

ನವದೆಹಲಿ: ಜನವರಿ 11 ರಿಂದ ಆರಂಭವಾಗಲಿರುವ ನ್ಯೂಜಿಲೆಂಡ್ ವಿರುದ್ಧದ ಏಕದಿನ ಸರಣಿಗೆ ಟೀಂ ಇಂಡಿಯಾವನ್ನು ಪ್ರಕಟಿಸಲಾಗಿದೆ. ಶುಭ್ ಮನ್ ಗಿಲ್ ತಂಡವನ್ನು ಮುನ್ನಡೆಸಲಿದ್ದು, 13 ಆಟಗಾರರನ್ನೊಳಗೊಂಡ ತಂಡವನ್ನು ಶನಿವಾರ ಪ್ರಕಟಿಸಲಾಗಿದೆ.
ಶ್ರೇಯಸ್ ಅಯ್ಯರ್ ಹಾಗೂ ರಿಷಭ್ ಪಂತ್ ತಂಡಕ್ಕೆ ಮರಳಿದ್ದಾರೆ. ಫಿಟ್ ನೆಸ್ ಸಮಸ್ಯೆಯಿಂದಾಗಿ ಅವರ ಬಗ್ಗೆ ಅನುಮಾನವಿತ್ತು. ಆದರೆ. ಬಿಸಿಸಿಐನ ಸೆಂಟರ್ ಆಫ್ ಎಕ್ಸಲೆನ್ಸ್ ಆ ಸಮಸ್ಯೆಯನ್ನು ಪರಿಹರಿಸಿದ ನಂತರ ಅವರನ್ನು ತಂಡಕ್ಕೆ ಸೇರಿಸಿಕೊಳ್ಳಲಾಗಿದೆ.
ಈ ಮಧ್ಯೆ ಹಾರ್ದಿಕ್ ಪಾಂಡ್ಯ ತಂಡದಲ್ಲಿ ಸ್ಥಾನ ಪಡೆದಿಲ್ಲ. ಟಿ20 ವಿಶ್ವಕಪ್ ಸಮೀಪಿಸುತ್ತಿರುವುದರಿಂದ ಆಟಗಾರರ ಫಿಟ್ನೆಸ್ ಮತ್ತು ದೀರ್ಘಾವಧಿಯ ಸಿದ್ಧತೆಗೆ ಆಯ್ಕೆದಾರರು ಆದ್ಯತೆ ನೀಡಿದಂತೆ ಕಾಣುತ್ತಿದೆ.
ಜನವರಿ 11 ರಿಂದ 31ರವರೆಗೂ ದೇಶದ ವಿವಿಧೆಡೆ ಪಂದ್ಯಗಳು ನಡೆಯಲಿವೆ. ನ್ಯೂಜಿಲೆಂಡ್ ವಿರುದ್ಧ ಮೂರು ಏಕದಿನ ಅಂತಾರಾಷ್ಟ್ರೀಯ ಪಂದ್ಯಗಳು ಹಾಗೂ ಐದು ಟಿ-20 ಪಂದ್ಯಗಳನ್ನು ಭಾರತ ಆಡಲಿದೆ. ಜನವರಿ 11 ರಂದು ವಡೋದರಾದ BCA ಕ್ರೀಡಾಂಗಣದಲ್ಲಿ ಏಕದಿನ ಸರಣಿ ಆರಂಭವಾಗಲಿದೆ. ಇಂದೋರ್ ನಲ್ಲಿ ಮೂರನೇ ಹಾಗೂ ಅಂತಿಮ ಪಂದ್ಯ ಜನವರಿ 18 ರಂದು ನಿಗದಿಯಾಗಿದೆ.
ಏಕದಿನ ಪಂದ್ಯದ ನಂತರ ಜನವರಿ 21 ರಂದು ನಾಗ್ಪುರದಲ್ಲಿ ಟಿ-20 ಸರಣಿ ಆರಂಭವಾಗಲಿದೆ. ಬಳಿಕ ಜನವರಿ 23 ರಂದು ರಾಯಪುರದಲ್ಲಿ, ಜ.25 ರಂದು ಗುವಾಹಟಿಯಲ್ಲಿ ಮತ್ತು ಜ.28 ರಂದು ವಿಶಾಖಪಟ್ಟಣಂನಲ್ಲಿ ಜ.31 ರಂದು ತಿರುವನಂತಪುರಂನಲ್ಲಿ ಫೈನಲ್ ಟಿ-20 ಪಂದ್ಯ ನಡೆಯಲಿದೆ.
ಭಾರತ ಏಕದಿನ ತಂಡ ಇಂತಿದೆ. ಶುಭ್ ಮನ್ ಗಿಲ್ (ನಾಯಕ) ರೋಹಿತ್ ಶರ್ಮಾ, ವಿರಾಟ್ ಕೊಹ್ಲಿ, ಕೆಎಲ್ ರಾಹುಲ್ (ವಿಕೆಟ್ ಕೀಪರ್) ಶ್ರೇಯಸ್ ಅಯ್ಯರ್ (ವಿಕೆಟ್ ಕೀಪರ್) ವಾಷಿಂಗ್ಟನ್ ಸುಂದರ್, ರವೀಂದ್ರ ಜಡೇಜ, ಮೊಹಮ್ಮದ್ ಸಿರಾಜ್, ಹರ್ಷಿತ್ ರಾಣಾ, ಪ್ರಸಿದ್ಧ್ ಕೃಷ್ಣ, ಕುಲದೀಪ್ ಯಾದವ್, ರಿಷಭ್ ಪಂತ್ (ವಿಕೆಟ್ ಕೀಪರ್) ನಿತೀಶ್ ಕುಮಾರ್ ರೆಡ್ಡಿ, ಅರ್ಷದೀಪ್ ಸಿಂಗ್, ಯಶಸ್ವಿ ಜೈಸ್ವಾಲ್.
Advertisement