

ಬುಧವಾರ ನಡೆಯಲಿರುವ ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ವಿರುದ್ಧದ ನಿರ್ಣಾಯಕ ಪಂದ್ಯದಲ್ಲಿ ಕೋಲ್ಕತ್ತಾ ನೈಟ್ ರೈಡರ್ಸ್ (KKR) ತಂಡ ಗೆಲ್ಲಲೇಬೇಕಾದ ಅನಿವಾರ್ಯತೆ ಎದುರಾಗಿದ್ದು, ಪ್ರಮುಖ ಸ್ಪಿನ್ನರ್ ವರುಣ್ ಚರ್ಕವರ್ತಿ ಹೊರಗುಳಿಯುವ ಸಾಧ್ಯತೆ ಇದೆ. ತಮಿಳುನಾಡಿನ ಮಿಸ್ಟರಿ ಸ್ಪಿನ್ನರ್ ಎಡಗೈಗೆ ಆಗಿರುವ ಗಾಯದಿಂದಾಗಿ ಇನ್ನೂ ಸಂಪೂರ್ಣವಾಗಿ ಚೇತರಿಸಿಕೊಳ್ಳದಿದ್ದರೂ, ಇತ್ತೀಚಿನ ಪಂದ್ಯಗಳಲ್ಲಿ ಕೆಕೆಆರ್ ತಂಡದ ಭಾಗವಾಗಿದ್ದರು. ಗಾಯಗಳ ಹೊರತಾಗಿಯೂ, ವರುಣ್ ಐಪಿಎಲ್ 2026ರಲ್ಲಿ ಇದುವರೆಗೆ ಆಡಿರುವ 10 ಪಂದ್ಯಗಳಲ್ಲಿ 8 ವಿಕೆಟ್‌ಗಳನ್ನು ಪಡೆದಿದ್ದಾರೆ.
ಕ್ರಿಕ್‌ಬಜ್ ಪ್ರಕಾರ, ಕೆಕೆಆರ್ ಸಹಾಯಕ ಕೋಚ್ ಶೇನ್ ವ್ಯಾಟ್ಸನ್ ಪಂದ್ಯದ ಮುನ್ನಾದಿನ ಮಾಹಿತಿ ನೀಡಿದ್ದು, ಚಕ್ರವರ್ತಿ ಕಳೆದ ಎರಡು ಪಂದ್ಯಗಳಲ್ಲಿ ನೋವು ಅನುಭವಿಸಿದ್ದಾರೆ ಮತ್ತು ಹಿಂದಿನ ಪಂದ್ಯದಲ್ಲೂ ಅವರು ತುಂಬಾ ನೋವಿನಿಂದ ಬಳಲುತ್ತಿದ್ದರು. ಬುಧವಾರ ಆರ್‌ಸಿಬಿ ವಿರುದ್ಧದ ಪಂದ್ಯಕ್ಕೆ ಅವರು ಆಯ್ಕೆಗೆ ಲಭ್ಯವಿರುತ್ತಾರೆ ಎಂದು ತಂಡವು ಆಶಿಸಿದೆ ಎಂದರು. ಆದಾಗ್ಯೂ, ಆರ್‌ಸಿಬಿ ವಿರುದ್ಧದ ಪಂದ್ಯದಿಂದ ಮಿಸ್ಟರಿ ಸ್ಪಿನ್ನರ್ ಅನ್ನು ಹೊರಗಿಡುವ ಸಾಧ್ಯತೆ ಬಗ್ಗೆ ಸುಳಿವು ನೀಡಿದರು.
ವರದಿ ಪ್ರಕಾರ, ವರುಣ್ ಅಭ್ಯಾಸದ ಸಮಯದಲ್ಲಿ ಹಾಜರಿದ್ದರು. ಆದರೆ, ಪೂರ್ಣ ಟಿಲ್ಟ್ ಬೌಲಿಂಗ್ ಮಾಡಲಿಲ್ಲ. ಅವರು ಕೆಲವು ಸ್ಟ್ರೆಚ್‌ಗಳನ್ನು ಮಾಡುತ್ತಿದ್ದರು ಮತ್ತು ತಮ್ಮ ತಂಡದ ಸದಸ್ಯರೊಂದಿಗೆ ಮಾತನಾಡುತ್ತಿದ್ದರು. ಆದರೆ, ಗುರುವಾರ ಆರ್‌ಸಿಬಿ ವಿರುದ್ಧದ ಪಂದ್ಯದಲ್ಲಿ ಅವರು ಕೆಕೆಆರ್‌ನ ಪ್ಲೇಯಿಂಗ್ ಇಲೆವೆನ್‌ನ ಭಾಗವಾಗಿರುವ ಯಾವುದೇ ಸಕಾರಾತ್ಮಕ ಲಕ್ಷಣಗಳಿಲ್ಲ ಎನ್ನಲಾಗಿದೆ.
'ಖಂಡಿತ ಅವರು ಕೊನೆಯ ಎರಡು ಪಂದ್ಯದಲ್ಲಿ ಮತ್ತು ಕೊನೆಯ ಪಂದ್ಯದಲ್ಲಿ ತುಂಬಾ ನೋವಿನಿಂದ ಬಳಲುತ್ತಿದ್ದರು, ಆದರೂ ಅವರು ಇನ್ನೂ ಅದ್ಭುತವಾಗಿ ಬೌಲಿಂಗ್ ಮಾಡುತ್ತಿದ್ದಾರೆ... ಅವರು ನಾಳೆಗೆ ಲಭ್ಯರಿರುತ್ತಾರೆ ಎಂದು ನಮಗೆ ಖಚಿತವಿಲ್ಲ' ಎಂದು ಶೇನ್ ವ್ಯಾಟ್ಸನ್ ಪಂದ್ಯಕ್ಕೂ ಮುನ್ನ ಪತ್ರಿಕಾಗೋಷ್ಠಿಯಲ್ಲಿ ಹೇಳಿದರು.
ವರುಣ್ ಇಲ್ಲಿಯವರೆಗೆ 10 ಪಂದ್ಯಗಳನ್ನು ಆಡಿದ್ದರೂ, ಏಪ್ರಿಲ್ 19 ರಂದು ಆರ್‌ಆರ್ ವಿರುದ್ಧದ ಪಂದ್ಯದಲ್ಲಿ 3/19 ಅಂಕಿಅಂಶ ಅವರ ಅತ್ಯುತ್ತಮ ಪ್ರದರ್ಶನವಾಗಿತ್ತು. ಆ ಪಂದ್ಯದ ನಂತರ, ಎಡಗೈಯಲ್ಲಿ ಎರಡು ಮುರಿತಗಳಿಂದ ಚೇತರಿಸಿಕೊಳ್ಳುತ್ತಿದ್ದರೂ, ಬೌಲಿಂಗ್ ಮಾಡುತ್ತಿರುವುದಾಗಿ ಸ್ಪಿನ್ನರ್ ಬಹಿರಂಗಪಡಿಸಿದರು. ಡಿಸಿ ವಿರುದ್ಧದ ಪಂದ್ಯದಲ್ಲಿ ಕೆಕೆಆರ್ ವರುಣ್ ಚಕ್ರವರ್ತಿ ಅವರನ್ನು ಮತ್ತೊಮ್ಮೆ ಇಂಪ್ಯಾಕ್ಟ್ ಪ್ಲೇಯರ್ ಆಗಿ ಬಳಸಿಕೊಳ್ಳಬಹುದೇ ಎಂಬುದನ್ನು ಕಾದು ನೋಡಬೇಕಿದೆ.
ಕೆಕೆಆರ್ ಆಡಿರುವ 10 ಪಂದ್ಯಗಳಲ್ಲಿ 4 ಗೆಲುವು, 5 ಸೋಲು ಮತ್ತು ಒಂದು ಫಲಿತಾಂಶವಿಲ್ಲದೆ ಪಾಯಿಂಟ್ ಪಟ್ಟಿಯಲ್ಲಿ 8ನೇ ಸ್ಥಾನದಲ್ಲಿದೆ. ಐಪಿಎಲ್ 2026ರ ಪ್ಲೇಆಫ್‌ಗೆ ಪ್ರವೇಶಿಸುವ ಅವರ ಸಣ್ಣ ಭರವಸೆಯನ್ನು ಜೀವಂತವಾಗಿಡಲು ಅವರ ಉಳಿದ ಎಲ್ಲ ಪಂದ್ಯಗಳನ್ನು ಗೆಲ್ಲಬೇಕಾಗಿದೆ.
Advertisement