

2026ರ ಸೆಲೆಬ್ರೆಟಿ ಕ್ರಿಕೆಟ್ ಲೀಗ್ (CCL)ನ ಮೊದಲ ಪಂದ್ಯ ವೈಜಾಗ್‌ನಲ್ಲಿ ನಡೆದಿದ್ದು ಪಂಜಾಬ್ ತಂಡವನ್ನು ಸೋಲಿಸಿ ಕರ್ನಾಟಕ ಬುಲ್ಡೋಜರ್ಸ್ ತಂಡ ಟೂರ್ನಿಯಲ್ಲಿ ಶುಭಾರಂಭ ಮಾಡಿದೆ. ಫಸ್ಟ್ ಮ್ಯಾಚ್‌ನಲ್ಲಿ ಮೊದಲು ಬ್ಯಾಟಿಂಗ್ ಆರಂಭಿಸಿದ ಕರ್ನಾಟಕ ಬುಲ್ಡೋಜರ್ ಉತ್ತಮ ಆರಂಭವನ್ನೇ ಪಡೆದಿತ್ತು. ಇನ್ನು ಡಾರ್ಲಿಂಗ್ ಕೃಷ್ಣ ವಿಕೆಟ್ ಕೀಳುವ ಮೂಲಕ ಪಂಜಾಬ್ ಟಕ್ಕರ್ ಕೊಟ್ಟರು.
ಪಂಜಾಬ್ ಬೌಲರ್‌ಗಳನ್ನು ಚೆಂಡಾಡಿದ ಕರ್ಣ ಆರ್ಯನ್ ಕೇವಲ 33 ಎಸೆತಗಳಲ್ಲಿ 83 ರನ್‌ಗಳನ್ನು ಬಾರಿಸಿದರು. ಇನ್ನು ಪ್ರದೀಪ್ 13 ಎಸೆತಗಳಲ್ಲಿ 17 ರನ್ ಗಳಿಸಿ ಔಟಾದರು. ಆದರೆ ಕಿಚ್ಚ ಸುದೀಪ್ ಶೂನ್ಯಕ್ಕೆ ಔಟಾದರು. ಅಂತಿಮವಾಗಿ ಕರ್ನಾಟಕ ಬುಲ್ಡೋಜರ್ಸ್ 170 ರನ್‌ಗಳನ್ನು ಕಲೆ ಹಾಕಿ, ಪಂಜಾಬ್ ದಿ ಶೇರ್ ತಂಡಕ್ಕೆ 171 ರನ್‌ಗಳ ಗುರಿಯನ್ನು ನೀಡಿತ್ತು.
ಈ ಗುರಿ ಬೆನ್ನಟ್ಟಿದ ಪಂಜಾಬ್ ಡಿ ಶೇರ್ ತಂಡ 139 ರನ್‌ಗಳಿಗೆ ಆಲೌಟ್ ಆಯಿತು. ಕರ್ನಾಟಕ ಬುಲ್ಡೋಜರ್ಸ್ 31 ರನ್‌ಗಳ ಗೆಲುವಿನೊಂದಿಗೆ CCL 2026 ಅಭಿಯಾನವನ್ನು ಪ್ರಾರಂಭಿಸಿದೆ.
Advertisement