Video: 5 ಎಸೆತದಲ್ಲಿ 5 ವಿಕೆಟ್; 254 ವರ್ಷಗಳ ಕ್ರಿಕೆಟ್​ ಇತಿಹಾಸದಲ್ಲಿ ಇದೇ ಮೊದಲು..; Brett Randell ಅತ್ಯಪರೂಪದ ವಿಶ್ವದಾಖಲೆ!

254 ವರ್ಷಗಳ ಕ್ರಿಕೆಟ್​ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ಬೌಲರ್ ಓರ್ವ ಐದು ಎಸೆತದಲ್ಲಿ ಐದು ವಿಕೆಟ್ ಪಡೆದು ವಿಶಿಷ್ಠ ದಾಖಲೆ ನಿರ್ಮಿಸಿದ್ದಾರೆ.
Brett Randell
ಐದು ಎಸೆತದಲ್ಲಿ ಐದು ವಿಕೆಟ್ ಪಡೆದ ಬ್ರೆಟ್ ರಾಂಡಲ್ESPNcricinfo
Updated on

ವೆಲ್ಲಿಂಗ್ಟನ್: ಕ್ರಿಕೆಟ್ ನಲ್ಲಿ ಹ್ಯಾಟ್ರಿಕ್ ವಿಕೆಟ್ ಕೇಳಿದ್ದೀರಾ.. 6 ಸಿಕ್ಸರ್ ಗಳನ್ನೂ ಕೂಡ ನೋಡಿದ್ದೀರಾ.. ಆದರೆ 5 ಎಸೆತದಲ್ಲಿ ಐದು ವಿಕೆಟ್ ಕಬಳಿಸಿದ ಅತ್ಯಪರೂಪದ ದಾಖಲೆಯೊಂದು ನಿರ್ಮಾಣವಾಗಿದೆ.

ಹೌದು.. ನ್ಯೂಜಿಲೆಂಡ್‌ ದೇಶೀಯ ಕ್ರಿಕೆಟ್ ಟೂರ್ನಿಯಲ್ಲಿ ಅತ್ಯಪರೂಪದ ದಾಖಲೆ ನಿರ್ಮಾಣವಾಗಿದ್ದು, 254 ವರ್ಷಗಳ ಕ್ರಿಕೆಟ್​ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ಬೌಲರ್ ಓರ್ವ ಐದು ಎಸೆತದಲ್ಲಿ ಐದು ವಿಕೆಟ್ ಪಡೆದು ವಿಶಿಷ್ಠ ದಾಖಲೆ ನಿರ್ಮಿಸಿದ್ದಾರೆ.

ನ್ಯೂಜಿಲೆಂಡ್ ನ 30 ವರ್ಷದ ಬ್ರೆಟ್ ರಾಂಡಲ್ ಸತತ ಐದು ಎಸೆತಗಳಲ್ಲಿ ಐದು ವಿಕೆಟ್‌ಗಳನ್ನು ಪಡೆಯುವ ಮೂಲಕ ಇತಿಹಾಸ ನಿರ್ಮಿಸಿದ್ದಾರೆ. ನೇಪಿಯರ್ ನಲ್ಲಿ ನಡೆದ ಸೆಂಟ್ರಲ್ ಡಿಸ್ಟ್ರಿಕ್ಟ್ ಮತ್ತು ನಾರ್ಥರ್ನ್ ಡಿಸ್ಟ್ರಿಕ್ಟ್ ತಂಡಗಳ ನಡುವಿನ ಪಂದ್ಯದಲ್ಲಿ ಈ ಅಪರೂಪದ ದಾಖಲೆ ನಿರ್ಮಾಣವಾಗಿದೆ.

ಸೆಂಟ್ರಲ್ ಡಿಸ್ಟ್ರಿಕ್ಟ್ಸ್ ತಂಡ ನೀಡಿದ 373 ರನ್​ಗಳ ಗುರಿಯನ್ನು ಬೆನ್ನತ್ತಲು ಬ್ಯಾಟಿಂಗ್​​ಗೆ ಇಳಿದ ನಾರ್ದರ್ನ್ ಡಿಸ್ಟ್ರಿಕ್ಟ್ಸ್ ಕೇವಲ 82 ರನ್​ಗಳಿಗೆ ಆಲೌಟ್ ಆಯಿತು. ತಮ್ಮ ಒಂಬತ್ತು ವರ್ಷಗಳ ವೃತ್ತಿಜೀವನದಲ್ಲಿ ಅತ್ಯುತ್ತಮ ಪ್ರದರ್ಶನ ನೀಡಿದ ರಾಂಡಾಲ್, ಕೇವಲ 25 ರನ್​ಗಳಿಗೆ ಏಳು ವಿಕೆಟ್ ಕಬಳಿಸಿದರು.

Brett Randell
T20 ವಿಶ್ವಕಪ್ 2026: ವೀಕ್ಷಣೆಯಲ್ಲಿ Ind vs Eng 2nd Semifinal ವಿಶ್ವದಾಖಲೆ; 2024ರ ಫೈನಲ್ ದಾಖಲೆ ಉಡೀಸ್!

ಕಳೆದ ವರ್ಷ ದೇಶೀಯ ಟಿ-20 ಪಂದ್ಯದಲ್ಲಿ ಐರ್ಲೆಂಡ್​ನ ಕರ್ಟಿಸ್ ಕ್ಯಾಂಪರ್ ಐದು ಎಸೆತಗಳಲ್ಲಿ ಐದು ವಿಕೆಟ್ ಕಬಳಿಸಿದರು. ಆದರೆ, ಪ್ರಥಮ ದರ್ಜೆ ಕ್ರಿಕೆಟ್ ನಲ್ಲಿ ಇಂತಹ ಸಾಧನೆ ಮಾಡಿರುವುದು ಇದೇ ಮೊದಲಾಗಿದೆ. 1772ರಲ್ಲಿ ದೇಶೀಯ ಕ್ರಿಕೆಟ್ ಮೊದಲ ಬಾರಿಗೆ ದಾಖಲಾದ ಬಳಿಕ ಸುಮಾರು 254 ವರ್ಷಗಳಲ್ಲಿ ಬೌಲರ್ ಒಬ್ಬರು ಸತತ ಐದು ವಿಕೆಟ್‌ಗಳನ್ನು ಪಡೆದಿರುವುದು ಇದೇ ಮೊದಲು.

ತಮ್ಮ ಎರಡನೇ ಓವರ್‌ನ ಕೊನೆಯ ಎಸೆತದಲ್ಲಿ ಹೆನ್ರಿ ಕೂಪರ್ ಅವರನ್ನು ಔಟ್ ಮಾಡುವ ಮೂಲಕ ರಾಂಡಲ್ ಅವರು ತಮ್ಮ ವಿಕೆಟ್ ಪಡೆಯುವ ಸಾಹಸವನ್ನು ಆರಂಭಿಸಿದರು. ಮುಂದಿನ ಓವರ್‌ನ ಮೊದಲ ಎಸೆತದಲ್ಲಿ ಮಾಜಿ ನ್ಯೂಜಿಲೆಂಡ್ ಆಟಗಾರ ಜೀತ್ ರಾವಲ್ ಅವರನ್ನು ಔಟ್ ಮಾಡಿದರು.

ಬಳಿಕ ಮುಂದಿನ ಮೂರು ಎಸೆತಗಳಲ್ಲಿ ಸತತ ವಿಕೆಟ್ ಪಡೆದರು. ಈ ಮೂಲಕ ಕ್ರಿಕೆಟ್ ಇತಿಹಾಸದಲ್ಲಿ ಅಭೂತಪೂರ್ವ ಸಾಧನೆ ಮಾಡಿದರು. ಐರಿಶ್‌ನ ಕ್ರಿಶ್ಚಿಯನ್ ಕ್ಲಾರ್ಕ್ ಅವರನ್ನು ಔಟ್ ಮಾಡುವ ಮೂಲಕ ರಾಂಡಲ್​ ಅವರು ಈ ದಾಖಲೆಯನ್ನು ಬರೆದರು. ಅಲ್ಲದೆ,

ನಂತರ ಈ ಸ್ವರೂಪದಲ್ಲಿ 8 ಎಸೆತಗಳಲ್ಲಿ 6 ವಿಕೆಟ್ ಪಡೆದ ಮೊದಲ ಆಟಗಾರ ಎಂಬ ಕೀರ್ತಿಗೂ ಭಾಜನರಾದರು. ಅಂತೆಯೇ ತಮ್ಮ ಮುಂದಿನ ಓವರ್​ನಲ್ಲಿ ಮತ್ತೆ ಎರಡು ವಿಕೆಟ್​ ಪಡೆಯುವ ಮೂಲಕ ಒಟ್ಟು ಏಳು ವಿಕೆಟ್​ ಪಡೆದರು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com