Asia Cup Rising Stars 2026: ಡಕೌಟ್ ಆದ ಹರ್ಷಿತ್ ರಾಣಾ ಕೆಣಕಿದ ಪಾಕ್ ಬೌಲರ್, ಮೈದಾನದಲ್ಲಿ ಮಾತಿನ ಚಕಮಕಿ, Video

ಮೊದಲ ಇನ್ನಿಂಗ್ಸ್‌ನಲ್ಲಿ ಪಾಕಿಸ್ತಾನ ಎ ಆಟಗಾರರೊಂದಿಗೆ ಮಾತಿನ ಚಕಮಕಿ ನಡೆಸಿದ್ದ ಹರ್ಷಿತ್ ರಾಣಾ, ನಂತರ ಬ್ಯಾಟಿಂಗ್ ಮಾಡಲು ಮೈದಾನಕ್ಕೆ ಬಂದಾಗ ಎದುರಾಳಿ ಆಟಗಾರರ ತೀವ್ರ ಪ್ರತಿಕ್ರಿಯೆಗೆ ಗುರಿಯಾದರು.
Pakistan Bowler's Heated Reaction
ಹರ್ಷಿತ್ ರಾಣಾ
Updated on: 

ದೋಹಾ: 'ಏಷ್ಯಾ ಕಪ್ ರೈಸಿಂಗ್ ಸ್ಟಾರ್ಸ್ 2026' ಟೂರ್ನಿಯ 'ಇಂಡಿಯಾ ಎ' ಮತ್ತು 'ಪಾಕಿಸ್ತಾನ ಎ' ನಡುವಿನ ಪಂದ್ಯ ಮೈದಾನದಲ್ಲಿ ಸಾಕಷ್ಟು ಮಾತಿನ ಚಕಮಕಿಗೆ ಕಾರಣವಾಯಿತು.

ಈ ಘಟನೆಗಳ ಕೇಂದ್ರಬಿಂದುವಾಗಿದ್ದವರು ಭಾರತದ ವೇಗದ ಬೌಲರ್ ಹರ್ಷಿತ್ ರಾಣಾ, ಮೊದಲ ಇನ್ನಿಂಗ್ಸ್‌ನಲ್ಲಿ ಪಾಕಿಸ್ತಾನ ಎ ಆಟಗಾರರೊಂದಿಗೆ ಮಾತಿನ ಚಕಮಕಿ ನಡೆಸಿದ್ದ ಹರ್ಷಿತ್ ರಾಣಾ, ನಂತರ ಬ್ಯಾಟಿಂಗ್ ಮಾಡಲು ಮೈದಾನಕ್ಕೆ ಬಂದಾಗ ಎದುರಾಳಿ ಆಟಗಾರರ ತೀವ್ರ ಪ್ರತಿಕ್ರಿಯೆಗೆ ಗುರಿಯಾದರು.

ಪಾಕಿಸ್ತಾನ ಎ ತಂಡ ಬ್ಯಾಟಿಂಗ್ ಮಾಡುತ್ತಿದ್ದಾಗಲೆ ಈ ಮಾತಿನ ಚಕಮಕಿಗಳು ಆರಂಭವಾಗಿದ್ದವು. ಈ ವೇಳೆ ರಾಣಾ ಎದುರಾಳಿ ಬ್ಯಾಟರ್‌ಗಳೊಂದಿಗೆ ವಾಗ್ವಾದ ನಡೆಸಿದ್ದರು. ವಿಶೇಷವಾಗಿ, ಆಯುಷ್ ಬದೋನಿ ಅವರ ಬೌಲಿಂಗ್‌ನಲ್ಲಿ ಶಮೈಲ್ ಹುಸೇನ್ ಅವರ ಕ್ಯಾಚ್ ಹಿಡಿದ ನಂತರ ಅವರೊಂದಿಗೆ ರಾಣಾ ಮಾತಿನ ಚಕಮಕಿ ನಡೆಸಿದ್ದರು. ಆದರೆ ಈ ನಾಟಕೀಯ ಸನ್ನಿವೇಶಗಳು ಅಲ್ಲಿಗೆ ಮುಗಿಯಲಿಲ್ಲ.

45ನೇ ಓವರ್‌ನಲ್ಲಿ ಹರ್ಷಿತ್ ರಾಣಾ ಯಾವುದೇ ರನ್ ಗಳಿಸದೆ (ಶೂನ್ಯಕ್ಕೆ) ಔಟಾದರು. ಅವರು ಡ್ರೆಸ್ಸಿಂಗ್ ರೂಮ್‌ಗೆ ಮರಳುತ್ತಿದ್ದಾಗ, ಪಾಕಿಸ್ತಾನದ ಸ್ಪಿನ್ನರ್ ಮೊಕೀಮ್ ಕೆಣಕಿದ್ದಾರೆ. ಈ ಪ್ರತಿಕ್ರಿಯೆಯಿಂದ ಪರಿಸ್ಥಿತಿ ಮತ್ತಷ್ಟು ಉದ್ವಿಗ್ನಗೊಂಡಿತು. ರಾಣಾ ಮೈದಾನದಿಂದ ಹೊರನಡೆಯುತ್ತಿದ್ದಾಗ ಮೊಕೀಮ್ ತಡೆಯಲು ಅವರ ತಂಡದ ಸಹ ಆಟಗಾರೊಬ್ಬರು ಮಧ್ಯಪ್ರವೇಶಿಸಬೇಕಾಯಿತು.

ಪಂದ್ಯದಲ್ಲಿ ಪಾಕಿಸ್ತಾನ ಗೆಲುವು ಸಾಧಿಸಿತು. 'ಗ್ರೂಪ್ ಬಿ' ಹಂತದ ಈ ಮುಖಾಮುಖಿಯಲ್ಲಿ ಅವರು 'ಇಂಡಿಯಾ ಎ' ವಿರುದ್ಧ 48 ರನ್‌ಗಳ ಜಯ ಸಾಧಿಸಿದರು ಮತ್ತು ತಮ್ಮ ಸಾಂಪ್ರದಾಯಿಕ ಎದುರಾಳಿಗಳಿಗೆ 'ರೈಸಿಂಗ್ ಸ್ಟಾರ್ಸ್' ಟೂರ್ನಿಯಲ್ಲಿ ಸೋಲುಣಿಸಿದರು.

Pakistan Bowler's Heated Reaction
'ಖಂಡಿತಾ ನಾವು ಸಂಕಷ್ಟದಲ್ಲಿದ್ದೇವೆ': ಭಾರತದ ಬ್ಯಾಟಿಂಗ್ ಅಬ್ಬರಕ್ಕೆ ನ್ಯೂಜಿಲೆಂಡ್ ಕಂಗಾಲು; ಸೋಲಿನ ಭೀತಿ ಒಪ್ಪಿಕೊಂಡ ಕಿವೀಸ್ ಆಟಗಾರ!

ಈ ಪಂದ್ಯದಲ್ಲಿ ಹರ್ಷಿತ್ ರಾಣಾ ತಮ್ಮ ಆಕ್ರಮಣಕಾರಿ ಆಟದ ಶೈಲಿಯ ಮೂಲಕ ಗಮನ ಸೆಳೆದರು. ಪಾಕಿಸ್ತಾನ ಎ ಬ್ಯಾಟರ್‌ಗಳೊಂದಿಗೆ ಮಾತಿನ ಚಕಮಕಿಯಲ್ಲಿ ತೊಡಗಿಸಿಕೊಂಡರು. ಹುಸೇನ್ ಅವರನ್ನು ಬೀಳ್ಕೊಟ್ಟ ರೀತಿ ಈಗಾಗಲೇ ಉದ್ವಿಗ್ನವಾಗಿದ್ದ ಈ ಪಂದ್ಯದಲ್ಲಿ ಮತ್ತೊಂದು ಸಂಘರ್ಷದ ಕ್ಷಣವನ್ನು ಸೃಷ್ಟಿಸಿತು.

ಭಾವೋದ್ರೇಕಗಳು ಹೆಚ್ಚಾಗಿದ್ದ ಈ ಸಂದರ್ಭದಲ್ಲಿ ಭಾರತದ ವೇಗಿ ರಾಣಾ ಅವರು ಎದುರಾಳಿ ತಂಡದ ಆಕ್ರಮಣಕಾರಿ ವರ್ತನೆಯನ್ನು ಎದುರಿಸಬೇಕಾಯಿತು. ಈ ಬಾರಿ, ಪಾಕಿಸ್ತಾನದ ಸ್ಪಿನ್ನರ್ ಸುಫ್ಯಾನ್ ಮೊಕೀಮ್ ರಾಣಾಗೆ ಏನೋ ಹೇಳಲು ಮುಂದಾದಂತೆ ಕಂಡುಬಂತು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X