನಡೆದ ಸೆಲಬ್ರಿಟಿ ಕ್ರಿಕೆಟ್ ಲೀಗ್ (ಸಿಸಿಎಲ್ 2026) ನಲ್ಲಿ ಬೆಂಗಾಲ್ ಟೈಗರ್ಸ್ ವಿರುದ್ಧ ಕರ್ನಾಟಕ ಬುಲ್ಡೋಸರ್ಸ್ ತಂಡ ಭರ್ಜರಿ ಗೆಲುವು ಸಾಧಿಸಿದೆ.
ಬೆಂಗಾಲ್ ಟೈಗರ್ಸ್ ನೀಡಿದ್ದ 130 ರನ್ ಗಳ ಗುರಿಯನ್ನು 16.4 ಓವರ್ ಗಳಲ್ಲಿ ಕರ್ನಾಟಕ ತಂಡ ತಲುಪಿದ್ದು 4 ವಿಕೆಟ್ ನಷ್ಟಕ್ಕೆ 130 ರನ್ ಗಳಿಸಿ ಗೆಲುವನ್ನು ತನ್ನದಾಗಿಸಿಕೊಂಡಿತು.
ಟಾಸ್ ಗೆದ್ದು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡ ಬೆಂಗಾಲ್ ಟೈಗರ್ಸ್ ಪರ ಜಾಯ್ ಮುಖರ್ಜಿ ಮತ್ತು ಉದಯ್ ಸಿಂಗ್ ಆರಂಭಿಕರಾಗಿ ಕಣಕ್ಕಿಳಿದರು. ಆದರೆ ಪಂದ್ಯದ ಎರಡನೇ ಓವರ್‌ನಲ್ಲಿಯೇ ಸುನೀಲ್ ಬೆಂಗಾಲ್‌ಗೆ ಆಘಾತ ನೀಡಿದರು. ಉದಯ್ ಸಿಂಗ್ ಅವರನ್ನು ಪೆವಿಲಿಯನ್‌ಗೆ ಕಳುಹಿಸಿದರು.
ನಂತರ ಕ್ರೀಸ್ ಗೆ ಬಂದ ಜ್ಯಾಮಿ ತಂಡಕ್ಕೆ ಸ್ವಲ್ಪ ಚೇತರಿಕೆ ನೀಡಿದರು. ಆದರೆ ಜೆಕೆ ಜ್ಯಾಮಿಯನ್ನು ಕ್ಲೀನ್ ಬೋಲ್ಡ್ ಮಾಡಿ ಬೆಂಗಾಲ್ ತಂಡಕ್ಕೆ ಅಘಾತ ನೀಡಿದರು. ಈ ಬಳಿಕ ಬೆಂಗಾಲ್ ತಂಡ ಬ್ಯಾಟಿಂಗ್ ಲೈನ್ ನಲ್ಲಿ ಕ್ಷೀಣಿಸಿತು. ನಿಗದಿತ 20 ಓವರ್‌ಗಳಲ್ಲಿ ಬೆಂಗಾಲ್ ತಂಡ 129 ರನ್‌ಗಳಿಗೆ ಸರ್ವಪತನ ಕಂಡಿತು.
Advertisement