

ವಿರಾಟ್ ಕೊಹ್ಲಿಯ ಟೆಸ್ಟ್ ನಿವೃತ್ತಿ ಬಗ್ಗೆ ಭಾರತದ ಮಾಜಿ ಬ್ಯಾಟರ್ ರಾಬಿನ್ ಉತ್ತಪ್ಪ ದೊಡ್ಡ ಸಂದೇಶವನ್ನು ಕಳುಹಿಸಿದ್ದಾರೆ. ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿರುವ ಪೋಸ್ಟ್‌ನಲ್ಲಿ, ಕೊಹ್ಲಿ ತಮ್ಮ ಟೆಸ್ಟ್ ನಿವೃತ್ತಿಯನ್ನು ಹಿಂಪಡೆಯಬೇಕು ಎಂದು ಹೇಳಿದ್ದಾರೆ.
2025 ರಲ್ಲಿ ಇಂಗ್ಲೆಂಡ್ ಸರಣಿಗೆ ಸ್ವಲ್ಪ ಮುಂಚಿತವಾಗಿ ಕೊಹ್ಲಿ ಟೆಸ್ಟ್ ಕ್ರಿಕೆಟ್ ಗೆ ವಿದಾಯ ಹೇಳಿದ್ದರು. ಈಗ ಏಕದಿನ ಕ್ರಿಕೆಟ್ ನಲ್ಲಿ ಮಾತ್ರ ಆಡುತ್ತಿದ್ದಾರೆ. ಮುಂಬರುವ ನ್ಯೂಜಿಲೆಂಡ್ ವಿರುದ್ಧದ ಸರಣಿಯಲ್ಲಿ ಭಾಗವಹಿಸಲಿದ್ದಾರೆ.
ಆದಾಗ್ಯೂ, ಮೊದಲ ODI ಪಂದ್ಯದ ಮೊದಲು ನೆಟ್‌ನಲ್ಲಿ ಬೆವರು ಹರಿಸುತ್ತಿರುವ ಕೊಹ್ಲಿ ಚಿತ್ರವನ್ನು ಉತ್ತಪ್ಪ ಪೋಸ್ಟ್ ಮಾಡಿದ್ದಾರೆ.
"Them eyes tell u a story, ಖಂಡಿತವಾಗಿ ಇದು ಅವರ ಟೆಸ್ಟ್ ನಿವೃತ್ತಿಯನ್ನು ರದ್ದುಗೊಳಿಸುವ ಸಮಯ. ಅವರನ್ನು ಮತ್ತೆ ಟೆಸ್ಟ್ ಕ್ರಿಕೆಟ್‌ಗೆ ನೋಡಲು ಇಷ್ಟಪಡುತ್ತೇನೆ ಎಂದು ಬರೆದುಕೊಂಡಿದ್ದಾರೆ.
ಭಾನುವಾರ ನಡೆಯಲಿರುವ ಮೂರು ಪಂದ್ಯಗಳ ಏಕದಿನ ಸರಣಿಯ ಮೊದಲ ಪಂದ್ಯದಲ್ಲಿ ವಿರಾಟ್ ಕೊಹ್ಲಿ ಮತ್ತು ರೋಹಿತ್ ಶರ್ಮಾ ಫಾರ್ಮ್ ಬಗ್ಗೆ ಎಲ್ಲರ ಚಿತ್ತ ನೆಟ್ಟಿದೆ. ಟಿ-20 ವಿಶ್ವಕಪ್ ಗೆ ಒಂದು ತಿಂಗಳಿಗೂ ಕಡಿಮೆ ದಿನ ಉಳಿದಿದ್ದರೂ ಕೊಹ್ಲಿ ಹಾಗೂ ರೋಹಿತ್ ಈಗ ಮೂರು ಏಕದಿನ ಪಂದ್ಯಗಳತ್ತ ಗಮನ ನೀಡಿದ್ದಾರೆ.
Advertisement