ತ್ರಿಕೋನ ಏಕದಿನ ಸರಣಿ: ಆಫ್ಘಾನಿಸ್ತಾನ ವಿರುದ್ಧ ಭಾರತಕ್ಕೆ ಭರ್ಜರಿ ಜಯ, ಫೈನಲ್ ಗೆ ಲಗ್ಗೆ, ನಿರ್ಣಾಯಕವಾಯ್ತು ನೆಟ್ ರನ್ ರೇಟ್!

ಭಾರತ ನೀಡಿದ್ದ 320 ರನ್ ಗಳ ಗುರಿಗೆ ಉತ್ತರವಾಗಿ ಆಫ್ಘಾನಿಸ್ತಾನ ಎ ತಂಡ 36.5 ಓವರ್ ನಲ್ಲಿ ಕೇವಲ 218 ರನ್ ಗಳಿಗೇ ತನ್ನೆಲ್ಲಾ ವಿಕೆಟ್ ಕಳೆದುಕೊಂಡು ಬರೊಬ್ಬರಿ 101 ರನ್ ಗಳ ಅಂತರದಲ್ಲಿ ಹೀನಾಯ ಸೋಲುಕಂಡಿತು.
India A Win By Massive Margin, Qualify For Final
ಭಾರತ ಎ ತಂಡಕ್ಕೆ ಭರ್ಜರಿ ಜಯ
Updated on

ಡಂಬುಲಾ: ಶ್ರೀಲಂಕಾದಲ್ಲಿ ನಡೆಯುತ್ತಿರುವ ತ್ರಿಕೋನ ಏಕದಿನ ಸರಣಿಯಲ್ಲಿ ಆಫ್ಘಾನಿಸ್ತಾನ ವಿರುದ್ಧ ಭಾರತ ತಂಡ ಭರ್ಜರಿ ಜಯ ಸಾಧಿಸಿದ್ದು ಆ ಮೂಲಕ ಸರಣಿಯ ಫೈನಲ್ ಗೆ ಲಗ್ಗೆ ಇಟ್ಟಿದೆ.

ಶ್ರೀಲಂಕಾದ ಡಂಬುಲಾದಲ್ಲಿ ಇಂದು ನಡೆದ ಆಫ್ಗಾನಿಸ್ತಾನ ಎ ವಿರುದ್ಧದ ಪಂದ್ಯದಲ್ಲಿ ಭಾರತ ಎ ತಂಡ 101 ರನ್ ಗಳ ಜಯ ಸಾಧಿಸಿತು.

ಭಾರತ ನೀಡಿದ್ದ 320 ರನ್ ಗಳ ಗುರಿಗೆ ಉತ್ತರವಾಗಿ ಆಫ್ಘಾನಿಸ್ತಾನ ಎ ತಂಡ 36.5 ಓವರ್ ನಲ್ಲಿ ಕೇವಲ 218 ರನ್ ಗಳಿಗೇ ತನ್ನೆಲ್ಲಾ ವಿಕೆಟ್ ಕಳೆದುಕೊಂಡು ಬರೊಬ್ಬರಿ 101 ರನ್ ಗಳ ಅಂತರದಲ್ಲಿ ಹೀನಾಯ ಸೋಲುಕಂಡಿತು.

ಅಂತೆಯೇ ಈ ಪಂದ್ಯದ ಗೆಲುವಿನೊಂದಿಗೆ ಭಾರತ ಎ ತಂಡ ತ್ರಿಕೋನ ಎಕದಿನ ಸರಣಿಯ ಫೈನಲ್ ಗೆ ಲಗ್ಗೆ ಇಟ್ಟಿದೆ.

India A Win By Massive Margin, Qualify For Final
ಶ್ರೀಲಂಕಾ ಎ ಆಟಗಾರರ ಸ್ಲೆಡ್ಜಿಂಗ್: ವೈಭವ್ ಸೂರ್ಯವಂಶಿಗೆ 'ಪರಿಸ್ಥಿತಿ ನಿರ್ವಹಣಾ ತರಬೇತಿ' ಅಗತ್ಯವಿದೆ ಎಂದ ತಜ್ಞರು!

ಭಾರತ ತಂಡ ಬೃಹತ್ ಮೊತ್ತ

ಟಾಸ್ ಸೋತರೂ ಮೊದಲು ಬ್ಯಾಟಿಂಗ್ ಮಾಡಿದ ಭಾರತ ಎ ತಂಡ ಪ್ರಿಯಾಂಶ್ ಆರ್ಯ (58), ನಾಯಕ ತಿಲಕ್ ವರ್ಮಾ (59) ಮತ್ತು ಕುಮಾರ್ ಕುಶಾಗ್ರ (58) ಆರ್ಧಶತಗಳ ನೆರವಿನಿಂದ ನಿಗಧಿತ 50 ಓವರ್ ನಲ್ಲಿ 9 ವಿಕೆಟ್ ನಷ್ಟಕ್ಕೆ 319ರನ್ ಪೇರಿಸಿತು.

ತಂಡದ ಈ ಮೊತ್ತದಲ್ಲಿ ವೈಭವ್ ಸೂರ್ಯವಂಶಿ (38), ರುತುರಾಜ್ ಗಾಯಕ್ವಾಡ್ (30), ವಿಪ್ರಾಜ್ ನಿಗಮ್ (30) ಮತ್ತು ನಿಶಾಂತ್ ಸಿಂಧು (21) ತಮ್ಮ ಬ್ಯಾಟ್ ಮೂಲಕ ಕೊಡುಗೆ ನೀಡಿದರು.

ಆಫ್ಘಾನಿಸ್ತಾನ ಪೆವಿಲಿಯನ್ ಪರೇಡ್

ಭಾರತ ನೀಡಿದ 320 ರನ್ ಗಳ ಬೃಹತ್ ಮೊತ್ತವನ್ನು ಬೆನ್ನು ಹತ್ತಿದ ಆಫ್ಘಾನಿಸ್ತಾನ ತಂಡಕ್ಕೆ ಭಾರತದ ಬೌಲರ್ ನಿಶಾಂತ್ ಸಿಂಧು ಮಾರಕವಾದರು. 6.5 ಓವರ್ ಎಸೆದ ಸಿಂಧು 1 ಮೇಡೆನ್ ಸಹಿತ 31 ರನ್ ಮಾತ್ರ ನೀಡಿ ಪ್ರಮುಖ 4 ವಿಕೆಟ್ ಪಡೆದರು.

ಅವರಿಗೆ ಯಶ್ ಠಾಕೂರ್ ಕೂಡ ಉತ್ತಮ ಸಾಥ್ ನೀಡಿ 2 ವಿಕೆಟ್ ಪಡೆದರು. ಈ ಜೋಡಿಯ ಕರಾರುವಕ್ಕಾದ ಬೌಲಿಂಗ್ ಎದುರು ಆಫ್ಘಾನಿಸ್ತಾನ ಪಡೆ ಪೆವಿಲಿಯನ್ ಪರೇಡ್ ನಡೆಸಿತು. ಆರಂಭಿಕ ಆಟಗಾರ ಹಾಗೂ ನಾಯಕ ಇಮ್ರಾನ್ ಮೀರ್ 32, ಮಧ್ಯಮ ಕ್ರಮಾಂಕದಲ್ಲಿ ಫೈಸಲ್ ಶಿನೋಝಾದಾ 46 ಮತ್ತು ಬಹೀರ್ ಶಾ 57 ರನ್ ಗಳಿಸಿದ್ದು ಬಿಟ್ಟರೆ ಉಳಿದಾವ ಬ್ಯಾಟರ್ ನಿಂದ ಹೇಳಿಕೊಳ್ಳುವಂತಹ ಉತ್ತಮ ಬ್ಯಾಟಿಂಗ್ ಮೂಡಿ ಬರಲಿಲ್ಲ.

ಅಂತಿಮವಾಗಿ ಆಫ್ಘಾನಿಸ್ತಾನ ಎ ತಂಡ 36.5 ಓವರ್ ನಲ್ಲಿ ಕೇವಲ 218 ರನ್ ಗಳಿಗೇ ಆಲೌಟ್ ಆಗಿ 101 ರನ್ ಗಳ ಹೀನಾಯ ಸೋಲುಕಂಡಿತು.

ಭಾರತ ಫೈನಲ್ ಗೆ ಲಗ್ಗೆ

ಈ ಪಂದ್ಯದ ಅಮೋಘ ಜಯದೊಂದಿಗೆ ಭಾರತ ಎ ತಂಡ ತ್ರಿಕೋನ ಏಕದಿನ ಸರಣಿಯಲ್ಲಿ ಫೈನಲ್ ಗೆ ಲಗ್ಗೆ ಇಟ್ಟಿದೆ. ಭಾರತ ಎ ತಂಡ ಹಾಲಿ ಟೂರ್ನಿಯಲ್ಲಿ ತಾನಾಡಿರುವ 4 ಪಂದ್ಯಗಳ ಪೈಕಿ 2 ಗೆಲುವು 2 ಸೋಲುಗಳೊಂದಿಗೆ 4 ಅಂಕಗಳ ಸಹಿತ ಅಗ್ರ ಸ್ಥಾನಕ್ಕೇರಿದ್ದು, ಫೈನಲ್ ಗೆ ಅರ್ಹತೆ ಪಡೆದುಕೊಂಡಿದೆ. ಇನ್ನು ಆಫ್ಘಾನಿಸ್ತಾನ ತಾನಾಡಿರುವ ಮೂರು ಪಂದ್ಯಗಳ ಪೈಕಿ 2 ರಲ್ಲಿ ಸೋಲು ಕಂಡು 1ರಲ್ಲಿ ಮಾತ್ರ ಜಯಗಳಿಸಿ 2 ಅಂಕಗಳೊಂದಿಗೆ ಬಹುತೇಕ ಟೂರ್ನಿಯಿಂದ ಔಟ್ ಆಗಿದೆ. 4 ಅಂಕಗಳಿಸಿರುವ ಶ್ರೀಲಂಕಾ ಕೂಡ ಫೈನಲ್ ಗೆ ಅರ್ಹತೆ ಗಳಿಸುವ ಸಾಧ್ಯತೆ ಇದೆ.

ನಿರ್ಣಾಯಕವಾದ ನೆಟ್ ರನ್ ರೇಟ್

ಇನ್ನು ಈ ಪಂದ್ಯದಲ್ಲಿ ಭಾರತ ಬರೊಬ್ಬರಿ 101 ರನ್ ಗಳ ಅಂತರದಲ್ಲಿ ಜಯಭೇರಿ ಭಾರಿಸಿದ್ದು ಇದು ಭಾರತದ ನೆಟ್ ರನ್ ರೇಟ್ ಮೇಲೆರಲು ಅನುವು ಮಾಡಿಕೊಟ್ಟಿತು. ಅದರಂತೆ ಶ್ರೀಲಂಕಾ ಕೂಡ 4 ಅಂಕಗಳನ್ನು ಹೊಂದಿಯಾದರೂ ನೆಟ್ ರನ್ ರೇಟ್ ಆಧಾರದಲ್ಲಿ ಭಾರತ ಫೈನಲ್ ಗೆ ಅರ್ಹತೆ ಗಿಟ್ಟಿಸಿದೆ. ಪಟ್ಟಿಯಲ್ಲಿ ಅಗ್ರಸ್ಥಾನಕ್ಕೇರಿರುವ ಭಾರತ +0.797 ನೆಟ್ ರೇಟ್ ಹೊಂದಿದ್ದು, 2ನೇ ಸ್ಥಾನದಲ್ಲಿರುವ ಶ್ರೀಲಂಕಾ +0.494 ನೆಟ್ ರನ್ ರೇಟ್ ಹೊಂದಿದೆ. ಅಂತೆಯೇ ಅಫ್ಘಾನಿಸ್ತಾನ -1.983 ನೆಟ್ ರನ್ ರೇಟ್ ನೊಂದಿಗೆ ಅಂತಿಮ ಸ್ಥಾನದಲ್ಲಿದ್ದು ಫೈನಲ್ ಗೆ ಅರ್ಹತೆ ಪಡೆಯಲು ತನ್ನ ಮುಂದಿನ ಶ್ರೀಲಂಕಾ ವಿರುದ್ಧದ ಪಂದ್ಯದಲ್ಲಿ ಭಾರಿ ಅಂತರದ ಗೆಲುವು ಸಾಧಿಸಬೇಕಿದೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

X

Advertisement

X
Kannada Prabha
www.kannadaprabha.com