PSL Auction: ಪಾಕಿಸ್ತಾನ ಸೂಪರ್ ಲೀಗ್ ಹರಾಜು ಪ್ರಕ್ರಿಯೆಯಿಂದ ಅಫ್ಘಾನಿಸ್ತಾನ ಆಟಗಾರರು ಹಿಂದೆ ಸರಿದಿದ್ದೇಕೆ?

ಕಳೆದ ವರ್ಷದ ಅಂತ್ಯದಲ್ಲಿ ಪಾಕಿಸ್ತಾನ ಸೇನೆಯು ಉಗ್ರರನ್ನು ಗುರಿಯಾಗಿಸುವ ನೆಪದಲ್ಲಿ ಅಫ್ಘಾನಿಸ್ತಾನದ ಆಯ್ದ ಪ್ರದೇಶಗಳಲ್ಲಿ ವೈಮಾನಿಕ ದಾಳಿ ನಡೆಸಿದ ನಂತರ ಉಭಯ ರಾಷ್ಟ್ರಗಳ ನಡುವಿನ ಸಂಬಂಧದಲ್ಲಿ ಬಿರುಕು ಮೂಡಿದೆ.
Pakistan Super League
ಪಾಕಿಸ್ತಾನ ಸೂಪರ್ ಲೀಗ್
Updated on

ಪಾಕಿಸ್ತಾನ ಸೂಪರ್ ಲೀಗ್ (ಪಿಎಸ್‌ಎಲ್) ನ 11ನೇ ಆವೃತ್ತಿಗೆ ಮುಂಚಿತವಾಗಿ ನಡೆದ ಮೊದಲನೇ ಆಟಗಾರರ ಹರಾಜಿನಿಂದ ಅಫ್ಘಾನಿಸ್ತಾನದ ಆಟಗಾರರು ತಮ್ಮ ಹೆಸರುಗಳನ್ನು ಹಿಂತೆಗೆದುಕೊಂಡಿದ್ದಾರೆ.

ಬುಧವಾರ ಲಾಹೋರ್‌ನಲ್ಲಿ ನಡೆದ ಹರಾಜಿಗೆ ಮುಜೀಬ್ ಉರ್ ರೆಹಮಾನ್, ಸೆಡ್ಡಿಕುಲ್ಲಾ ಅಟಲ್, ಮೊಹಮ್ಮದ್ ನಬಿ, ವಕಾರ್ ಸಲಾಂಖೈಲ್, ಫಜಲ್ ಹಕ್ ಫಾರೂಕಿ ಮುಂತಾದ ಆಟಗಾರರು ನೋಂದಾಯಿಸಿಕೊಂಡಿದ್ದಾರೆ ಎಂದು ಫ್ರಾಂಚೈಸಿ ಮಾಲೀಕರು ಆರಂಭದಲ್ಲಿ ದೃಢಪಡಿಸಿದ್ದರು. ಆದರೆ, ಪೇಶಾವರ್ ಝಲ್ಮಿ ತಂಡವು ನೇರವಾಗಿ ಅಫ್ಘಾನಿಸ್ತಾನದ ಆರಂಭಿಕ ಆಟಗಾರ ರಹಮಾನುಲ್ಲ ಗುರ್ಬಾಜ್ ಅವರನ್ನು ಖರೀದಿಸಿದ್ದಕ್ಕಾಗಿ ಟೀಕೆಗಳನ್ನು ಎದುರಿಸಿದ ನಂತರ ಅವರು ತಮ್ಮ ಹೆಸರುಗಳನ್ನು ಹಿಂತೆಗೆದುಕೊಂಡಿದ್ದಾರೆ.

ಆದಾಗ್ಯೂ, ಪಿಎಸ್‌ಎಲ್‌ನ ಸಿಇಒ ಸಲ್ಮಾನ್ ನಾಸೀರ್, 'ಅಫ್ಘಾನಿಸ್ತಾನದ ಕೆಲವು ಆಟಗಾರರು ಪಟ್ಟಿಯಲ್ಲಿದ್ದಾರೆ. ಆದರೆ, ಯಾವುದೇ ಫ್ರಾಂಚೈಸಿ ಅವರನ್ನು ಖರೀದಿಸಲಿಲ್ಲ. ಆದರೆ, ಎರಡೂ ರಾಷ್ಟ್ರಗಳ ನಡುವಿನ ಹದಗೆಟ್ಟ ಸಂಬಂಧವು ಹರಾಜಿನಲ್ಲಿ ಪ್ರತಿಫಲಿಸುತ್ತದೆ' ಎಂದು ಹೇಳಿದ್ದಾರೆ.

'ಪಾಕಿಸ್ತಾನ ಮತ್ತು ಅಫ್ಘಾನಿಸ್ತಾನ ನಡುವಿನ ಸಂಬಂಧ ಹದಗೆಟ್ಟ ಕಾರಣ ಪೇಶಾವರ್ ಝಲ್ಮಿ ತಂಡವು ರಹಮಾನುಲ್ಲಾ ಗುರ್ಬಾಜ್ ಅವರನ್ನು ಖರೀದಿಸಿದ ನಂತರ ತೀವ್ರ ಟೀಕೆ ವ್ಯಕ್ತವಾಗಿತ್ತು. ಬಳಿಕ ಗುರ್ಬಾಜ್ ಅವರೇ ಪಿಎಸ್ಎಲ್‌ನಿಂದ ಹಿಂದೆ ಸರಿದಿದ್ದರು. ನಂತರ, ಇತರ ಆಟಗಾರರು ಸಹ ಇದೇ ರೀತಿಯ ಟೀಕೆ ಅಥವಾ ವಿವಾದದಿಂದ ಪಾರಾಗಲು ದೂರ ಸರಿಯಲು ನಿರ್ಧರಿಸಿದರು' ಎಂದು ಅವರು ಹೇಳಿದರು.

Pakistan Super League
PSL Auction: ಪಾಕಿಸ್ತಾನ ಸೂಪರ್ ಲೀಗ್ ಇತಿಹಾಸದಲ್ಲಿಯೇ 'ಅತ್ಯಂತ ದುಬಾರಿ ಆಟಗಾರ'ನಾದ ಆಸ್ಟ್ರೇಲಿಯಾದ ಸ್ಟೀವ್ ಸ್ಮಿತ್!

ಕಳೆದ ವರ್ಷದ ಅಂತ್ಯದಲ್ಲಿ ಪಾಕಿಸ್ತಾನ ಸೇನೆಯು ಉಗ್ರರನ್ನು ಗುರಿಯಾಗಿಸುವ ನೆಪದಲ್ಲಿ ಅಫ್ಘಾನಿಸ್ತಾನದ ಆಯ್ದ ಪ್ರದೇಶಗಳಲ್ಲಿ ವೈಮಾನಿಕ ದಾಳಿ ನಡೆಸಿದ ನಂತರ ಉಭಯ ರಾಷ್ಟ್ರಗಳ ನಡುವಿನ ಸಂಬಂಧದಲ್ಲಿ ಬಿರುಕು ಮೂಡಿದೆ.

ಹಲವಾರು ಅಫ್ಘಾನಿಸ್ತಾನ ಆಟಗಾರರು ಸಾಮಾಜಿಕ ಮಾಧ್ಯಮದಲ್ಲಿ ಪಾಕಿಸ್ತಾನ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದರು. ಇದಕ್ಕೆ ಪಾಕಿಸ್ತಾನದ ಹ್ಯಾಂಡಲ್‌ಗಳಿಂದಲೂ ಪ್ರತಿಕ್ರಿಯೆ ವ್ಯಕ್ತವಾಗಿತ್ತು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com