IPL 2026: ಕೂಪರ್ ಕೊನೊಲಿ ಶತಕ ವ್ಯರ್ಥ, 33 ರನ್ ಗಳ ಅಂತರದಿಂದ SRH ಗೆಲುವು!

ಕೂಪರ್ ಕೊನೊಲಿ ಅವರ ಶತಕ ವ್ಯರ್ಥವಾಯಿತು. ಪಂಜಾಬ್ ಪರ ಬ್ಯಾಟ್ಸ್ ಮನ್ ಕೇವಲ 57 ಎಸೆತಗಳಲ್ಲಿ ತಮ್ಮ ಚೊಚ್ಚಲ ಟಿ20 ಶತಕವನ್ನು ಬಾರಿಸಿ ಮಿಂಚಿದರು.
SRH Player
ಸನ್ ರೈಸರ್ಸ್ ಹೈದರಾಬಾದ್
Updated on

ಹೈದರಾಬಾದ್: ಇಲ್ಲಿನ ರಾಜೀವ್ ಗಾಂಧಿ ಅಂತಾರಾಷ್ಟ್ರೀಯ ಕ್ರೀಡಾಂಗಣದಲ್ಲಿ ಬುಧವಾರ ರಾತ್ರಿ ನಡೆದ ಐಪಿಎಲ್ ಟೂರ್ನಿಯಲ್ಲಿ ಪಂಜಾಬ್ ಕಿಂಗ್ಸ್ ವಿರುದ್ಧ ಸನ್ ರೈಸರ್ಸ್ ಹೈದರಾಬಾದ್ 33 ರನ್ ಗಳ ಅಂತರದಿಂದ ಗೆಲುವು ಸಾಧಿಸಿತು.

ಕೂಪರ್ ಕೊನೊಲಿ ಅವರ ಶತಕ ವ್ಯರ್ಥವಾಯಿತು. ಪಂಜಾಬ್ ಪರ ಬ್ಯಾಟ್ಸ್ ಮನ್ ಕೇವಲ 57 ಎಸೆತಗಳಲ್ಲಿ ತಮ್ಮ ಚೊಚ್ಚಲ ಟಿ20 ಶತಕವನ್ನು ಬಾರಿಸಿ ಮಿಂಚಿದರು. ಐಪಿಎಲ್ ಇತಿಹಾಸದಲ್ಲಿ ಶತಕ ಗಳಿಸಿದ ಅತ್ಯಂತ ಕಿರಿಯ ವಿದೇಶಿ ಬ್ಯಾಟರ್ ಎಂಬ ದಾಖಲೆಗೂ ಪಾತ್ರರಾದರು.

ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಸನ್ ರೈಸ್ ಹೈದರಾಬಾದ್ ತಂಡ ನಿಗದಿತ 20 ಓವರ್ ಗಳಲ್ಲಿ 4 ವಿಕೆಟ್ ನಷ್ಟಕ್ಕೆ ಬೃಹತ್ 235 ರನ್ ಗಳಿಸಿತು. ಆರಂಭಿಕ ಆಟಗಾರರಾದ ಅಭಿಷೇಕ್ ಶರ್ಮಾ 35, ಟ್ರಾವಿಸ್ ಹೆಡ್ 38 ರನ್ ಗಳಿಸಿದರೆ, ಇಶಾನ್ ಕಿಶಾನ್ 55, ಹೆನ್ರಿಚ್ ಕ್ಲಾಸೆನ್ 69, ನಿತೀಶ್ ಕುಮಾರ್ ರೆಡ್ಡಿ 29, ರನ್ ಗಳಿಸಿದರು. ಪಂಜಾಬ್ ಕಿಂಗ್ಸ್ ಪರ ಅರ್ಷದೀಪ್ ಸಿಂಗ್, ಪರ್ಗೂಸನ್, ಯಜುರ್ವೇಂದ್ರ ಚಹಾಲ್, ವಿಜಯಕುಮಾರ್ ವೈಶಾಕ್ ತಲಾ ಒಂದೊಂದು ವಿಕೆಟ್ ಪಡೆದರು.

ಸನ್ ರೈಸರ್ಸ್ ಹೈದರಾಬಾದ್ ನೀಡಿದ 236 ರನ್ ಗಳ ಗೆಲುವಿನ ಗುರಿ ಬೆನ್ನಟ್ಟಿದ್ದ ಪಂಜಾಬ್ ಕಿಂಗ್ಸ್ ಪರ ಪ್ರಿಯಾಂಶು ಅರ್ಯ ಕೇವಲ 1 ರನ್ ಗಳಿಸಿ ಔಟಾದರೆ, ಪ್ರಭುಸಿಮ್ರಾನ್ ಸಿಂಗ್ 3 ರನ್ ಗಳಿಸಿ ಫೆವಿಲಿಯನ್ ಗೆ ತೆರಳಿದರು. ಬಳಿಕ ಕೂಪರ್ ಕಾನೊಲಿ 59 ಎಸೆತಗಳಲ್ಲಿ 8 ಸಿಕ್ಸರ್ , ಏಳು ಬೌಂಡರಿಗಳೊಂದಿಗೆ ಅಜೇಯ 107 ರನ್ ಸಿಡಿಸಿದರು. ಈ ಶತಕದೊಂದಿಗೆ, ಐಪಿಎಲ್ ಇತಿಹಾಸದಲ್ಲಿ ಶತಕ ಗಳಿಸಿದ ಅತ್ಯಂತ ಕಿರಿಯ ವಿದೇಶಿ ಬ್ಯಾಟರ್ ಎಂಬ ದಾಖಲೆಯನ್ನು ಕೊನೊಲಿ ನಿರ್ಮಿಸಿದ್ದಾರೆ.ಆದರೆ ಅವರ ಶತಕ ವ್ಯರ್ಥವಾಯಿತು.

SRH Player
IPL 2026: ಶಾಸಕರ ಟಿಕೆಟ್ ದಾಹಕ್ಕೆ ಫೈನಲ್ ಪಂದ್ಯ ಬೆಂಗಳೂರಿನಿಂದ ಅಹಮದಾಬಾದ್‌ಗೆ ಶಿಫ್ಟ್; ಡಿಕೆಶಿ ಹೇಳಿದ್ದೇನು?

ಉಳಿದಂತೆ ಮಾರ್ಕಾಸ್ ಸ್ಟೋಯ್ನಿಸ್ 28, ಸೂರ್ಯಂಶ್ ಶೆಡ್ಜ್ 25, ಮಾರ್ಕೊ ಜಾನ್ಸನ್ 19 ರನ್ ಗಳಿಸಿದರು. ಏನೇ ಮಾಡಿದ್ರು ಪಂಜಾಬ್ ನಿಗದಿತ 20 ಓವರ್ ಗಳಲ್ಲಿ 7ವಿಕೆಟ್ ನಷ್ಟಕ್ಕೆ 202 ರನ್ ಗಳಿಸಲಷ್ಟೇ ಶಕ್ತವಾಯಿತು. ಹೀಗಾಗಿ ಸನ್ ರೈಸರ್ಸ್ ಹೈದರಾಬಾದ್ 33 ರನ್ ಗಳಿಂದ ಗೆದ್ದು ಬೀಗಿತು. ಸನ್ ರೈಸರ್ಸ್ ಪರ ಪ್ಯಾಟ್ ಕಮ್ಮಿನ್ಸ್ 2, ಶಿವಂಗ್ ಕುಮಾರ್ ತಲಾ 2 ವಿಕೆಟ್ ಪಡೆದರೆ, ನಿತೀಶ್ ಕುಮಾರ್ ರೆಡ್ಡಿ, ಇಸಾನ್ ಮಾಲಿಂಗ, ಶಕೀಬ್ ಹುಸೇನ್ ತಲಾ ಒಂದೊಂದು ವಿಕೆಟ್ ಪಡೆದುಕೊಂಡರು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

X

Advertisement

X
Kannada Prabha
www.kannadaprabha.com