

ಅಹ್ಮದಾಬಾದ್: ಅಹ್ಮದಾಬಾದ್‍ನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ನಡೆದ ಭಾರತ ಮತ್ತು ನ್ಯೂಜಿಲೆಂಡ್ ನಡುವಿನ ಟಿ20 ವಿಶ್ವಕಪ್ ಫೈನಲ್ ಪಂದ್ಯ ಸಾರ್ವಕಾಲಿಕ ದಾಖಲೆ ನಿರ್ಮಿಸಿದ್ದು, ಈ ಪಂದ್ಯವನ್ನು ಕೋಟ್ಯಂತರ ಜನರು ವೀಕ್ಷಿಸಿರುವುದು ದಾಖಲೆಯಾಗಿದೆ.
ಅಹ್ಮದಾಬಾದ್‍ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ನಡೆದ ಟಿ20 ವಿಶ್ವಕಪ್ನ ಫೈನಲ್ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಟೀಮ್ ಇಂಡಿಯಾ 20 ಓವರ್ಗಳಲ್ಲಿ 5 ವಿಕೆಟ್ ಕಳೆದುಕೊಂಡು 255 ರನ್ ಕಲೆಹಾಕಿತು.
ಈ ಗುರಿಯನ್ನು ಬೆನ್ನತ್ತಿದ ನ್ಯೂಝಿಲೆಂಡ್ ತಂಡವು 19 ಓವರ್ಗಳಲ್ಲಿ 159 ರನ್ ಬಾರಿಸಿ ಆಲೌಟ್ ಆಯಿತು. ಆ ಮೂಲಕ ಭಾರತ 96 ರನ್ ಗಳ ಅಂತರದಲ್ಲಿ ಭರ್ಜರಿ ಜಯ ದಾಖಲಿಸಿ ಸತತ 2ನೇ ಟಿ20 ವಿಶ್ವಕಪ್ ಮತ್ತು ಒಟ್ಟಾರೆ 3ನೇ ವಿಶ್ವಕಪ್ ಗೆ ಮುತ್ತಿಟ್ಟಿದೆ.
ಇನ್ನು ಈ ಪಂದ್ಯವನ್ನು ವಿಶ್ವಾದ್ಯಂತ ಕೋಟ್ಯಂತರ ಮಂದಿ ವೀಕ್ಷಿಸಿದ್ದು, ವೀಕ್ಷಣೆಯಲ್ಲೂ ಈ ಪಂದ್ಯ ದಾಖಲೆ ನಿರ್ಮಿಸಿದೆ. ಜಿಯೋಹಾಟ್ ಸ್ಟಾರ್ ನಲ್ಲಿ ಈ ಪಂದ್ಯವನ್ನು ಬರೊಬ್ಬರಿ 82.1 ಕೋಟಿ ಮಂದಿ ಏಕಕಾಲದಲ್ಲಿ ವೀಕ್ಷಣೆ ಮಾಡಿದ್ದು, ಆ ಮೂಲಕ ಇದೇ ಮೊದಲ ಬಾರಿಗೆ ಟಿ20ವಿಶ್ವಕಪ್ ಪಂದ್ಯವನ್ನು ಇಷ್ಟು ಮಂದಿ ಏಕಕಾಲದಲ್ಲಿ ವೀಕ್ಷಣೆ ಮಾಡಿದ ಮೊದಲ ಪಂದ್ಯ ಎಂಬ ಕೀರ್ತಿಗೆ ಭಾಜನವಾಗಿದೆ.
ದಾಖಲೆಯ 82.1 ಕೋಟಿ ವೀಕ್ಷಕರು ಈ ಫೈನಲ್ ಪಂದ್ಯವನ್ನು ಏಕಕಾಲದಲ್ಲಿ ಲೈವ್ ಸ್ಟ್ರೀಮಿಂಗ್‍ನಲ್ಲಿ ವೀಕ್ಷಿಸಿದ್ದು, ಇದು ಸ್ಟ್ರೀಮಿಂಗ್ ಪ್ಲಾಟ್‍ಫಾರ್ಮ್ ಜಿಯೋಹಾಟ್‍ಸ್ಟಾರ್‍ನಲ್ಲಿ ದಾಖಲೆಯ ವೀಕ್ಷಣೆಯಾಗಿದೆ.
ನ್ಯೂಜಿಲೆಂಡ್ 19ನೇ ಓವರ್‍ನಲ್ಲಿ ತನ್ನ ಕೊನೆಯ ವಿಕೆಟ್ ಅನ್ನು ಕಳೆದುಕೊಳ್ಳುತ್ತಿದಂತೆಯೇ ಭಾರತ 96 ರನ್‍ಗಳಿಂದ ಗೆದ್ದು ವಿಜಯೋತ್ಸವ ಆಚರಿಸಿತು. ಜಿಯೋ ಹಾಟ್‍ಸ್ಟಾರ್‍ನಲ್ಲಿ 74.5 ಕೋಟಿ ಏಕಕಾಲಿಕ ವೀಕ್ಷಕರನ್ನು ಪಡೆದಿದೆ. ನಂತರ ಪಂದ್ಯದ ಪ್ರಶಸ್ತಿ ವಿತರಣೆಯ ಸಮಯದಲ್ಲಿ ವೀಕ್ಷಣೆಯ ಸಂಖ್ಯೆ 82.1 ಕೋಟಿ ರೂ. ತಲುಪಿದೆ.
ವೀಕ್ಷಣೆ ವಿವರ
ಫೈನಲ್ ಆರಂಭದ ಮೊದಲು ಗಾಯಕ ರಿಕಿ ಮಾರ್ಟಿನ್ ಪ್ರದರ್ಶನ ನೀಡಿದರು. ಟಾಸ್ ಸಮಯದಲ್ಲಿ 2.1 ಕೋಟಿ ಮತ್ತು 4.2 ಕೋಟಿ ವೀಕ್ಷಕರು ನೇರ ಪ್ರಸಾರ ವೀಕ್ಷಿಸಿದರೆ, ಭಾರತ ಬ್ಯಾಟಿಂಗ್ ಪ್ರಾರಂಭಿಸಿದಾಗ ವೀಕ್ಷಕರ ಸಂಖ್ಯೆ 6.5 ಕೋಟಿ ತಲುಪಿತು.
ಪಂದ್ಯದಲ್ಲಿ ಭಾರತ ಅದ್ಭುತ ಪ್ರದರ್ಶನ ನೀಡುತ್ತಿದ್ದಂತೆ ವೀಕ್ಷಕರ ಸಂಖ್ಯೆ ಹೆಚ್ಚುತ್ತಲೇ ಇತ್ತು. ಭಾರತದ ಬ್ಯಾಟಿಂಗ್ ಅಂತ್ಯದಲ್ಲಿ 43.9 ಕೋಟಿ ಇದ್ದ ವೀಕ್ಷಕರ ಸಂಖ್ಯೆ ಇನಿಂಗ್ಸ್ ವಿರಾಮದ ಸಮಯದಲ್ಲಿ 44.3 ಕೋಟಿಗೆ ಏರಿತ್ತು.
ನ್ಯೂಜಿಲೆಂಡ್ ತಂಡವನ್ನು ಬೆನ್ನಟ್ಟುವ ಮೊದಲು ಭಾರತ 255 ರನ್‍ಗಳ ಬೃಹತ್ ಗುರಿಯನ್ನು ನೀಡಿತು. ಈ ವೇಳೆ ವೀಕ್ಷಕರ ಸಂಖ್ಯೆ 49.9 ಕೋಟಿಯಾಗಿತ್ತು. ಮೊದಲ ಓವರ್ ಅಂತ್ಯದ ವೇಳೆಗೆ ಅದು 50.3 ಕೋಟಿಗೆ ಏರಿತ್ತು ಎಂದು ಜಿಯೋ ಹಾಟ್ ಸ್ಟಾರ್ ಮೂಲಗಳು ತಿಳಿಸಿವೆ.
ಜಿಯೋಹಾಟ್‌ಸ್ಟಾರ್ ಪ್ಲಾಟ್‌ಫಾರ್ಮ್‌ನಲ್ಲಿ ಭಾರತ, ಇಂಗ್ಲೆಂಡ್ ಸೆಮಿಫೈನಲ್‌ನಲ್ಲಿ 6.5 ಕೋಟಿ ಗರಿಷ್ಠ ಏಕಕಾಲಿಕ ವೀಕ್ಷಣೆಯ ದಾಖಲೆಯನ್ನು ಫೈನಲ್ ಪಂದ್ಯ ಮುರಿದಿದೆ.
ಇದೇ ಮೈದಾನದಲ್ಲಿ 2023 ರ ನ.20 ರಂದು ಏಕದಿನ ವಿಶ್ವಕಪ್ ಫೈನಲ್ ಪಂದ್ಯದಲ್ಲಿ ಭಾರತ ಮತ್ತು ಆಸ್ಟ್ರೇಲಿಯಾ ಮುಖಾಮುಖಿಯಾಗಿದ್ದವು. ಆಗ ಟೀಂ ಇಂಡಿಯಾ ಸೋಲನುಭವಿಸಿತ್ತು. ಈ ವೇಳೆ 5.9 ಕೋಟಿ ಗರಿಷ್ಠ ಏಕಕಾಲಿಕ ವೀಕ್ಷಣೆ ಕಂಡಿತ್ತು. ಇದು ಈ ಹಿಂದಿನ ದಾಖಲೆಯನ್ನು ಮುರಿದಿತ್ತು.
ಭಾರತ ದಾಖಲೆಯ ಮೂರನೇ ಬಾರಿಗೆ ಟಿ20 ವಿಶ್ವಕಪ್ ಟ್ರೋಫಿ ಗೆದ್ದುಕೊಂಡಿದೆ. ಜೊತೆಗೆ ತವರಿನಲ್ಲಿ ಪ್ರಶಸ್ತಿಯನ್ನು ಗೆದ್ದ ಏಕೈಕ ದೇಶ ಎಂಬ ಹೆಗ್ಗಳಿಗೆ ಪಾತ್ರವಾಯಿತು.
Advertisement