
ಭಾರತದಲ್ಲಿ ಪ್ರತಿಯೊಂದು ಹಬ್ಬಕ್ಕೂ ತನ್ನದೇ ಆದ ವೈಶಿಷ್ಟ್ಯತೆ ಇದೆ. ಎಲ್ಲಾ ಹಬ್ಬಂದಂತೆ ನವರಾತ್ರಿಯೂ ಸಹ ವಿಶೇಷವನ್ನು ಹೊಂದಿದ್ದು, ಈ ಹಬ್ಬವನ್ನು ಮಹಾಶಕ್ತಿಯ ಆರಾಧನೆಯ ಹಬ್ಬ ಎಂದು ಕರೆಯಲಾಗುತ್ತದೆ. ಈ ಹಬ್ಬವನ್ನು ಗೊಂಬೆಗಳ ಹಬ್ಬ ಎಂದೂ ಕರೆಯುತ್ತಾರೆ.
ನವರಾತ್ರಿಯನ್ನು ಭಾರತದ ಪ್ರತೀಯೊಂದು ರಾಜ್ಯದಲ್ಲೂ ವಿಭಿನ್ನವಾಗಿ ಆಚರಿಸುವುದುಂಟು ಗುಜರಾತಿನಲ್ಲಿ ಈ ಒಂಬತ್ತು ದಿನಗಳು ಉಲ್ಲಾಸಮಯವಾಗಿರುತ್ತವೆ. ಬಂಗಾಳದಲ್ಲಿ ಷಷ್ಠಿಯಿಂದ ದಶಮಿಯವರೆಗೆ ದೇವಿಯ ಪೂಜೆಯನ್ನು ಆಚರಿಸಲಾಗುತ್ತದೆ. ಮಧ್ಯಪ್ರದೇಶ ಮತ್ತು ರಾಜಸ್ಥಾನದಲ್ಲಿ ನವರಾತ್ರಿ ನಿಮಿತ್ತ ಉಪವಾಸ, ದೇವಿ ಮಂದಿರಗಳಲ್ಲಿ ಪೂಜೆ ಕಾರ್ಯ ವಿಶೇಷವಾಗಿರುತ್ತವೆ. ಇನ್ನು ಪಂಜಾಬ್ ನಲ್ಲೂ ಕೂಡಾ ಉಪವಾಸ ಮತ್ತು ಜಾಗರಣೆ ಮಾಡುವ ಮೂಲಕ ದೇವಿಯ ಪೂಜೆ ಮಾಡಲಾಗುತ್ತದೆ
ನವರಾತ್ರಿಯಲ್ಲಿ ಮಾತೆ ದುರ್ಗೆಯ ಪೂಜೆ ಮಹತ್ವವಾಗಿದೆ. ಹಬ್ಬದಲ್ಲಿ ದೇವಿ ದುರ್ಗೆಯನ್ನು ಒಂಬತ್ತು ರೂಪಗಳಲ್ಲಿ ಪೂಜೆ ಮಾಡುವುದುಂಟು. ಶೈಲಪುತ್ರಿ, ಬ್ರಹ್ಮಚಾರಿಣಿ, ಮಹಾಕಾಳಿ, ಮಹಾಲಕ್ಷ್ಮಿ, ಮಹಾಸರಸ್ವತಿ, ಕಾತ್ಯಾಯನಿ, ಕಾಲರಾತ್ರಿ, ಮಹಾಗೌರಿ ಮತ್ತು ಸಿದ್ಧಿದಾತ್ರಿ ಎಂಬ ಹೆಸರಿನಲ್ಲಿ ದುರ್ಗೆಯನ್ನು ಪೂಜೆ ಮಾಡುತ್ತಾರೆ.
ದುರ್ಗಾಷ್ಟಮಿಯನ್ನು ನವರಾತ್ರಿಯ ಎಂಟನೇ ದಿನದಂದು ಆಚರಣೆ ಮಾಡುವುದುಂಟು. ಹತ್ತನೆಯ ದಿನವನ್ನು ವಿಜಯದಶಮಿ ಆಚರಣೆ ಮಾಡಲಾಗುತ್ತದೆ. ವಿಜಯದಶಮಿಯ ಅರ್ಥ ಹೆಸರೇ ಸೂಚಿಸುವಂತೆ ವಿಜಯ, ಗೆಲುವು ಸೂಚಿಸುವ ಹಬ್ಬ. ವಿಜಯದಶಮಿ ಆಚರಿಸುವುದಕ್ಕೂ ಹಲವು ಸಂಕೇತಗಳಿದ್ದು, ಮಹಾದುರ್ಗೆ ರಾಕ್ಷಸರನ್ನು ಸಂಹಾರ ಮಾಡಿದ ವಿಜಯದ ದಿನ, ತ್ರೇತಾಯುಗದಲ್ಲಿ ಶ್ರೀರಾಮಚಂದ್ರ ರಾವಣನನ್ನು ಕೊಂದ ದಿನ ಹಾಗೂ ದ್ವಾಪರ ಯುಗದಲ್ಲಿ ಪಾಂಡವರು ಕೌರವರನ್ನು ಸೋಲಿಸಿದ ದಿನ ಎಂಬುದರ ಸಂಕೇತವಾಗಿ ವಿಜಯದಶಮಿಯನ್ನು ಆಚರಿಸುವುದುಂಟು.
ನವರಾತ್ರಿ ಹಿಂದಿನ ಕೆಲವು ಕಥೆಗಳು ಇಂತಿವೆ...
ಸುಮಂಗಲಿಯರು ಈ ನವರಾತ್ರಿಯ ದಿನದಂದು ದೇವಿಯ ಆರಾಧನೆ ಮಾಡುವುದರಿಂದ ದೇವಿಯು ಸಕಲ ಸಂತೋಷಗಳನ್ನು ಕರುಣಿಸುತ್ತಾಳೆಂಬ ನಂಬಿಕೆಯಿದೆ.
Advertisement