ಶೋಯೆಬ್ ಅಖ್ತರ್ ಕುಟುಂಬದಲ್ಲಿ Tragedy; ಪಾಕ್ ಕ್ರಿಕೆಟ್ ದಿಗ್ಗಜನ ಅಣ್ಣ ನಿಗೂಢ ಸಾವು!

ಶೋಯೆಬ್ ಅಖ್ತರ್ ಅವರು ತಮ್ಮ ಹಿರಿಯ ಸಹೋದರ ಶಾಹಿದ್ ಅಖ್ತರ್ ನಿಧನರಾಗಿದ್ದಾರೆ ಎಂದು ತಮ್ಮ ಸಾಮಾಜಿಕ ಮಾಧ್ಯಮ ಖಾತೆ ಎಕ್ಸ್ ನಲ್ಲಿ ದೃಢಪಡಿಸಿದ್ದಾರೆ.
Shoaib Akhtar
ಶೋಯೆಬ್ ಅಖ್ತರ್
Updated on

ಇಸ್ಲಾಮಾಬಾದ್: ಪಾಕಿಸ್ತಾನದ ಶ್ರೇಷ್ಠ ಕ್ರಿಕೆಟಿಗರಲ್ಲಿ ಒಬ್ಬರಾದ ಶೋಯೆಬ್ ಅಖ್ತರ್ ಅವರ ಕುಟುಂಬಕ್ಕೆ ದೊಡ್ಡ ಆಘಾತ ಎದುರಾಗಿದ್ದು, ಅಖ್ತರ್ ಅವರ ಹಿರಿಯ ಸಹೋದರ ನಿಧನರಾಗಿದ್ದಾರೆ ಎಂದು ಪಾಕಿಸ್ತಾನದ ಮಾಧ್ಯಮಗಳು ವರದಿ ಮಾಡಿವೆ.

ಶೋಯೆಬ್ ಅಖ್ತರ್ ಅವರು ತಮ್ಮ ಹಿರಿಯ ಸಹೋದರ ಶಾಹಿದ್ ಅಖ್ತರ್ ನಿಧನರಾಗಿದ್ದಾರೆ ಎಂದು ತಮ್ಮ ಸಾಮಾಜಿಕ ಮಾಧ್ಯಮ ಖಾತೆ ಎಕ್ಸ್ ನಲ್ಲಿ ದೃಢಪಡಿಸಿದ್ದಾರೆ.

ಹಲವಾರು ಅಭಿಮಾನಿಗಳು ಮತ್ತು ಪಾಕಿಸ್ತಾನಿ ಮಾಜಿ ಕ್ರಿಕೆಟಿಗರು ಶೋಯೆಬ್ ಅಖ್ತರ್ ಸಹೋದರನ ನಿಧನಕ್ಕೆ ಸಾಮಾಜಿಕ ಮಾಧ್ಯಮಗಳಲ್ಲಿ ಸಂತಾಪ ಸೂಚಿಸಿದ್ದಾರೆ. ಆದರೆ ಶಾಹಿದ್ ಅವರ ಸಾವಿಗೆ ಕಾರಣವೇನೆಂದು ಬಹಿರಂಗಪಡಿಸಲಾಗಿಲ್ಲ.

Shoaib Akhtar
IPL 2027: Delhi Capitalsಗೆ ಮರಳಿದ ರಿಷಬ್ ಪಂತ್‌ಗೆ ಭಾರೀ ಪೇ-ಕಟ್; ಕುಲದೀಪ್ ಯಾದವ್ LSG ಪಾಲು

"ನನ್ನ ಪ್ರೀತಿಯ ಅಣ್ಣ ಶಾಹಿದ್ ಅಖ್ತರ್ ಅಲ್ಲಾಹ್ ಸುಭಾನ ವ ತಾಲಾಗೆ ಮರಳಿದ್ದಾರೆ ಎಂದು ಹೇಳಲು ನನಗೆ ತುಂಬಾ ದುಃಖವಾಗುತ್ತಿದೆ. ನಮಾಜ್-ಎ-ಜನಾಜಾ ಸಮಯ ಮತ್ತು ಸ್ಥಳವನ್ನು ಬೆಳಗ್ಗೆ ತಿಳಿಸಲಾಗುವುದು" ಎಂದು ಶೋಯೆಬ್ ಅಖ್ತರ್ ತಮ್ಮ ಸಾಮಾಜಿಕ ಮಾಧ್ಯಮ ಎಕ್ಸ್ ನಲ್ಲಿ ಪೋಸ್ಟ್ ಮಾಡಿದ್ದಾರೆ.

ಶೋಯೆಬ್ ಅಖ್ತರ್ ಅವರ ಸಹೋದರನ ಮರಣದ ಸುದ್ದಿಯನ್ನು ಪಾಕಿಸ್ತಾನದ ಮಾಜಿ ನಾಯಕ ರಶೀದ್ ಲತೀಫ್ ಕೂಡ ದೃಢಪಡಿಸಿದ್ದಾರೆ. ಅವರು ಫೇಸ್‌ಬುಕ್‌ನಲ್ಲಿ ಹೀಗೆ ಬರೆದಿದ್ದಾರೆ: "ನಾವು ಅಲ್ಲಾಹನಿಗೆ ಸೇರಿದವರು ಮತ್ತು ಒಂದು ದಿನ ಅವನ ಬಳಿ ಹೋಗುತ್ತೇವೆ. ಶೋಯೆಬ್ ಅಖ್ತರ್ ಅವರ ಸಹೋದರ ಶಾಹಿದ್ ಅಖ್ತರ್ ನಿಧನರಾಗಿದ್ದಾರೆ. ಅವರಿಗಾಗಿ ಪ್ರಾರ್ಥಿಸಿ" ಎಂದು ಪೋಸ್ಟ್ ಮಾಡಿದ್ದಾರೆ.

ಸುಮಾರು 5 ವರ್ಷಗಳ ಹಿಂದೆ, ಪಾಕಿಸ್ತಾನದ ಮಾಜಿ ವೇಗಿ ಅಖ್ತರ್ ತನ್ನ ತಾಯಿಯನ್ನು ಕಳೆದುಕೊಂಡಿದ್ದರು. ಇದೀಗ ಅವರ ಸಹೋದರನ ಮರಣದೊಂದಿಗೆ, ಶೋಯೆಬ್ ಅಖ್ತರ್ ತಮ್ಮ ಕುಟುಂಬದ ಮತ್ತೊಬ್ಬ ಪ್ರೀತಿಯ ಸದಸ್ಯನನ್ನು ಕಳೆದುಕೊಂಡಿದ್ದಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

X

Advertisement

X
Kannada Prabha
www.kannadaprabha.com