

ಮುಂಬೈ: ಇಲ್ಲಿನ ವಾಂಖೆಡೆ ಕ್ರೀಡಾಂಗಣದಲ್ಲಿ ನಡೆದ ಮುಂಬೈ ಇಂಡಿಯನ್ಸ್ ಮತ್ತು ರಾಜಸ್ಥಾನ್ ರಾಯಲ್ಸ್ ನಡುವಿನ ಐಪಿಎಲ್ ಪಂದ್ಯದಲ್ಲಿ ಶಾರ್ದೂಲ್ ಠಾಕೂರ್ ವಿರುದ್ಧ ರವೀಂದ್ರ ಜಡೇಜಾರ 'ಸ್ವೀಟ್ ರಿವೆಂಜ್' ಎಲ್ಲರ ಗಮನ ಸೆಳೆಯಿತು. ಈಗ ಈ ವಿಡಿಯೋ ಸಾಮಾಜಿಕ ತಾಣದಲ್ಲಿ ವೈರಲ್ ಆಗುತ್ತಿದೆ.
ಈ ಲೀಗ್‌ನ ಕೆಲವು ಪಂದ್ಯಗಳಲ್ಲಿ ಗಾಯದ ಸಮಸ್ಯೆಯಿಂದ ಹೊರಗುಳಿದಿದ್ದ ರವೀಂದ್ರ ಜಡೇಜಾ ಆಡುವ ಅವಕಾಶವನ್ನು ಪಡೆದರು. ರಾಜಸ್ಥಾನ್ ಇನಿಂಗ್ಸ್‌ನ ಕೊನೆಯ ಓವರ್ ಎಲ್ಲರ ಗಮನ ಸೆಳೆಯಿತು.
ಈಗ ಈ ವಿಡಿಯೋ ಸಾಮಾಜಿಕ ತಾಣದಲ್ಲಿ ವೈರಲ್ ಆಗುತ್ತಿದೆ. ಮುಂಬೈ ಇಂಡಿಯನ್ಸ್ ಪರ ಶಾರ್ದೂಲ್ ಠಾಕೂರ್ ಅಂತಿಮ ಓವರ್ ಎಸೆಯಲು ಮುಂದಾದರು.
ಅಂತಿಮ ಓವರ್‌ನ ನಾಲ್ಕನೇ ಎಸೆತದಲ್ಲಿ ಅವರು ನಿಧಾನಗತಿಯ ಎಸೆತ ಎಸೆದರು. ಇದನ್ನು ತಪ್ಪಾಗಿ ಗುರುತಿಸಿದ ಜಡೇಜಾ ಔಟ್ ಆದರು. ಜಡೇಜಾ ಅವರನ್ನು ಔಟ್ ಮಾಡಿದ ನಂತರ, ಶಾರ್ದೂಲ್ ತಮಾಷೆಯಾಗಿ ಅವರ ಬಳಿಗೆ ಹೋಗಿ ಸಂಭ್ರಮಾಚರಣೆ ಮಾಡಿದರು. ಆದರೆ ಅಂಪೈರ್ ನೋಬೌಲ್ ಎಂದು ಸೂಚಿಸಿದರು. ಈ ನಿರ್ಣಯ ಶಾರ್ದೂಲ್ ಮತ್ತು ಮುಂಬೈ ಇಂಡಿಯನ್ಸ್‌ನ ಸಂಭ್ರಮಾಚರಣೆಗೆ ಬ್ರೇಕ್ ಹಾಕಿತು.
ಫ್ರೀ- ಹಿಟ್ ಅವಕಾಶ ಲಭ್ಯವಾದಾಗ, ಜಡೇಜಾ ಮೈದಾನಕ್ಕೆ ಮರಳುವಾಗ, ಅವರು ಶಾರ್ದೂಲ್ ಅವರನ್ನು ಕಿಚಾಯಿಸಿದರು. ರವೀಂದ್ರ ಜಡೇಜಾ ಶಾರ್ದೂಲ್ ಅವರ ಬಳಿ ಹೋಗಿ ಡ್ಯಾನ್ಸ್ ಮಾಡಿ ಸಂಭ್ರಮಿಸಿದರು. ಈ ವಿಡಿಯೋಗಳು ಸಾಮಾಜಿಕ ತಾಣದಲ್ಲಿ ಸಖತ್ ವೈರಲ್ ಆಗುತ್ತಿದೆ.
Advertisement