

ತಿರುವನಂತಪುರಂ: ಕೇರಳದ ತಿರುವನಂತಪುರಂನ ಗ್ರೀನ್ ಫೀಲ್ಡ್ ಅಂತಾರಾಷ್ಟ್ರೀಯ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ನ್ಯೂಜಿಲೆಂಡ್ ವಿರುದ್ಧದ ಐದನೇ ಹಾಗೂ ಅಂತಿಮ ಟಿ-20 ಅಂತಾರಾಷ್ಟ್ರೀಯ ಪಂದ್ಯದಲ್ಲಿ ಭಾರತದ ನಾಯಕ ಸೂರ್ಯ ಕುಮಾರ್ ಯಾದವ್ ಪ್ರಮುಖ ವಿಶ್ವ ದಾಖಲೆಯೊಂದನ್ನು ಮುರಿದಿದ್ದಾರೆ.
ಟಿ-20 ವಿಶ್ವಕಪ್ ಗೆ ಕೆಲ ದಿನಗಳು ಬಾಕಿಯಿರುವಂತೆಯೇ ನಡೆದ ಪಂದ್ಯದಲ್ಲಿ 30 ಎಸೆತಗಳಲ್ಲಿ 63 ರನ್ ಗಳಿಸುವ ಮೂಲಕ ಟಿ-20 ಕ್ರಿಕೆಟ್ ನಲ್ಲಿ 3,000 ರನ್ ಗಳಿಸಿದರು. ಈ ಮೂಲಕ ಅತಿ ಕಡಿಮೆ ಎಸೆತದಲ್ಲಿ ವೇಗವಾಗಿ ಈ ಸಾಧನೆ ಮಾಡಿದ ಆಟಗಾರ ಎನಿಸಿಕೊಂಡರು.
ಟಿ-20 ಕ್ರಿಕೆಟ್ ನಲ್ಲಿ ಸೂರ್ಯ ಕುಮಾರ್ ಯಾದವ್ 1,822 ಎಸೆತಗಳಲ್ಲಿ 3000 ರನ್ ಪೂರ್ಣಗೊಳಿಸಿದ್ದಾರೆ. ಈ ಮೂಲಕ 1947 ಎಸೆತಗಳಲ್ಲಿ 3000 ರನ್ ಗಳಿಸಿದ UAE ಆಟಗಾರ ಮುಹಮ್ಮದ್ ವಾಸೀಮ್ ಅವರ ಹಿಂದಿನ ದಾಖಲೆಯನ್ನು ಮುರಿದರು.
ವೇಗವಾಗಿ ಟಿ-20ಯಲ್ಲಿ 3000 ರನ್ ಗಳಿಸಿದ ಆಟಗಾರರು
ಸೂರ್ಯ ಕುಮಾರ್ ಯಾದವ್ 1822 ಎಸೆತ
ಮುಹಮ್ಮದ್ ವಾಸೀಂ 1947 ಎಸೆತ
ಜೋಸ್ ಬಟ್ಲರ್ 2068 ಎಸೆತ
ಅರೋನ್ ಫಿಂಚ್ 2077 ಎಸೆತ
ಡೆವಿಡ್ ವಾರ್ನರ್ 2113 ಎಸೆತ
ರೋಹಿತ್ ಶರ್ಮಾ 2149 ಎಸೆತ
ವಿರಾಟ್ ಕೊಹ್ಲಿ 2169 ಎಸೆತ
Advertisement