ವೃತ್ತಿ ಜೀವನದ ಬಹು ದೊಡ್ಡ ಕನಸನ್ನು ರಿವೀಲ್ ಮಾಡಿದ ವೈಭವ್ ಸೂರ್ಯವಂಶಿ! Video

ವೆಸ್ಟ್ ಇಂಡೀಸ್ ವಿರುದ್ಧದ ಐದು ಪಂದ್ಯಗಳ T20I ಸರಣಿಯು ಪ್ರಾರಂಭವಾಗುತ್ತಿರುವಂತೆಯೇ, ವೈಭವ್ ತಮ್ಮ ವೃತ್ತಿಜೀವನದಲ್ಲಿ ಸಾಧಿಸಲು ಬಯಸುವ ಪ್ರಮುಖ ಗುರಿಗಳ ಬಗ್ಗೆ ಮುಕ್ತವಾಗಿ ಮಾತನಾಡಿದ್ದಾರೆ.
Vaibhav Sooryavanshi
ವೈಭವ್ ಸೂರ್ಯವಂಶಿ
Updated on: 

ಮುಂಬೈ: ಕೇವಲ 15ನೇ ವಯಸ್ಸಿನಲ್ಲಿಯೇ ತಮ್ಮ ಸ್ಫೋಟಕ ಬ್ಯಾಟಿಂಗ್ ಮೂಲಕ ಭಾರತೀಯ ಕ್ರಿಕೆಟ್‌ನಲ್ಲಿ ತಮ್ಮದೇ ಆದ ಛಾಪು ಮೂಡಿಸಿರುವ ವೈಭವ್ ಸೂರ್ಯವಂಶಿ, ಭಾರತದ T20I ತಂಡದಲ್ಲಿ ಸ್ಥಾನ ಗಿಟ್ಟಿಸಿಕೊಂಡಿದ್ದು, ದೇಶದ ಅತ್ಯಂತ ಭರವಸೆಯ ಆಟಗಾರರಲ್ಲಿ ಒಬ್ಬರೆಂದು ಪರಿಗಣಿಸಲ್ಪಟ್ಟಿದ್ದಾರೆ.

ವೆಸ್ಟ್ ಇಂಡೀಸ್ ವಿರುದ್ಧದ ಐದು ಪಂದ್ಯಗಳ T20I ಸರಣಿಯು ಪ್ರಾರಂಭವಾಗುತ್ತಿರುವಂತೆಯೇ, ವೈಭವ್ ತಮ್ಮ ವೃತ್ತಿಜೀವನದಲ್ಲಿ ಸಾಧಿಸಲು ಬಯಸುವ ಪ್ರಮುಖ ಗುರಿಗಳ ಬಗ್ಗೆ ಮುಕ್ತವಾಗಿ ಮಾತನಾಡಿದ್ದಾರೆ.

ವೈಭವ್ ಸೂರ್ಯವಂಶಿ ತನ್ನ ಅತಿದೊಡ್ಡ ಕನಸನ್ನು ಬಹಿರಂಗಪಡಿಸಿದ್ದಾರೆ. ಸ್ಟಾರ್ ಸ್ಪೋರ್ಟ್ಸ್‌ನ ವಿಶೇಷ ಸಂದರ್ಶನವೊಂದರಲ್ಲಿ ಪಾಲ್ಗೊಂಡಿದ್ದ ವೈಭವ್, 'ಬ್ಲೈಂಡ್ Ranking (ಕಣ್ಣಿಗೆ ಕಾಣದಂತೆ ಶ್ರೇಯಾಂಕ ನೀಡುವ) ಸವಾಲಿನಲ್ಲಿ ಭಾಗವಹಿಸಿದರು. ಅವರಿಗೆ ಕ್ರಿಕೆಟ್‌ಗೆ ಸಂಬಂಧಿಸಿದ ಆರು ಸಂಭಾವ್ಯ ಸಾಧನೆಗಳನ್ನು ನೀಡಲಾಗಿತ್ತು. ಅವುಗಳನ್ನು ತಾವು ಎಷ್ಟು ಸಾಧಿಸಲು ಬಯಸುತ್ತೇವೆಯೋ ಅದರ ಆಧಾರದ ಮೇಲೆ ಶ್ರೇಯಾಂಕ ನೀಡುವಂತೆ ಕೇಳಲಾಗಿತ್ತು.

ಈ 15 ವರ್ಷದ ಆಟಗಾರನು ಒಂದೇ ಓವರ್‌ನಲ್ಲಿ ಆರು ಸಿಕ್ಸರ್‌ಗಳನ್ನು ಬಾರಿಸುವುದನ್ನು ಮೊದಲ ಸ್ಥಾನದಲ್ಲಿರಿಸುವ ಮೂಲಕ ಅದನ್ನು T20 ಕ್ರಿಕೆಟ್‌ನಲ್ಲಿ ತಮ್ಮ ಅತಿದೊಡ್ಡ ಮಹತ್ವಾಕಾಂಕ್ಷೆಯನ್ನಾಗಿ ಗುರುತಿಸಿಕೊಂಡರು. T20I ಇತಿಹಾಸದಲ್ಲಿ ಅತಿ ವೇಗದ ಶತಕವನ್ನು ಗಳಿಸುವುದಕ್ಕೆ ಅವರು ಎರಡನೇ ಸ್ಥಾನ ನೀಡಿದರೆ, ಕ್ರಿಕೆಟ್ ಇತಿಹಾಸದಲ್ಲೇ ಅತಿ ಉದ್ದದ ಸಿಕ್ಸರ್ ಬಾರಿಸುವುದು ಮೂರನೇ ಸ್ಥಾನ ನೀಡಿದ್ದಾರೆ.

ಆ ಆರು ಸಾಧನೆಗಳನ್ನು ವೈಭವ್ ಸೂರ್ಯವಂಶಿ ಈ ಕೆಳಗಿನಂತೆ ಶ್ರೇಣೀಕರಿಸಿದ್ದಾರೆ

1. ಒಂದೇ ಓವರ್‌ನಲ್ಲಿ ಆರು ಸಿಕ್ಸರ್‌ಗಳನ್ನು ಬಾರಿಸುವುದು

2. T20I ಇತಿಹಾಸದಲ್ಲೇ ಅತ್ಯಂತ ವೇಗದ ಶತಕವನ್ನು ಗಳಿಸುವುದು

3. ಕ್ರಿಕೆಟ್ ಇತಿಹಾಸದಲ್ಲೇ ಅತಿ ದೂರದ ಸಿಕ್ಸರ್ ಬಾರಿಸುವುದು

4. ಭಾರತಕ್ಕಾಗಿ ಅತಿ ಹೆಚ್ಚು T20I ಶತಕಗಳನ್ನು ಗಳಿಸುವುದು

5. ಅಂತಿಮ ಎಸೆತದಲ್ಲಿ ಭಾರತಕ್ಕಾಗಿ ಪಂದ್ಯವನ್ನು ಗೆಲ್ಲಿಸಿಕೊಡುವುದು

6. ಕ್ರಿಕೆಟ್ ಇತಿಹಾಸದಲ್ಲಿ ಚಿರಸ್ಥಾಯಿಯಾಗಿ ಉಳಿಯುವಂತಹ ಕ್ಯಾಚ್ ಅನ್ನು ಹಿಡಿಯುವುದು

ವೈಭವ್ ವೆಸ್ಟ್ ಇಂಡೀಸ್ ವಿರುದ್ಧ ಆಡುವರೇ? ಅಫ್ಘಾನಿಸ್ತಾನ ವಿರುದ್ಧದ ಇತ್ತೀಚಿನ ಟಿ20 ಸರಣಿಯಲ್ಲಿ ಆಡುವ ಭಾರತದ ಹನ್ನೊಂದರ ಬಳಗದಲ್ಲಿ ವೈಭವ್ ಸೂರ್ಯವಂಶಿ ಅವರಿಗೆ ಸ್ಥಾನ ಸಿಕ್ಕಿರಲಿಲ್ಲ; ಆ ಸರಣಿಯಲ್ಲಿ ಅಭಿಷೇಕ್ ಶರ್ಮಾ ಮತ್ತು ಸಂಜು ಸ್ಯಾಮ್ಸನ್ ಆರಂಭಿಕ ಆಟಗಾರರಾಗಿ ಕಣಕ್ಕಿಳಿದಿದ್ದರು.

Vaibhav Sooryavanshi
ವೈಭವ್ ಸೂರ್ಯವಂಶಿ ಇಷ್ಟ ಆದರೆ ಪ್ರಭ್‌ಸಿಮ್ರನ್ ಜೊತೆಗೆ ಬ್ಯಾಟಿಂಗ್ ಮಾಡುವುದು ಹೆಚ್ಚು ಇಷ್ಟ; ಕಾರಣ ತಿಳಿಸಿದ ಪ್ರಿಯಾಂಶ್ ಆರ್ಯ

ಆದರೆ, ಏಷ್ಯನ್ ಗೇಮ್ಸ್‌ನಲ್ಲಿ ಅವರು ಭಾರತದ ಪರ ಆಡಿದ್ದರು ಮತ್ತು ಅಲ್ಲಿ ಅಭಿಷೇಕ್ ಅವರೊಂದಿಗೆ ಇನ್ನಿಂಗ್ಸ್ ಆರಂಭಿಸಿದ್ದರು. ಆಗ ಸಂಜು ಮೂರನೇ ಕ್ರಮಾಂಕದಲ್ಲಿ ಬ್ಯಾಟಿಂಗ್ ಮಾಡಿದ್ದರು. ಇದರಿಂದಾಗಿ ಬ್ಯಾಟಿಂಗ್ ಕ್ರಮಾಂಕದಲ್ಲಿ ಬದಲಾವಣೆ ಉಂಟಾಗಿತ್ತು. ಆ ಟೂರ್ನಿಯಲ್ಲಿ ವೈಭವ್ ಅವರ ಪ್ರದರ್ಶನ ಸಾಧಾರಣವಾಗಿತ್ತು ಅವರು ಆಡಿದ ಎರಡು ಪಂದ್ಯಗಳಲ್ಲಿ ಒಟ್ಟು 53 ರನ್ ಗಳಿಸಿದ್ದರು.

ವೆಸ್ಟ್ ಇಂಡೀಸ್ ವಿರುದ್ಧದ ಭಾರತದ ಐದು ಪಂದ್ಯಗಳ ಟಿ20 ಸರಣಿಯು ಇಂದು ಆರಂಭವಾಗಲಿದೆ. ಮೊದಲ ಪಂದ್ಯದಲ್ಲಿ ವೈಭವ್ ಅವರಿಗೆ ಅವಕಾಶ ಸಿಗಲಿದೆಯೇ ಎಂಬುದು ಈಗಿರುವ ಪ್ರಮುಖ ಪ್ರಶ್ನೆಯಾಗಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com