ಸಚಿನ್ ತೆಂಡುಲ್ಕರ್‌ರ ದೀರ್ಘಕಾಲೀನ ODI ದಾಖಲೆ ಮುರಿದ ಬ್ರೆಂಡನ್ ಟೇಲರ್; ಆದ್ರೆ ಒಂದು ಟ್ವಿಸ್ಟ್ ಇದೆ!

ಹರಾರೆ ಸ್ಪೋರ್ಟ್ಸ್ ಕ್ಲಬ್‌ನಲ್ಲಿ ಮಂಗಳವಾರ ನಡೆದ ಆಸ್ಟ್ರೇಲಿಯಾ ವಿರುದ್ಧದ ಮೂರು ಪಂದ್ಯಗಳ ಏಕದಿನ ಸರಣಿಯ ಮೊದಲ ಪಂದ್ಯವನ್ನಾಡಲು ಮೈದಾನಕ್ಕೆ ಇಳಿಯುವ ಮೂಲಕ ಬ್ರೆಂಡನ್ ಟೇಲರ್ ಅವರು ಹೊಸ ದಾಖಲೆ ಸೃಷ್ಟಿಸಿದರು.
Brendan Taylor breaks Sachin Tendulkar's long-standing ODI record, but there's a twist
ಬ್ರೆಂಡನ್ ಟೇಲರ್ - ಸಚಿನ್ ತೆಂಡುಲ್ಕರ್‌
Updated on

ಜಿಂಬಾಬ್ವೆಯ ಅನುಭವಿ ಬ್ಯಾಟ್ಸ್‌ಮನ್ ಬ್ರೆಂಡನ್ ಟೇಲರ್ ಅವರು ಕ್ರಿಕೆಟ್ ದಿಗ್ಗಜ ಸಚಿನ್ ತೆಂಡುಲ್ಕರ್ ಅವರ ದೀರ್ಘಕಾಲೀನ ದಾಖಲೆಯನ್ನು ಮುರಿಯುವ ಮೂಲಕ ಹೊಸ ಇತಿಹಾಸ ಸೃಷ್ಟಿಸಿದ್ದಾರೆ.

ಹರಾರೆ ಸ್ಪೋರ್ಟ್ಸ್ ಕ್ಲಬ್‌ನಲ್ಲಿ ಮಂಗಳವಾರ ನಡೆದ ಆಸ್ಟ್ರೇಲಿಯಾ ವಿರುದ್ಧದ ಮೂರು ಪಂದ್ಯಗಳ ಏಕದಿನ ಸರಣಿಯ ಮೊದಲ ಪಂದ್ಯವನ್ನಾಡಲು ಮೈದಾನಕ್ಕೆ ಇಳಿಯುವ ಮೂಲಕ ಬ್ರೆಂಡನ್ ಟೇಲರ್ ಅವರು ಏಕದಿನ ಕ್ರಿಕೆಟ್ ನಲ್ಲಿ ಸುದೀರ್ಘ ಸಮಯ ಆಡಿದ ಕ್ರಿಕೆಟಿಗ ಎಂಬ ಗೌರವಕ್ಕೆ ಪಾತ್ರರಾದರು.

ಟೇಲರ್ ಅವರು 22 ವರ್ಷ, ನಾಲ್ಕು ತಿಂಗಳುಗಳ ಕಾಲ ಕ್ರಿಕೆಟ್ ಆಡಿದ್ದಾರೆ. ಸಚಿನ್ ತೆಂಡುಲ್ಕರ್ ಅವರು 22 ವರ್ಷ ಹಾಗೂ ಮೂರು ತಿಂಗಳ ಕಾಲ 50 ಓವರ್‌ಗಳ ಪಂದ್ಯ ಆಡಿದ ನಂತರ 2012ರಲ್ಲಿ ನಿವೃತ್ತಿಯಾಗಿದ್ದರು.

Brendan Taylor breaks Sachin Tendulkar's long-standing ODI record, but there's a twist
India vs Afghanistan: ಹೊಸ ಇತಿಹಾಸ ಸೃಷ್ಟಿಸಿದ ಜಸ್ಪ್ರೀತ್ ಬುಮ್ರಾ; ವಿಶ್ವದಲ್ಲೇ ಈ ಸಾಧನೆ ಮಾಡಿದ ಮೊದಲ ಆಟಗಾರ!

ಸಚಿನ್ ಅವರ ಏಕದಿನ ಪಂದ್ಯಗಳ ವೃತ್ತಿಜೀವನದ ಅವಧಿ 22 ವರ್ಷ ಹಾಗೂ 91 ದಿನಗಳು ಆಗಿದ್ದರೆ, ಟೇಲರ್ ಅವರ ಏಕದಿನ ಪಂದ್ಯಗಳ ವೃತ್ತಿಜೀವನದ ಅವಧಿ 22 ವರ್ಷ ಹಾಗೂ 148 ದಿನಗಳು.

ಆದರೆ ಒಂದು ಟ್ವಿಸ್ಟ್ ಇದೆ!

ಹೌದು, ಬ್ರೆಂಡನ್ ಟೇಲರ್ ಸಚಿನ್ ದಾಖಲೆ ಮುರಿದರೂ ಅದರಲ್ಲಿ ಒಂದು ಟ್ವಿಸ್ಟ್ ಇದೆ. ಟೇಲರ್ ಮೊದಲಿಗೆ 2021ರಲ್ಲಿಯೇ ಅಂತರಾಷ್ಟ್ರೀಯ ಕ್ರಿಕೆಟ್‌ನಿಂದ ನಿವೃತ್ತಿಯಾಗಿದ್ದರು. ಆದರೆ 2022ರಲ್ಲಿ ಐಸಿಸಿ ಭ್ರಷ್ಟಾಚಾರ ನಿಗ್ರಹ ಘಟಕ ಹಾಗೂ ಡೋಪಿಂಗ್ ವಿರೋಧಿ ನೀತಿ ಸಂಹಿತೆಯನ್ನು ಉಲ್ಲಂಘಿಸಿದ್ದಕ್ಕಾಗಿ ಮೂರೂವರೆ ವರ್ಷಗಳ ಕಾಲ ನಿಷೇಧಕ್ಕೆ ಒಳಗಾಗಿದ್ದರು.

ತನ್ನ ಮೇಲಿನ ನಿಷೇಧದ ಅವಧಿ ಪೂರ್ಣಗೊಳಿಸಿದ ನಂತರ ಟೇಲರ್ 2025ರಲ್ಲಿ ನಿವೃತ್ತಿಯ ನಿರ್ಧಾರದಿಂದ ಹಿಂದೆ ಸರಿದರು. ಮುಂದಿನ ವರ್ಷ ದಕ್ಷಿಣ ಆಫ್ರಿಕಾ ಹಾಗೂ ನಮೀಬಿಯಾದೊಂದಿಗೆ ಏಕದಿನ ವಿಶ್ವಕಪ್ ಆತಿಥ್ಯವಹಿಸುತ್ತಿರುವ ಝಿಂಬಾಬ್ವೆ ತಂಡವನ್ನು ಮತ್ತೊಮ್ಮೆ ಪ್ರತಿನಿಧಿಸಲು ಸಜ್ಜಾಗುತ್ತಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com