T20 World Cupನಲ್ಲಿ ಪಾಕ್ ತಂಡದ ಕಳಪೆ ಪ್ರದರ್ಶನ; ನಾಯಕ ಸಲ್ಮಾನ್ ಅಲಿ ಅಘಾ ಸೇರಿದಂತೆ ಹಿರಿಯ ಆಟಗಾರರು ಔಟ್?

ನಖ್ವಿ ಅವರು ಮೈಕ್ ಹೆಸ್ಸನ್ ಮತ್ತು ಆಯ್ಕೆದಾರರೊಂದಿಗೆ ಈ ಆಟಗಾರರ ಭವಿಷ್ಯದ ಬಗ್ಗೆ ಮಾತುಕತೆ ನಡೆಸಲಿದ್ದಾರೆ. ಆಧುನಿಕ, ನಿರ್ಭೀತ ಬ್ರ್ಯಾಂಡ್ ಕ್ರಿಕೆಟ್ ಆಡುವ ಯುವಕರನ್ನು ತಂಡಕ್ಕೆ ಕರೆತರಲು ಅವರು ಬಯಸುತ್ತಾರೆ ಎನ್ನಲಾಗಿದೆ.
Salman Ali Agha
ಪಾಕಿಸ್ತಾನ ನಾಯಕ ಸಲ್ಮಾನ್ ಅಲಿ ಅಘಾ
Updated on

2026ರ ಟಿ20 ವಿಶ್ವಕಪ್‌ನಲ್ಲಿ ಪಾಕಿಸ್ತಾನ ಕ್ರಿಕೆಟ್ ತಂಡದ ಪ್ರದರ್ಶನದ ಬಗ್ಗೆ ಪಾಕಿಸ್ತಾನ ಕ್ರಿಕೆಟ್ ಮಂಡಳಿ (ಪಿಸಿಬಿ) ಅತೃಪ್ತವಾಗಿದೆ ಎನ್ನಲಾಗಿದೆ. ಪಿಸಿಬಿ ಅಧ್ಯಕ್ಷ ಮೊಹ್ಸಿನ್ ನಖ್ವಿ, ಆಯ್ಕೆ ಸಮಿತಿ ಮತ್ತು ಕೋಚ್ ಮೈಕ್ ಹೆಸ್ಸನ್ ನೇತೃತ್ವದ ತಂಡದ ನಿರ್ವಹಣೆಯು ಖಾತರಿಯ ಫಲಿತಾಂಶಗಳನ್ನು ನೀಡುವ ಭರವಸೆ ನೀಡಿದ ನಂತರ ಅವರಿಗೆ ಪೂರ್ಣಾವಕಾಶ ನೀಡಿದ್ದರು.

ಇದೀಗ ಸೂಪರ್ 8 ಹಂತದಲ್ಲಿ ಶ್ರೀಲಂಕಾವನ್ನು ಸೋಲಿಸಿದರೂ ಸಹ, ಪಾಕಿಸ್ತಾನಕ್ಕೆ ಸೆಮಿಫೈನಲ್‌ನಲ್ಲಿ ಸ್ಥಾನ ಸಿಗುವ ಸಾಧ್ಯತೆ ಇಲ್ಲ. ಸದ್ಯ ತಂಡದ ಆಡಳಿತ ಮಂಡಳಿಗೆ ಸುಮಾರು 2 ವರ್ಷಗಳ ಕಾಲ ಅವಕಾಶ ನೀಡಲಾಗಿದ್ದರೂ, ಫಲಿತಾಂಶಗಳು ಪಿಸಿಬಿ ನಿರೀಕ್ಷಿಸಿದಂತೆ ಇಲ್ಲದಿರುವ ಕಾರಣಕ್ಕೆ ಅಸಮಾಧಾನ ಹೊರಹಾಕಿದೆ ಎಂದು ತಿಳಿದುಬಂದಿದೆ.

'ಈ ಬಾರಿ ವಿಶ್ವಕಪ್‌ನಲ್ಲಿ ತಂಡವು ಉತ್ತಮವಾಗಿ ಕಾರ್ಯನಿರ್ವಹಿಸುತ್ತದೆ ಎಂದು ಆಯ್ಕೆದಾರರು, ತಂಡದ ನಿರ್ವಹಣೆ ಮತ್ತು ಮಂಡಳಿಯಲ್ಲಿರುವ ಅವರ ಆಪ್ತ ಸಹಾಯಕರು ಭರವಸೆ ನೀಡಿದ್ದರು. ಆದರೆ, ಫಲಿತಾಂಶ ಉತ್ತಮವಾಗಿಲ್ಲದ ಕಾರಣದಿಂದ ಮೊಹ್ಸಿನ್ ನಖ್ವಿ ಅವರಿಗೆ ಸ್ವಲ್ಪವೂ ಸಂತೋಷವಾಗಿಲ್ಲ' ಎಂದು ಮೂಲವೊಂದು ಸುದ್ದಿಸಂಸ್ಥೆ ಪಿಟಿಐಗೆ ತಿಳಿಸಿದೆ.

ಇದೀಗ ನಖ್ವಿ ತಂಡದಿಂದ ಹಲವಾರು ಆಟಗಾರರನ್ನು ಕೈಬಿಡಲು ಬಯಸಿದ್ದು, ಇದರಲ್ಲಿ ನಾಯಕ ಸಲ್ಮಾನ್ ಅಲಿ ಆಘಾ, ತಂಡದ ಅತ್ಯಧಿಕ ಸ್ಕೋರರ್ ಬಾಬರ್ ಅಜಮ್, ವಿಕೆಟ್ ಕೀಪರ್ ಉಸ್ಮಾನ್ ಖಾನ್ ಮತ್ತು ಸಮರ್ಪಕ ಪ್ರದರ್ಶನ ನೀಡದ ಇತರ ಹಿರಿಯ ಆಟಗಾರರು ಸೇರಿದ್ದಾರೆ.

Salman Ali Agha
ಪಾಕಿಸ್ತಾನ ವಿರುದ್ಧ ಶ್ರೀಲಂಕಾಗೆ 5 ರನ್ ವಿರೋಚಿತ ಸೋಲು; ಪಂದ್ಯ ಗೆದ್ದರೂ Pak ಸೆಮಿಸ್‌ನಿಂದ ಹೊರಕ್ಕೆ!

ಟಿ20 ವಿಶ್ವಕಪ್ ನಂತರ, ನಖ್ವಿ ಅವರು ಹೆಸ್ಸನ್ ಮತ್ತು ಆಯ್ಕೆದಾರರೊಂದಿಗೆ ಈ ಆಟಗಾರರ ಭವಿಷ್ಯದ ಬಗ್ಗೆ ಮಾತುಕತೆ ನಡೆಸಲಿದ್ದಾರೆ. ಆಧುನಿಕ, ನಿರ್ಭೀತ ಬ್ರ್ಯಾಂಡ್ ಕ್ರಿಕೆಟ್ ಆಡುವ ಯುವಕರನ್ನು ತಂಡಕ್ಕೆ ಕರೆತರಲು ಅವರು ಬಯಸುತ್ತಾರೆ ಎನ್ನಲಾಗಿದೆ.

'ವಿಶ್ವಕಪ್ ನಂತರ ಸಲ್ಮಾನ್, ಬಾಬರ್ ಅಜಂ, ಉಸ್ಮಾನ್ ಖಾನ್ ಮತ್ತು ಇನ್ನೂ ಕೆಲವರ ಟಿ20 ಅಂತರರಾಷ್ಟ್ರೀಯ ವೃತ್ತಿಜೀವನಕ್ಕೆ ತೆರೆ ಬೀಳುವ ಸಾಧ್ಯತೆಯಿದೆ. ಆದ್ದರಿಂದ, ವಿಶ್ವಕಪ್ ನಂತರ, ಪಾಕಿಸ್ತಾನ ಟಿ20 ವ್ಯವಸ್ಥೆಯಲ್ಲಿ ಪ್ರಮುಖ ಬದಲಾವಣೆಗಳನ್ನು ನಿರೀಕ್ಷಿಸಬಹುದು' ಎಂದು ಮೂಲಗಳು ತಿಳಿಸಿವೆ.

ಸದ್ಯ, ಸಲ್ಮಾನ್ ಅಲಿ ಆಘಾ ಬದಲಿಗೆ ಶದಾಬ್ ಖಾನ್ ಮತ್ತು ಶಾಹೀನ್ ಶಾ ಅಫ್ರಿದಿ ಪ್ರಮುಖ ಅಭ್ಯರ್ಥಿಗಳಾಗಿ ಹೊರಹೊಮ್ಮುತ್ತಿದ್ದಾರೆ. ಇಬ್ಬರೂ ಮೊದಲು ಪಾಕಿಸ್ತಾನದ ನಾಯಕತ್ವ ವಹಿಸಿದ್ದಾರೆ: 2020 ರಿಂದ 2023 ರವರೆಗೆ 6 ಪಂದ್ಯಗಳಿಗೆ ಶದಾಬ್ ಮತ್ತು 2024ರಲ್ಲಿ 5 ಪಂದ್ಯಗಳಿಗೆ ಶಾಹೀನ್ ನಾಯಕರಾಗಿದ್ದರು.

ಕುತೂಹಲಕಾರಿಯಾಗಿ, ಕಳೆದ 12 ತಿಂಗಳುಗಳಲ್ಲಿ ಇಬ್ಬರೂ ತಂಡದ ನಾಯಕರಾಗಿ ಆಯ್ಕೆಯಾಗಲಿಲ್ಲ ಅಥವಾ ಕೈಬಿಡಲ್ಪಟ್ಟರು. ಆದರೆ, ಬ್ಯಾಟ್ಸ್‌ಮನ್ ಮತ್ತು ನಾಯಕನಾಗಿ ಆಘಾ ಅವರ ವೈಫಲ್ಯಗಳ ನಂತರ, ಪಿಸಿಬಿ ಇವರ ಬದಲಿಗೆ ಅವರಿಬ್ಬರಲ್ಲಿ ಒಬ್ಬರಿಗೆ ಜವಾಬ್ದಾರಿ ನೀಡುವುದು ಸೂಕ್ತವೆಂದು ಭಾವಿಸುತ್ತದೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com