T20 World Cup 2026: ಹ್ಯಾಂಡ್ ಶೇಕ್ ವಿವಾದ, ಟೀಂ ಇಂಡಿಯಾ ವಿರುದ್ದ ಸಂಜಯ್ ಮಂಜ್ರೇಕರ್ ಕಿಡಿ! ನೆಟ್ಟಿಗರ ತರಾಟೆ

ಈ ಮಧ್ಯೆ ಭಾರತ ಹ್ಯಾಂಡ್ ಶೇಕ್ ಮಾಡದಿರಲು ನಿರ್ಧರಿಸಿದೆ ಎಂದು ವರದಿ ಮಾಡಿದೆ. ಈ ಬೆನ್ನಲ್ಲೆ ಭಾರತ ತಂಡದ ಮಾಜಿ ಆಟಗಾರ ಸಂಜಯ್ ಮಂಜ್ರೇಕರ್ ನೋ ಹ್ಯಾಂಡ್‌ ಶೇಕ್ ಅಭಿಯಾನದ ಬಗ್ಗೆ ಕಿಡಿಕಾರಿದ್ದಾರೆ.
Sanjay Manjrekar
ಸಂಜಯ್ ಮಂಜ್ರೇಕರ್
Updated on

ಕೊಲಂಬೊ: ಇಲ್ಲಿನ ಪ್ರೇಮದಾಸ ಕ್ರೀಡಾಂಗಣದಲ್ಲಿ ಇಂದು ನಡೆಯಲಿರುವ ಟಿ20 ವಿಶ್ವಕಪ್‌ನಲ್ಲಿ ಭಾರತ - ಪಾಕಿಸ್ತಾನ ಪಂದ್ಯಕ್ಕೆ ಕ್ಷಣಗಣನೆ ಆರಂಭವಾಗಿದ್ದು, ಉಭಯ ತಂಡಗಳ ನಾಯಕರು ಹ್ಯಾಂಡ್‌ ಶೇಕ್ ಮಾಡುತ್ತಾರೆಯೋ ಇಲ್ಲವೋ ಎಂಬ ಕುತೂಹಲ ಅಭಿಮಾನಿಗಳಲ್ಲಿ ಮನೆ ಮಾಡಿದೆ.

ಈ ಮಧ್ಯೆ ಭಾರತ ಹ್ಯಾಂಡ್ ಶೇಕ್ ಮಾಡದಿರಲು ನಿರ್ಧರಿಸಿದೆ ಎಂದು ವರದಿ ಮಾಡಿದೆ. ಈ ಬೆನ್ನಲ್ಲೆ ಭಾರತ ತಂಡದ ಮಾಜಿ ಆಟಗಾರ ಸಂಜಯ್ ಮಂಜ್ರೇಕರ್ ನೋ ಹ್ಯಾಂಡ್‌ ಶೇಕ್ ಅಭಿಯಾನದ ಬಗ್ಗೆ ಕಿಡಿಕಾರಿದ್ದಾರೆ.

ಈ ಕುರಿತು ಸಾಮಾಜಿಕ ಜಾಲತಾಣ ಎಕ್ಸ್ ನಲ್ಲಿ ಟ್ವೀಟ್‌ ಮಾಡಿರುವ ಸಂಜಯ್ ಮಂಜ್ರೇಕರ್, ಭಾರತ ಆರಂಭಿಸಿರುವ ಈ ನೋ ಹ್ಯಾಂಡ್‌ ಶೇಕ್ ಎಂಬುದು ತುಂಬಾ ಮೂರ್ಖತನದಿಂದ ಕೂಡಿದ ಕೆಲಸ. ನಮ್ಮಂತಹ ರಾಷ್ಟ್ರಕ್ಕೆ ಇದು ಯೋಗ್ಯ ಅಲ್ಲ. ಆಟದ ಉತ್ಸಾಹದಲ್ಲಿ ಸರಿಯಾಗಿ ಆಟವಾಡಿ ಅಥವಾ ಆಟವಾಡಲೇಬೇಡಿ " ಎಂದು ಕಿಡಿಕಾರಿದ್ದಾರೆ.

Sanjay Manjrekar
T20 World Cup 2026: ಪಾಕ್ ವಿರುದ್ಧದ ಪಂದ್ಯದಲ್ಲಿ 'ಹ್ಯಾಂಡ್ ಶೇಕ್' ಮಾಡದಿರಲು ಟೀಂ ಇಂಡಿಯಾ ನಿರ್ಧಾರ!

ಸಂಜಯ್ ಮಂಜ್ರೇಕರ್ ಟ್ವೀಟ್‌ ವಿರುದ್ಧ ನೆಟ್ಟಿಗರು ತರಾಟೆಗೆ ತೆಗೆದುಕೊಂಡಿದ್ದಾರೆ.ಈತ ಯಾವಾಗಿನಿಂದ ಪಾಕಿಸ್ತಾನಕ್ಕೆ ಬೆಂಬಲ ಕೊಡಲು ಆರಂಭಿಸಿದ", "ಭಯೋತ್ಪಾದಕರ ಜತೆ ಕೈಕುಲುಕುವುದಕ್ಕೆ ನಮಗೇನು ಬಿದ್ದಿಕೆಟ್ಟಿದೆಯಾ " ಎಂದು ಪ್ರಶ್ನೆ ಮಾಡುತ್ತಿದ್ದಾರೆ. ಪಾಕಿಸ್ತಾನ ತಂಡದ ಜತೆ ನಿಂತಿರುವ ಫೋಟೋಗಳು, ವ್ಯಂಗ್ಯ ಚಿತ್ರಗಳನ್ನು ರಚಿಸಿ ಆಕ್ರೋಶ ಹೊರ ಹಾಕುತ್ತಿದ್ದಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com