

ಶನಿವಾರ ಬಾಂಗ್ಲಾದೇಶ ವಿರುದ್ಧದ U19 ವಿಶ್ವಕಪ್ 2026 ಪಂದ್ಯದ ವೇಳೆ ಭಾರತದ 14 ವರ್ಷದ ಸೆನ್ಸೇಷನ್ ವೈಭವ್ ಸೂರ್ಯವಂಶಿ ಬೌಂಡರಿ ಲೈನ್ ಬಳಿ ಅದ್ಭುತ ಕ್ಯಾಚ್ ಪಡೆದು ಭಾರತಕ್ಕೆ ನಿರ್ಣಾಯಕ ಮುನ್ನಡೆ ತಂದುಕೊಟ್ಟರು. ಬಾಂಗ್ಲಾದೇಶ ಇನಿಂಗ್ಸ್‌ನ 26ನೇ ಓವರ್‌ನಲ್ಲಿ, ವಿಹಾನ್ ಮಲ್ಹೋತ್ರಾ ಅವರ ಎಸೆತವನ್ನು ಸಿಕ್ಸರ್ ಹೊಡೆಯಲು ಪ್ರಯತ್ನಿಸಿದ ಮುಹಮ್ಮದ್ ಸಮಿಯುನ್ ಬಸೀರ್ ರತುಲ್ ಅವರ ಕ್ಯಾಚ್ ಪಡೆದು ತಂಡಕ್ಕೆ ನೆರವಾದರು. ಕ್ಯಾಚ್ ಹಿಡಿದಾಗ ಸೂರ್ಯವಂಶಿ ಬೌಂಡರಿ ಲೈನ್‌ನಿಂದ ಹೊರಗೆ ಕಾಲಿಡುವಾಗ ಬಾಲ್ ಅನ್ನು ಎಸೆದು ಮತ್ತೆ ಒಳಗೆ ಬಂದು ಕ್ಯಾಚ್ ಪೂರ್ಣಗೊಳಿಸಿದರು. ಇದು ಭಾರತಕ್ಕೆ ಪ್ರಮುಖ ವಿಕೆಟ್ ಆಗಿತ್ತು. ಆಯುಷ್ ಮ್ಹಾತ್ರೆ ನೇತೃತ್ವದ ತಂಡವು ಅಂತಿಮವಾಗಿ ಪಂದ್ಯವನ್ನು ಗೆದ್ದುಕೊಂಡಿತು.
ಭಾರತದ ವಿಹಾನ್ ಮಲ್ಹೋತ್ರಾ 14 ರನ್‌ಗಳನ್ನು ನೀಡಿ 4 ವಿಕೆಟ್‌ಗಳನ್ನು ಕಬಳಿಸುವ ಮೂಲಕ ಬಾಂಗ್ಲಾದೇಶದ ಬ್ಯಾಟರ್‌ಗಳಿಗೆ ಸಂಕಷ್ಟ ತಂದೊಡ್ಡಿದರು. ಅಂತಿಮವಾಗಿ ಭಾರತ DLS ವಿಧಾನದ ಮೂಲಕ 18 ರನ್‌ಗಳ ರೋಚಕ ಜಯ ಸಾಧಿಸಿತು.
ಬಾಂಗ್ಲಾದೇಶವು 49 ಓವರ್‌ಗಳಲ್ಲಿಯೇ ಭಾರತವನ್ನು 238 ರನ್‌ಗಳಿಗೆ ಕಟ್ಟಿಹಾಕಿತು. ಈ ಗುರಿ ಬೆನ್ನಟ್ಟಿದ ಬಾಂಗ್ಲಾದೇಶವು, ಆರಂಭದಲ್ಲಿ ಗೆಲುವು ಸಾಧಿಸುವ ಸ್ಥಿತಿಯಲ್ಲಿತ್ತು. ಆದರೆ, ನಂತರ ಕೇವಲ 40 ರನ್‌ಗಳಿಗೆ 8 ವಿಕೆಟ್‌ಗಳನ್ನು ಕಳೆದುಕೊಂಡು ವೈಫಲ್ಯ ಅನುಭವಿಸಿತು. ಈ ಹಠಾತ್ ಬ್ಯಾಟಿಂಗ್ ಕುಸಿತದಿಂದಾಗಿ, ಬಾಂಗ್ಲಾ ಸೋಲು ಕಂಡಿತು.
ಇದು ಟೂರ್ನಿಯಲ್ಲಿ ಭಾರತದ ಸತತ ಎರಡನೇ ಗೆಲುವು. ಬಾಂಗ್ಲಾದೇಶ 28.3 ಓವರ್‌ಗಳಲ್ಲಿ 146 ರನ್‌ಗಳಿಗೆ ಆಲೌಟ್ ಆಯಿತು. 29 ಓವರ್‌ಗಳಲ್ಲಿ 165 ರನ್‌ಗಳ ಪರಿಷ್ಕೃತ ಗುರಿಯನ್ನು ತಲುಪುಲು ಸಹ ಆಗಲಿಲ್ಲ.
ಟಾಸ್ ಸಮಯದಲ್ಲಿ ಎರಡೂ ತಂಡಗಳ ನಾಯಕರು ಸಾಂಪ್ರದಾಯಿಕ ಕೈಲುಕುವುದರಿಂದ ಹಿಂದೆ ಸರಿದಿದ್ದರು. ಬಳಿಕ ಪಂದ್ಯದ ಕೊನೆಯಲ್ಲಿ ಉಭಯ ತಂಡಗಳ ಆಟಗಾರರು ಮೈದಾನದಲ್ಲಿ ಹಸ್ತಲಾಘವ ಮಾಡುವ ಮೂಲಕ ವಿವಾದಕ್ಕೆ ತೆರೆಎಳೆದರು.
ಭಾರತವು ಈಗ ಎರಡು ಪಂದ್ಯಗಳಲ್ಲಿ ಗೆಲುವು ಸಾಧಿಸುವ ಮೂಲಕ ನಾಲ್ಕು ಅಂಕಗಳೊಂದಿಗೆ ಗ್ರೂಪ್ ಬಿ ಅಂಕಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದೆ. ಆದರೆ, ಬಾಂಗ್ಲಾದೇಶ ಮತ್ತು ಯುಎಸ್ಎ ಇನ್ನೂ ತಮ್ಮ ಖಾತೆಗಳನ್ನು ತೆರೆದಿಲ್ಲ. ನ್ಯೂಜಿಲೆಂಡ್ ಗ್ರೂಪ್ ಬಿಯಲ್ಲಿ ಇನ್ನೂ ತಮ್ಮ ಅಭಿಯಾನವನ್ನು ಪ್ರಾರಂಭಿಸಿಲ್ಲ.
Advertisement