WPL 2026ನೇ ಆವೃತ್ತಿಯಲ್ಲಿ ಈಗಾಗಲೇ ಅರ್ಧದಾರಿಯಿಂದ ಸ್ವಲ್ಪ ಮುಂದಿದ್ದೇವೆ ಮತ್ತು ಸೋಮವಾರ ಗುಜರಾತ್ ಜೈಂಟ್ಸ್ (GG) ಮತ್ತು ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ಪಂದ್ಯ ಮುಗಿದ ನಂತರ, ಸ್ಮೃತಿ ಮಂಧಾನ ನೇತೃತ್ವದ ತಂಡವು ಪ್ಲೇಆಫ್‌ಗೆ ಅರ್ಹತೆ ಪಡೆದ ಮೊದಲ ತಂಡವಾಗಿದೆ. ಈ ಪಂದ್ಯಾವಳಿಯಲ್ಲಿ ಆಡಿರುವ ಐದಕ್ಕೆ ಐದು ಪಂದ್ಯಗಳಲ್ಲಿ ಜಯ ಸಾಧಿಸುವ ಮೂಲಕ +1.882 ನೆಟ್ ರನ್ ರೇಟ್ ಹೊಂದಿದೆ.
ಆರ್‌ಸಿಬಿ ಸಂಪೂರ್ಣ ಪ್ರಾಬಲ್ಯ ಪ್ರದರ್ಶಿಸಿದ್ದರೂ, ಇತರ ನಾಲ್ಕು ತಂಡಗಳಿಗೆ ಮಾತ್ರ ಈವರೆಗೆ ಹಾಗಾಗಿಲ್ಲ. ಜಿಜಿ, ಸತತ ಎರಡು ಗೆಲುವುಗಳೊಂದಿಗೆ ಅದ್ಭುತವಾಗಿ ಪಂದ್ಯಾವಳಿಯನ್ನು ಆರಂಭಿಸಿತು. ಆದರೆ, ಈಗ ಆಡಿರುವ 5 ಪಂದ್ಯಗಳಲ್ಲಿ ಕೇವಲ ಎರಡರಲ್ಲಿ ಗೆಲುವು ಸಾಧಿಸುವ ಮೂಲಕ ಅಂಕಪಟ್ಟಿಯಲ್ಲಿ ಇದನೇ ಸ್ಥಾನದಲ್ಲಿದೆ. ಉದ್ಘಾಟನಾ ಪಂದ್ಯದಲ್ಲಿ ಆರ್‌ಸಿಬಿ ಎದುರು ಸೋಲು ಕಂಡ ಎಂಐ ಕೂಡ ಆಡಿರುವ ಆರು ಪಂದ್ಯಗಳಲ್ಲಿ ಎರಡು ಗೆಲುವುಗಳೊಂದಿಗೆ ಉತ್ತಮ ನೆಟ್ ರನ್ ರೇಟ್ ಮೂಲಕ ಅಂಕಪಟ್ಟಿಯಲ್ಲಿ ಎರಡನೇ ಸ್ಥಾನದಲ್ಲಿ ಉಳಿದಿದೆ. ಡಿಸಿ ಆಡಿರುವ ಐದರಲ್ಲಿ ಎರಡರಲ್ಲಿ ಜಯ ಸಾಧಿಸುವ ಮೂಲಕ ಅಂಕಪಟ್ಟಿಯಲ್ಲಿ ನಾಲ್ಕನೇ ಸ್ಥಾನದಲ್ಲಿದೆ.
WPL 2026ನೇ ಆವೃತ್ತಿಯಲ್ಲಿ ಕೆಲವೇ ಲೀಗ್ ಪಂದ್ಯಗಳು ಉಳಿದಿದ್ದು, ಆರ್‌ಸಿಬಿ ಹೊರತುಪಡಿಸಿ ಉಳಿದ ತಂಡಗಳಿಗೆ ಆಡಲಿರುವ ಎಲ್ಲ ಪಂದ್ಯಗಳು ಮಾಡು ಇಲ್ಲವೇ ಮಡಿ ಪಂದ್ಯಗಳಾಗಿವೆ. ಪ್ಲೇಆಫ್‌ಗೆ ಅರ್ಹತೆ ಪಡೆಯಲು ಸೆಣಸಾಡಬೇಕಿದೆ.
ಮುಂಬೈ ಇಂಡಿಯನ್ಸ್: ಆಡಿರುವ 6 ಪಂದ್ಯಗಳಲ್ಲಿ ಎರಡು ಗೆಲುವುಗಳೊಂದಿಗೆ, ಹರ್ಮನ್‌ಪ್ರೀತ್ ಕೌರ್ ನೇತೃತ್ವದ ತಂಡವು WPL ಪಾಯಿಂಟ್ ಟೇಬಲ್ಸ್‌ನಲ್ಲಿ ಎರಡನೇ ಸ್ಥಾನದಲ್ಲಿದೆ. +0.046 ನೆಟ್ ರನ್ ರೇಟ್ ಹೊಂದಿದ್ದು, ಮುಂದಿನ ಎರಡು ಪಂದ್ಯಗಳು ರಾಯಲ್ ಚಾಲೆಂಜರ್ಸ್ ಬೆಂಗಳೂರು ಮತ್ತು ಜಿಟಿ ವಿರುದ್ಧ ನಡೆಯಲಿರುವ ಪಂದ್ಯಗಳನ್ನು ಗೆಲ್ಲಲೇಬೇಕಾದ ಒತ್ತಡಕ್ಕೆ ಸಿಲುಕಿದೆ.
ಯುಪಿಡಬ್ಲ್ಯು: ಯುಪಿ ವಾರಿಯರ್ಸ್ ತಂಡವು ಸತತ ಮೂರು ಸೋಲುಗಳ ನಂತರ, ಸತತ ಎರಡು ಗೆಲುವುಗಳನ್ನು ಕಂಡಿದೆ. ತಂಡದ ಫೋಬೆ ಲಿಚ್‌ಫೀಲ್ಡ್ ಮತ್ತು ನಾಯಿಕಿ ಮೆಗ್ ಲ್ಯಾನಿಂಗ್ ಉತ್ತಮ ಫಾರ್ಮ್‌ನಲ್ಲಿದ್ದಾರೆ. ಐದು ಪಂದ್ಯಗಳಲ್ಲಿ ಎರಡು ಗೆಲುವುಗಳೊಂದಿಗೆ ಅಂಕಪಟ್ಟಿಯಲ್ಲಿ ಮೂರನೇ ಸ್ಥಾನದಲ್ಲಿರುವ ಯುಪಿಡಬ್ಲ್ಯು ಪ್ಲೇಆಫ್ ತಲುಪಲು ಇನ್ನೆರಡು ಪಂದ್ಯಗಳಲ್ಲಿ ಗೆಲುವು ಸಾಧಿಸಬೇಕಿದೆ. ಮುಂದಿರುವ ಮೂರು ಪಂದ್ಯಗಳಲ್ಲಿ ಗೆಲುವು ಸಾಧಿಸಿದರೆ, ಪ್ಲೇಆಫ್ ಸ್ಥಾನ ಖಚಿತವಾಗಲಿದೆ. ಯುಪಿಡಬ್ಲ್ಯು ಸದ್ಯ ಗುಜರಾತ್ ಜೈಂಟ್ಸ್, ಆರ್‌ಸಿಬಿ ಮತ್ತು ಡೆಲ್ಲಿ ಕ್ಯಾಪಿಟಲ್ಸ್ ಜೊತೆಗೆ ಸೆಣಸಬೇಕಿದೆ.
ಡೆಲ್ಲಿ ಕ್ಯಾಪಿಟಲ್ಸ್: ಜೆಮಿಮಾ ರೋಡ್ರಿಗಸ್ ನಾಯಕತ್ವದ ದೆಹಲಿ ತಂಡವು ಉತ್ತಮವಾಗಿ ಕಂಡರೂ, ಗೆಲುವು ಮಾತ್ರ ಸಾಧ್ಯವಾಗುತ್ತಿಲ್ಲ. ಡೆಲ್ಲಿ ಆಡಿರುವ 5 ಪಂದ್ಯಗಳಲ್ಲಿ ಎರಡು ಗೆಲುವುಗಳೊಂದಿಗೆ ಅಂಕಪಟ್ಟಿಯಲ್ಲಿ ನಾಲ್ಕನೇ ಸ್ಥಾನದಲ್ಲಿದೆ. ಆಡಿರುವ ಐದು ಪಂದ್ಯಗಳಲ್ಲಿ ಎರಡರಲ್ಲಿ ಗೆಲುವು ಸಾಧಿಸುವ ಮೂಲಕ ಅಂಕಪಟ್ಟಿಯಲ್ಲಿ ನಾಲ್ಕನೇ ಸ್ಥಾನದಲ್ಲಿದೆ. ಮುಂದಿನ ಆರ್‌ಸಿಬಿ, ಗುಜರಾತ್ ಜೈಂಟ್ಸ್ ಮತ್ತು ಯುಪಿ ವಾರಿಯರ್ಸ್ ಎದುರಿನ ಪಂದ್ಯಗಳಲ್ಲಿ ಗೆಲುವು ಸಾಧಿಸಬೇಕಿದೆ.
ಗುಜರಾತ್ ಜೈಂಟ್ಸ್: ಜಿಜಿ ತಂಡವು ಆಡಿರುವ ಐದು ಪಂದ್ಯಗಳಲ್ಲಿ ಎರಡರಲ್ಲಿ ಮಾತ್ರ ಗೆಲುವು ಕಂಡಿದ್ದು, ಡಬ್ಲ್ಯುಪಿಎಲ್ ಅಂಕಪಟ್ಟಿಯಲ್ಲಿ ಸದ್ಯ ಐದನೇ ಸ್ಥಾನದಲ್ಲಿದೆ. ಮುಂದೆ ಯುಪಿ ವಾರಿಯರ್ಸ್, ಡೆಲ್ಲಿ ಕ್ಯಾಪಿಟಲ್ಸ್ ಮತ್ತು ಮುಂಬೈ ಇಂಡಿಯನ್ಸ್ ಜೊತೆಗೆ ಸೆಣಸಬೇಕಿದ್ದು, ಗೆಲ್ಲಲೇಬೇಕಾದ ಅನಿವಾರ್ಯತೆ ಇದೆ. ಉಳಿದೆಲ್ಲ ತಂಡಗಳಿಗೆ ಹೋಲಿಸಿದೆ ನೆಟ್ ರನ್ ರೇಟ್ ತೀರಾ ಕಡಿಮೆ ಇದ್ದು, ಅದನ್ನು ಸುಧಾರಿಸಿಕೊಳ್ಳುವತ್ತಲೂ ಗಮನಹರಿಸಬೇಕಿದೆ.
Advertisement