ಶ್ರೇಯಾಂಕಾ ಪಾಟೀಲ್ ಸ್ಫೋಟಕ ಬ್ಯಾಟಿಂಗ್: 5 ಸಿಕ್ಸರ್, 7 ಬೌಂಡರಿ, 29 ಎಸೆತಗಳಲ್ಲಿ 76 ರನ್; ಆಯ್ಕೆದಾರರಿಗೆ ಕಠಿಣ ಸಂದೇಶ!

ಆಕ್ರಮಣಕಾರಿ ಆಟವನ್ನು ಮುಂದುವರಿಸಿದ ಶ್ರೇಯಾಂಕಾ, 29 ಎಸೆತಗಳಲ್ಲಿ 5 ಸಿಕ್ಸರ್, 7 ಬೌಂಡರಿ ಸೇರಿದಂತೆ 71 ರನ್‌ಗಳನ್ನು ಕಲೆಹಾಕಿದರು.
Senior women T20 trophy: Shreyanka Patil smashes 20-ball fifty vs Delhi, sends strong message to India selectors
ಶ್ರೇಯಾಂಕಾ ಪಾಟೀಲ್
Updated on: 

ಅಹಮದಾಬಾದ್‌: ಹಿರಿಯ ಮಹಿಳಾ ಟಿ20 ಟ್ರೋಫಿ ಸೂಪರ್ ಲೀಗ್‌ನಲ್ಲಿ ಬುಧವಾರ ದೆಹಲಿ ವಿರುದ್ಧ ಕರ್ನಾಟಕದ ಶ್ರೇಯಾಂಕಾ ಪಾಟೀಲ್ ಅವರು ಸ್ಫೋಟ ಬ್ಯಾಟಿಂಗ್ ಮಾಡಿದ್ದು, ಕೇವಲ 20 ಎಸೆತಗಳಲ್ಲಿ ಅರ್ಧಶತಕ ಸಿಡಿಸುವ ಮೂಲಕ ಭಾರತ ತಂಡದ ಆಯ್ಕೆ ಸಮಿತಿಗೆ ಕಠಿಣ ಸಂದೇಶ ರವಾನಿಸಿದ್ದಾರೆ.

ಇಂದು ಅಹಮದಾಬಾದ್‌ನ ನರೇಂದ್ರ ಮೋದಿ ಕ್ರೀಡಾಂಗಣದ 'ಗ್ರೌಂಡ್ ಬಿ'ಯಲ್ಲಿ ನಡೆದ ಪಂದ್ಯದಲ್ಲಿ, ಆಫ್-ಸ್ಪಿನ್ ಬೌಲಿಂಗ್ ಮಾಡುವ ಆಲ್‌ರೌಂಡರ್ ಶ್ರೇಯಾಂಕಾ ಪಾಟೀಲ್ ಅವರು, ಬಲಗೈ ವೇಗದ ಬೌಲರ್ ಶಿವಾನಿ ಅವರ ಎಸೆತವೊಂದನ್ನು ಮೈದಾನದ ಆಚೆಗೆ ಕಳುಹಿಸುವ ಮೂಲಕ ತಮ್ಮ ಚೊಚ್ಚಲ ಟಿ20 ಅರ್ಧಶತಕವನ್ನು ದಾಖಲಿಸಿದರು.

ಆಕ್ರಮಣಕಾರಿ ಆಟವನ್ನು ಮುಂದುವರಿಸಿದ ಶ್ರೇಯಾಂಕಾ, 29 ಎಸೆತಗಳಲ್ಲಿ 5 ಸಿಕ್ಸರ್, 7 ಬೌಂಡರಿ ಸೇರಿದಂತೆ 71 ರನ್‌ಗಳನ್ನು ಕಲೆಹಾಕಿದರು.

Senior women T20 trophy: Shreyanka Patil smashes 20-ball fifty vs Delhi, sends strong message to India selectors
ಟೀಂ ಇಂಡಿಯಾ ವಿರುದ್ಧ ICC ಕಠಿಣ ಕ್ರಮ: ಆಟಗಾರರ ಪಂದ್ಯ ಶುಲ್ಕ ಶೇ. 35ರಷ್ಟು ಕಟ್; ಇಲ್ಲಿದೆ ಕಾರಣ...

ಮೊದಲು ಬ್ಯಾಟಿಂಗ್ ಮಾಡಲು ಆಹ್ವಾನಿಸಲ್ಪಟ್ಟ ಕರ್ನಾಟಕ ತಂಡವು, 12.1 ಓವರ್‌ಗಳಲ್ಲಿ 84 ರನ್‌ಗಳಿಗೆ 5 ವಿಕೆಟ್‌ಗಳನ್ನು ಕಳೆದುಕೊಂಡು ಸಂಕಷ್ಟದಲ್ಲಿದ್ದಾಗ ಶ್ರೇಯಾಂಕಾ ಕ್ರೀಸ್‌ಗೆ ಬಂದರು. ಅವರ ಭರ್ಜರಿ ಅರ್ಧಶತಕದ ನೆರವಿನಿಂದ ಕರ್ನಾಟಕ ತಂಡವು 20 ಓವರ್‌ಗಳಲ್ಲಿ 8 ವಿಕೆಟ್‌ ನಷ್ಟಕ್ಕೆ 175 ರನ್‌ಗಳನ್ನು ಗಳಿಸಿತು.

ಆದಾಗ್ಯೂ, ಶ್ರೇಯಾಂಕಾ ಅವರ ಪ್ರಯತ್ನ ವ್ಯರ್ಥವಾಯಿತು. ದೆಹಲಿ ತಂಡವು 17 ಓವರ್‌ಗಳಲ್ಲಿಯೇ ಗುರಿಯನ್ನು ತಲುಪಿ 5 ವಿಕೆಟ್‌ಗಳ ಜಯ ಸಾಧಿಸಿತು. ಇದರೊಂದಿಗೆ, ಸೂಪರ್ ಲೀಗ್‌ನಲ್ಲಿ ಕರ್ನಾಟಕ ತಂಡವು ತನ್ನ ಮೊದಲ ಸೋಲನ್ನು ಅನುಭವಿಸಬೇಕಾಯಿತು.

ಈ ಪಂದ್ಯದಲ್ಲಿ ದೆಹಲಿ ಗೆಲುವು ಸಾಧಿಸಿದರೂ, ಕರ್ನಾಟಕದ ಪರ ಆಡಿದ ಶ್ರೇಯಾಂಕಾ ಪಾಟೀಲ್ ತಮ್ಮ ಬ್ಯಾಟಿಂಗ್ ಮೂಲಕ ಅಭಿಮಾನಿಗಳ ಮನ ಗೆದ್ದರು.

ಆಯ್ಕೆದಾರರಿಗೆ ಕಠಿಣ ಸಂದೇಶ

ಭಾರತ ಮಹಿಳಾ ತಂಡ ನವೆಂಬರ್ 9ರಂದು ದಕ್ಷಿಣ ಆಫ್ರಿಕಾ ಪ್ರವಾಸ ಕೈಗೊಳ್ಳಲಿದೆ. ಈ ಪ್ರವಾಸಕ್ಕಾಗಿ ಬಿಸಿಸಿಐ ಮೂರು ತಂಡಗಳನ್ನು ಪ್ರಕಟಿಸಿತ್ತು. ಈ ಪ್ರವಾಸದಲ್ಲಿ ಭಾರತ ತಂಡ ಮೂರು ಮಾದರಿಯ ಕ್ರಿಕೆಟ್ ಸರಣಿಗಳಲ್ಲಿ ಆಡಲಿದೆ. ಆದರೆ, ಕರ್ನಾಟಕದ ಆಟಗಾರ್ತಿ ಶ್ರೇಯಾಂಕಾ ಪಾಟೀಲ್‌ಗೆ ಯಾವುದೇ ಸರಣಿಯಲ್ಲೂ ಸ್ಥಾನ ನೀಡಲಾಗಿಲ್ಲ. ಗಾಯದಿಂದ ಚೇತರಿಸಿಕೊಂಡು ತಂಡಕ್ಕೆ ಮರಳುವ ನಿರೀಕ್ಷೆಯಲ್ಲಿದ್ದ ಶ್ರೇಯಾಂಕಾಗೆ ಆಯ್ಕೆ ಸಮಿತಿ ನಿರಾಸೆ ಮೂಡಿಸಿತ್ತು. ಇದಕ್ಕೂ ಮೊದಲು ಜಿಂಬಾಬ್ವೆ ವಿರುದ್ಧದ ಸರಣಿಗೂ ಅವರನ್ನು ಆಯ್ಕೆ ಮಾಡಿರಲಿಲ್ಲ. ಹೀಗಾಗಿ, ಭಾರತ ತಂಡಕ್ಕೆ ಮರಳಲು ಎದುರು ನೋಡುತ್ತಿದ್ದ ಶ್ರೇಯಾಂಕಾ ಇದೀಗ ದೇಶೀಯ ಕ್ರಿಕೆಟ್‌ನಲ್ಲಿ ತಮ್ಮ ಸಾಮರ್ಥ್ಯವನ್ನು ಸಾಬೀತುಪಡಿಸುವ ಮೂಲಕ ಆಯ್ಕೆದಾರರಿಗೆ ಕಠಿಣ ಸಂದೇಶ ರವಾನಿಸಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X