India vs West Indies 2nd ODI: ಹೊಸ ದಾಖಲೆ ಬರೆದ ಶುಭ್ ಮನ್ ಗಿಲ್, ಪ್ರಮುಖ ಮೈಲಿಗಲ್ಲು ತಲುಪಿದ ರೋಹಿತ್ ಶರ್ಮಾ!

ವೆಸ್ಟ್ ಇಂಡೀಸ್ ನೀಡಿರುವ 406 ರನ್‌ಗಳ ಗುರಿಯನ್ನು ಬೆನ್ನಟ್ಟಿರುವ ಭಾರತ 28 ಓವರ್ ಗಳಲ್ಲಿ 1 ವಿಕೆಟ್ ನಷ್ಟಕ್ಕೆ 270 ರನ್ ಗಳಿಸಿ ಆಟವಾಡುತ್ತಿದೆ.
Shubman Gill
ಶುಭ್ ಮನ್ ಗಿಲ್
Updated on: 

ಗುವಾಹಟಿ: ಅಸ್ಸಾಂನ ಗುವಾಹಟಿಯಲ್ಲಿ ಇಂದು ನಡೆಯುತ್ತಿರುವ ವೆಸ್ಟ್ ಇಂಡೀಸ್ ವಿರುದ್ಧದ ಎರಡನೇ ಏಕದಿನ ಪಂದ್ಯದಲ್ಲಿ ಭಾರತದ ಶುಭಮನ್ ಗಿಲ್ ಕೇವಲ 62 ಎಸೆತಗಳಲ್ಲಿ ಶತಕ ಸಿಡಿಸುವ ಮೂಲಕ ಹೊಸ ಇತಿಹಾಸ ಬರೆದಿದ್ದಾರೆ.

ರೋಹಿತ್ ಶರ್ಮಾ ಕೂಡ ಭರ್ಜರಿ ಶತಕ ಬಾರಿಸಿದ್ದಾರೆ. ಭಾರತೀಯ ನಾಯಕನೊಬ್ಬನಿಂದ ಅತಿ ವೇಗದ ಏಕದಿನ ಶತಕದ ದಾಖಲೆಯನ್ನು ಗಿಲ್ ನಿರ್ಮಿಸಿದ್ದಾರೆ. ಹಾಗೆಯೇ, ಏಕದಿನ ಕ್ರಿಕೆಟ್‌ನಲ್ಲಿ 12,000 ರನ್ ಪೂರೈಸಿದ ಮೂರನೇ ಭಾರತೀಯ ಕ್ರಿಕೆಟಿಗರಾಗಿ ರೋಹಿತ್ ಹೊರಹೊಮ್ಮಿದ್ದಾರೆ.

ವೆಸ್ಟ್ ಇಂಡೀಸ್ ನೀಡಿರುವ 406 ರನ್‌ಗಳ ಗುರಿಯನ್ನು ಬೆನ್ನಟ್ಟಿರುವ ಭಾರತ 28 ಓವರ್ ಗಳಲ್ಲಿ 1 ವಿಕೆಟ್ ನಷ್ಟಕ್ಕೆ 270 ರನ್ ಗಳಿಸಿ ಆಟವಾಡುತ್ತಿದೆ.

ಭಾರತದ ಪರ ಆರಂಭಿಕ ಆಟಗಾರರಾದ ರೋಹಿತ್ ಶರ್ಮಾ 101 ರನ್ ಗಳಿಸಿ ಔಟಾದರೆ, ಶುಭ್ ಮನ್ ಗಿಲ್ 92 ಎಸೆತಗಳಲ್ಲಿ 6 ಸಿಕ್ಸರ್, 18 ಬೌಂಡರಿಗಳೊಂದಿಗೆ ಅಜೇಯ 153 ರನ್ ಗಳಿಸಿದ್ದಾರೆ. ವಿರಾಟ್ ಕೊಹ್ಲಿ 2 ರನ್ ಗಳಿಸುವುದರೊಂದಿಗೆ ಕ್ರೀಸ್ ನಲ್ಲಿದ್ದಾರೆ.

Shubman Gill
ವಿನೂ ಮಂಕಡ್ ಟ್ರೋಫಿ: ಕರ್ನಾಟಕ ತಂಡದ ನಾಯಕನಾಗಿ ರಾಹುಲ್ ದ್ರಾವಿಡ್ ಪುತ್ರ ಅನ್ವಯ್ ಆಯ್ಕೆ!

ಇದಕ್ಕೂ ಮುನ್ನ, ಜಾನ್ ಕ್ಯಾಂಪ್‌ಬೆಲ್, ಶಾಯ್ ಹೋಪ್ ಮತ್ತು ಅಮೀರ್ ಜಂಗೂ ಶತಕಗಳನ್ನು ಬಾರಿಸಿದ ಪರಿಣಾಮ, ವೆಸ್ಟ್ ಇಂಡೀಸ್ ತಂಡವು 50 ಓವರ್‌ಗಳಲ್ಲಿ 7 ವಿಕೆಟ್ ನಷ್ಟಕ್ಕೆ 405 ರನ್ ಗಳಿಸಿತು. ಆರಂಭಿಕ ಆಟಗಾರ ಕ್ಯಾಂಪ್‌ಬೆಲ್ 65 ಎಸೆತಗಳಲ್ಲಿ ಶತಕ ಸಿಡಿಸಿದರು.ಇದು ಭಾರತದ ವಿರುದ್ಧ ವೆಸ್ಟ್ ಇಂಡೀಸ್ ಆಟಗಾರನೊಬ್ಬ ಗಳಿಸಿದ ಅತಿ ವೇಗದ ಏಕದಿನ ಶತಕವಾಗಿದೆ.

ನಾಯಕ ಹೋಪ್ 94 ಎಸೆತಗಳಲ್ಲಿ 104 ರನ್ ಗಳಿಸಿದರೆ, ಜಂಗೂ ಕೇವಲ 70 ಎಸೆತಗಳಲ್ಲಿ ಶತಕ ಪೂರೈಸಿ ಒಟ್ಟಾರೆ 77 ಎಸೆತಗಳಲ್ಲಿ 114 ರನ್ ಗಳಿಸಿದರು. ಭಾರತದ ಪರವಾಗಿ ಗುರುನೂರ್ ಬ್ರಾರ್, ಕುಲದೀಪ್ ಯಾದವ್ ಮತ್ತು ರವೀಂದ್ರ ಜಡೇಜಾ ತಲಾ ಎರಡು ವಿಕೆಟ್ ಪಡೆದರು. ಕುಲದೀಪ್ ತಮ್ಮ ವೃತ್ತಿಜೀವನದಲ್ಲಿ 200 ಏಕದಿನ ವಿಕೆಟ್‌ಗಳ ಮೈಲಿಗಲ್ಲನ್ನು ತಲುಪಿದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com