'SRH ಒಡತಿ ಕಾವ್ಯಾ ಮಾರನ್ ಪತಿ CSK ಅಭಿಮಾನಿ': ಇಂಟರ್ನೆಟ್‌ನಲ್ಲಿ ಸಂಚಲನ ಮೂಡಿಸಿದ ಅನಿರುದ್ಧ್ ರವಿಚಂದರ್ ಜೊತೆಗಿನ ವಿವಾಹ

ಈ ಪೋಸ್ಟ್ ಮೂಲಕ ವಿವಾಹದ ವಿಷಯ ಅಧಿಕೃತವಾಗುತ್ತಿದ್ದಂತೆಯೇ, ಸಾಮಾಜಿಕ ಜಾಲತಾಣಗಳಲ್ಲಿನ ಕ್ರಿಕೆಟ್ ಅಭಿಮಾನಿಗಳು ತಕ್ಷಣವೇ ಕೆಲವು ಕುತೂಹಲಕಾರಿ ವಿಷಯಗಳ ಕುರಿತು ಚರ್ಚಿಸಲು ಪ್ರಾರಂಭಿಸಿದರು.
Kavya Maran and Anirudh Ravichander
ಕಾವ್ಯಾ ಮಾರನ್ - ಅನಿರುದ್ಧ್ ರವಿಚಂದ್ರನ್
Updated on: 

ಸನ್‌ರೈಸರ್ಸ್ ಹೈದರಾಬಾದ್ ತಂಡದ ಒಡತಿ ಕಾವ್ಯಾ ಮಾರನ್ ಹಾಗೂ ಸಂಗೀತ ನಿರ್ದೇಶಕ ಅನಿರುದ್ಧ್ ರವಿಚಂದರ್ ವಿವಾಹವಾಗಲಿದ್ದಾರೆ ಎಂಬುದು ಇದೀಗ ಖಚಿತಗೊಂಡಿದೆ. ತೆಲಂಗಾಣ ಮುಖ್ಯಮಂತ್ರಿ ರೇವಂತ್ ರೆಡ್ಡಿ ಅವರನ್ನು ಕಾವ್ಯಾ ಪೋಷಕರಾದ ಕಲಾನಿಧಿ ಮಾರನ್ ಮತ್ತು ಕಾವೇರಿ ಮಾರನ್ ಭೇಟಿಯಾದ ನಂತರ ಈ ವಿಷಯ ದೃಢಪಟ್ಟಿದ್ದು, ಈ ಭೇಟಿಗೆ ಸಂಬಂಧಿಸಿದ ವಿಡಿಯೋ ಮತ್ತು ಚಿತ್ರಗಳನ್ನು ಹಂಚಿಕೊಳ್ಳಲಾಗಿದೆ. ತಮ್ಮ ಮಗಳ ವಿವಾಹ ಆರತಕ್ಷತೆಗೆ ಮುಖ್ಯಮಂತ್ರಿಯವರನ್ನು ಆಹ್ವಾನಿಸಲು ದಂಪತಿ ಅವರನ್ನು ಭೇಟಿಯಾಗಿದ್ದರು. ನವೆಂಬರ್ 21 ರಂದು ಚೆನ್ನೈನಲ್ಲಿ ಆರತಕ್ಷತೆ ಕಾರ್ಯಕ್ರಮ ನಡೆಯಲಿದೆ ಎಂಬ ಮಾಹಿತಿಯೂ ಈ ಪೋಸ್ಟ್‌ನಲ್ಲಿದೆ.

'ಸನ್ ಗ್ರೂಪ್ ಅಧ್ಯಕ್ಷರಾದ ಕಲಾನಿಧಿ ಮಾರನ್ ಮತ್ತು ಅವರ ಪತ್ನಿ ಶ್ರೀಮತಿ ಕಾವೇರಿ ಮಾರನ್ ಅವರು, ಜುಬಿಲಿ ಹಿಲ್ಸ್‌ನಲ್ಲಿರುವ ಗೌರವಾನ್ವಿತ ಮುಖ್ಯಮಂತ್ರಿ ಎ. ರೇವಂತ್ ರೆಡ್ಡಿ ಅವರ ನಿವಾಸಕ್ಕೆ ಭೇಟಿ ನೀಡಿ, ತಮ್ಮ ಮಗಳು ಕಾವ್ಯಾ ಮಾರನ್ ಅವರ ವಿವಾಹ ಆರತಕ್ಷತೆಗೆ ಅವರನ್ನು ಆಹ್ವಾನಿಸಿದರು' ಎಂದು ತೆಲಂಗಾಣ ಮುಖ್ಯಮಂತ್ರಿಗಳ ಕಚೇರಿ (CMO) ತನ್ನ ಪೋಸ್ಟ್‌ನಲ್ಲಿ ತಿಳಿಸಿದೆ.

'ಕಾವ್ಯಾ ಮಾರನ್ ಮತ್ತು ಅನಿರುದ್ಧ್ ರವಿಚಂದರ್ ಅವರ ವಿವಾಹ ಆರತಕ್ಷತೆಯು ನವೆಂಬರ್ 21 ರಂದು ಚೆನ್ನೈನಲ್ಲಿ ನಡೆಯಲಿದೆ' ಎಂದು ಅದರಲ್ಲಿ ತಿಳಿಸಲಾಗಿದೆ.

ಈ ಪೋಸ್ಟ್ ಮೂಲಕ ವಿವಾಹದ ವಿಷಯ ಅಧಿಕೃತವಾಗುತ್ತಿದ್ದಂತೆಯೇ, ಸಾಮಾಜಿಕ ಜಾಲತಾಣಗಳಲ್ಲಿನ ಕ್ರಿಕೆಟ್ ಅಭಿಮಾನಿಗಳು ತಕ್ಷಣವೇ ಕೆಲವು ಕುತೂಹಲಕಾರಿ ವಿಷಯಗಳ ಕುರಿತು ಚರ್ಚಿಸಲು ಪ್ರಾರಂಭಿಸಿದರು. SRH ತಂಡದ ಮಾಲೀಕರಾದ ಕಾವ್ಯಾ ಅವರನ್ನು ಮದುವೆಯಾಗಲಿರುವ ಅನಿರುದ್ಧ್ ಅವರು 'ಚೆನ್ನೈ ಸೂಪರ್ ಕಿಂಗ್ಸ್'ನ (CSK) ಕಟ್ಟಾ ಅಭಿಮಾನಿಯಾಗಿದ್ದಾರೆ ಎಂದು ಅವರು ಹೇಳಿದ್ದಾರೆ.

ಸಾಮಾಜಿಕ ಜಾಲತಾಣಗಳಲ್ಲಿ ಅಭಿಮಾನಿಗಳಿಂದ ಇಂತಹ ಹೇಳಿಕೆಗಳ ಸುರಿಮಳೆಯೇ ಕಂಡುಬಂತು.

Kavya Maran and Anirudh Ravichander
ಅನಿರುದ್ಧ್ ರವಿಚಂದರ್-ಕಾವ್ಯಾ ಮಾರನ್ ವಿವಾಹಕ್ಕೆ ದಿನಾಂಕ ಫಿಕ್ಸ್! ಗ್ರೀಸ್ ನಲ್ಲಿ ಮದುವೆ; ಚೆನ್ನೈನಲ್ಲಿ ಆರತಕ್ಷತೆ!

CSK ಐದು ಬಾರಿ ಐಪಿಎಲ್ (IPL) ಚಾಂಪಿಯನ್ ಆಗಿದ್ದು, 2010, 2011, 2018, 2021 ಮತ್ತು 2023ರಲ್ಲಿ ಪ್ರಶಸ್ತಿಯನ್ನು ಗೆದ್ದುಕೊಂಡಿದೆ. ಮತ್ತೊಂದೆಡೆ, SRH ಇದುವರೆಗೆ ಒಂದು ಬಾರಿ ಐಪಿಎಲ್ ಪ್ರಶಸ್ತಿಯನ್ನು ಗೆದ್ದಿದ್ದು, 2016ರಲ್ಲಿ ಈ ಸಾಧನೆ ಮಾಡಿತ್ತು.

ಕಾವ್ಯಾ ಮಾರನ್ ಅವರು ಸನ್ ಗ್ರೂಪ್ ಅಧ್ಯಕ್ಷ ಕಲಾನಿಧಿ ಮಾರನ್ ಅವರ ಪುತ್ರಿ ಮತ್ತು ಸನ್ ಟಿವಿ ನೆಟ್‌ವರ್ಕ್‌ನಲ್ಲಿ ಕಾರ್ಯನಿರ್ವಾಹಕ ನಿರ್ದೇಶಕಿಯಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಅಲ್ಲದೆ, ಅವರು ಐಪಿಎಲ್‌ನಲ್ಲಿ ಎಸ್‌ಆರ್‌ಹೆಚ್ (SRH) ತಂಡದ ಮಾಲೀಕರಾಗಿಯೂ ಗುರುತಿಸಿಕೊಂಡಿದ್ದಾರೆ.

ಮತ್ತೊಂದೆಡೆ, ಅನಿರುದ್ಧ್ ರವಿಚಂದರ್ ಒಬ್ಬ ಜನಪ್ರಿಯ ಸಂಗೀತ ಸಂಯೋಜಕರಾಗಿದ್ದು, ಇವರು 'ಲಿಯೋ', 'ಇಂಡಿಯನ್ 2', 'ವೇಟ್ಟೈಯನ್', 'ವಿದಾಮುಯಾರ್ಚಿ' ಮತ್ತು 'ಕೂಲಿ' ಸೇರಿದಂತೆ ಹಲವು ಪ್ರಮುಖ ಚಲನಚಿತ್ರಗಳಿಗೆ ಸಂಗೀತ ನೀಡಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com