ಮುಂಬೈ ಇಂಡಿಯನ್ಸ್ (MI) ವಿರುದ್ಧದ ಪಂದ್ಯದಲ್ಲಿ ಯುಪಿ ವಾರಿಯರ್ಸ್ ತಂಡವು 2026ರ ಮಹಿಳಾ ಪ್ರೀಮಿಯರ್ ಲೀಗ್ (WPL) ಆವೃತ್ತಿಯಲ್ಲಿ ಮೊದಲ ಗೆಲುವು ಸಾಧಿಸಿತು. ಎದುರಾಳಿಗಳನ್ನು 161-5 ರನ್‌ಗಳಿಗೆ ಸೀಮಿತಗೊಳಿಸಿ 11 ಎಸೆತಗಳು ಬಾಕಿ ಇರುವಾಗಲೇ ಗೆಲುವಿನ ಗುರಿ ತಲುಪಿತು. ಬೌಲರ್‌ಗಳು ಶಿಸ್ತುಬದ್ಧ ಪ್ರದರ್ಶನದೊಂದಿಗೆ ತಂಡಕ್ಕೆ ವೇದಿಕೆ ಕಲ್ಪಿಸಿದರು. ಇನಿಂಗ್ಸ್ ಉದ್ದಕ್ಕೂ ಬ್ಯಾಟರ್‌ಗಳ ಮೇಲೆ ಒತ್ತಡ ಹೇರಿದರು ಮತ್ತು ಮುಂಬೈ ಇಂಡಿಯನ್ಸ್ ಅನ್ನು ನಿಯಂತ್ರಣದಲ್ಲಿಟ್ಟರು. ಹರ್ಲೀನ್ ಡಿಯೋಲ್ 39 ಎಸೆತಗಳಲ್ಲಿ 64 ರನ್ ಗಳಿಸಿ ಉತ್ತಮ ಬ್ಯಾಟಿಂಗ್ ಪ್ರದರ್ಶನ ನೀಡಿದರು. ಹರ್ಲೀನ್, ನಿಯಮಿತವಾಗಿ ಬೌಂಡರಿಗಳನ್ನು ಬಾರಿಸುತ್ತಾ ತಂಡಕ್ಕೆ ನೆರವಾದರು.
ತಂಡದ ಮೊದಲ ಗೆಲುವಿನ ಬಗ್ಗೆ ಮಾತನಾಡಿದ ಹರ್ಲೀನ್ ಡಿಯೋಲ್, 'ಪಂದ್ಯಾವಳಿಯಲ್ಲಿ ತಂಡವು ಮೊದಲ ಗೆಲುವು ಸಾಧಿಸಿದ್ದು ನಿಜಕ್ಕೂ ಖುಷಿ ತಂದಿದೆ ಮತ್ತು ತಂಡಕ್ಕಾಗಿ ಉತ್ತಮ ಪ್ರದರ್ಶನ ನೀಡಿದ್ದು ಸಂತೋಷವಾಗಿದೆ. ಹಿಂದಿನ ಪಂದ್ಯದಲ್ಲೂ ನಾನು ಚೆನ್ನಾಗಿ ಬ್ಯಾಟಿಂಗ್ ಮಾಡುತ್ತಿದ್ದೇನೆ ಎಂದು ನನಗೆ ಅನಿಸಿತು. ಆದ್ದರಿಂದ, ತಯಾರಿಯ ವಿಷಯದಲ್ಲಿ ಏನೂ ಹೆಚ್ಚೇನೂ ಬದಲಾಗಲಿಲ್ಲ. ಕೆಲವೊಮ್ಮೆ ಅದು ದಿನದಾಟದಲ್ಲಿಯೇ ಹೊರಬರುತ್ತದೆ ಮತ್ತು ನೀವು ಕೆಲವು ಬೌಂಡರಿಗಳನ್ನು ಕಾಣಬಹುದು. ಮೊದಲ ಇನಿಂಗ್ಸ್‌ನಲ್ಲಿ ರನ್ ಗಳಿಸುವುದು ಸ್ವಲ್ಪ ಕಠಿಣವಾಗಿತ್ತು. ಆದರೆ, ನಂತರ ವಿಕೆಟ್ ಉತ್ತಮವಾಯಿತು ಮತ್ತು ನಾನು ತಂಡಕ್ಕೆ ಸಾಧ್ಯವಾದಷ್ಟು ಉತ್ತಮ ರೀತಿಯಲ್ಲಿ ಕೊಡುಗೆ ನೀಡುವತ್ತ ಗಮನಹರಿಸಿದೆ' ಎಂದರು.
ಹರ್ಲೀನ್ ಡಿಯೋಲ್ ಬಗ್ಗೆ ಮಾತನಾಡಿದ ಮುಖ್ಯ ಕೋಚ್ ಅಭಿಷೇಕ್ ನಾಯರ್, 'ಹರ್ಲೀನ್ ಅವರು ಮೊದಲು ತಂಡಕ್ಕೆ ಆದ್ಯತೆ ನೀಡುತ್ತಾರೆ ಮತ್ತು ವೈಯಕ್ತಿಕ ಸಾಧನೆಗಳು ನಂತರ ಬರುತ್ತವೆ. ಈ ಮನೋಭಾವವು ತಂಡದೊಳಗೆ ಬಲವಾಗಿದೆ. ತನ್ನ ಆಟದಲ್ಲಿ ಕೌಶಲ್ಯ ಮತ್ತು ಶಕ್ತಿಯನ್ನು ಸಂಯೋಜಿಸಲು ನಾನು ಯಾವಾಗಲೂ ಆಕೆಯನ್ನು ಪ್ರೋತ್ಸಾಹಿಸಿದ್ದೇನೆ. ಇದು ಅವರಿಗೆ ಮತ್ತು ನನ್ನ ಮನಸ್ಥಿತಿಯು ಸಾಮಾನ್ಯವಾಗಿ ಭಾರತೀಯ ಕ್ರಿಕೆಟಿಗರಿಗೆ ಉನ್ನತ ಮಟ್ಟದ ಪ್ರದರ್ಶನ ನೀಡಲು ಸಹಾಯ ಮಾಡುವ ಗುರಿಯನ್ನು ಹೊಂದಿದೆ. ಈ ಆವೃತ್ತಿಯಲ್ಲಿ ಮೊದಲು ಹರ್ಮನ್‌ಪ್ರೀತ್ ಅರ್ಧಶತಕ ಗಳಿಸಿದ್ದರು. ಇದೀಗ ಹರ್ಲೀನ್ ಅರ್ಧಶಕತ ಗಳಿಸಿದ ಎರಡನೇ ಭಾರತೀಯ ಬ್ಯಾಟ್ಸ್‌ಮನ್ ಆಗಿದ್ದಾರೆ ಮತ್ತು ಅದನ್ನೇ ನಾವು ನೋಡಲು ಬಯಸಿದ್ದೇವೆ' ಎಂದರು.
ಡ್ರೆಸ್ಸಿಂಗ್ ಕೋಣೆಯ ವಾತಾವರಣದ ಕುರಿತು ಮಾತನಾಡಿದ ಅಭಿಷೇಕ್ ನಾಯರ್, 'ನಾವು ಗೆದ್ದರೂ ಸೋತರೂ ನಮ್ಮ ತಂಡದ ಸಂಸ್ಕೃತಿ ಬದಲಾಗುವುದಿಲ್ಲ. ನಾವು ಕೆಲವು ಕಠಿಣ ಪಂದ್ಯಗಳನ್ನು ಎದುರಿಸಿದ್ದೇವೆ. ಆದರೆ, ಡ್ರೆಸ್ಸಿಂಗ್ ಕೋಣೆಯಲ್ಲಿ ಹೆಚ್ಚಿನ ಶಕ್ತಿಯನ್ನು ಕಾಯ್ದುಕೊಳ್ಳುವ ಕ್ರಾಂತಿ ಗೌಡ ಮತ್ತು ಫೋಬೆ ಲಿಚ್‌ಫೀಲ್ಡ್‌ರಂತಹ ಉತ್ಸಾಹಭರಿತ ಆಟಗಾರ್ತಿಯರು ಇದ್ದಾರೆ. ಫಲಿತಾಂಶಗಳನ್ನು ಲೆಕ್ಕಿಸದೆ ಸಕಾರಾತ್ಮಕ ವಾತಾವರಣವು ಮುಖ್ಯವಾಗಿದೆ' ಎಂದರು.
'ಟಿ20 ಕ್ರಿಕೆಟ್ ಬಲಿಷ್ಠ ನಾಯಕತ್ವದ ಬಗ್ಗೆ ಮತ್ತು ಮೆಗ್ ಲ್ಯಾನಿಂಗ್ ಅತ್ಯುತ್ತಮ ಪ್ರದರ್ಶನ ನೀಡಿದ್ದಾರೆ. ಅವರು ಪ್ರಾಯೋಗಿಕವಾಗಿ, ಆಳವಾಗಿ ತೊಡಗಿಸಿಕೊಂಡಿದ್ದಾರೆ ಮತ್ತು ಈ ಗುಂಪಿನ ಸಾಮರ್ಥ್ಯ ಮತ್ತು ದೌರ್ಬಲ್ಯಗಳನ್ನು ಅರ್ಥಮಾಡಿಕೊಳ್ಳುವಲ್ಲಿ ಬಹಳ ಸೂಕ್ಷ್ಮವಾಗಿರುತ್ತಾರೆ. ಪಂದ್ಯಾವಳಿ ಮುಂದುವರೆದಂತೆ, ಅವರು ಹೊಂದಿರುವ ಪ್ರಭಾವವನ್ನು ನೀವು ನಿಜವಾಗಿಯೂ ನೋಡುತ್ತೀರಿ, ಅವರು ಈ ತಂಡದ ಮುಖ್ಯಸ್ಥರು' ಎಂದರು.
Advertisement