ರಹಸ್ಯ ಸ್ಥಳ ಭೇದಿಸಿ 'ರಾಜಸಿಂಹಾಸನ'ವನ್ನು ಹೊರತೆಗೆದ ಹರಿಹರ

ದ್ವಾಪರ ಯುಗದ ಯುದಿಷ್ಠಿರನ ಮೊಮ್ಮಗ ಪರೀಕ್ಷಿತನ ರಾಜಾಸನವಾಗಿತ್ತು ಈ ಸಿಂಹಾಸನ...
ಮೈಸೂರು ರಾಜ ಸಿಂಹಾಸನ
ಮೈಸೂರು ರಾಜ ಸಿಂಹಾಸನ
ಕೇವಲ ನವರಾತ್ರಿ ಸಂಧರ್ಭದಲ್ಲಿ ಮಾತ್ರ ಸಾರ್ವಜನಿಕ ವೀಕ್ಷಣೆಗೆ ಸಿಗುವ ರತ್ನ ಖಚಿತ ಸಿಂಹಾಸನದ ಕಥೆ ನಿಜಕ್ಕೂ ರೋಚಕ. ಮೈಸೂರು ಅರಮನೆಯಲ್ಲಿರುವ ರಾಜ ಸಿಂಹಾಸನ ಬರೋಬ್ಬರಿ 250 ಕೆಜಿ ತೂಕದ ಬಂಗಾರದ ಸಿಂಹಾಸನವಾಗಿದೆ. 
ಮೈಸೂರು ಮಹಾರಾಜರ ದರ್ಬಾರ್ ಹಾಲ್ ನಲ್ಲಿ ಅತ್ಯಂತ ಪ್ರಮುಖ ಆಕರ್ಷಣೆ ರತ್ನ ಸಿಂಹಾಸನ. ಇದು ಯದುವಂಶದ ಪಾರಂಪರಿಕ ಆಸ್ತಿ, ಐತಿಹಾಸಿಕ ಬಳುವಳಿ, ವೈಭವದ ಕೊಡುಗೆ, ಚಿನ್ನ ಬೆಳ್ಳಿ, ವಜ್ರ ವೈಢೂರ್ಯಗಳಿಂದ ಕೂಡಿದ ರತ್ನ ಕಚಿತ ಸಿಂಹಾಸನ ದರ್ಶನ ಸಿಗುವುದು ವರ್ಷಕ್ಕೆ ಒಮ್ಮೆ ಮಾತ್ರ ಅದು ನವರಾತ್ರಿ ಆಚರಣೆಯಲ್ಲಿ. 
ನವರಾತ್ರಿ ಹಬ್ಬದ ವೇಳೆ ದರ್ಬಾರ್ ಹಾಲ್ ನಲ್ಲಿ ವಿಜೃಂಭಿಸುವ ಈ ರಾಜ ಸಿಂಹಾಸನಕ್ಕೆ ದ್ವಾಪರಯುಗದ ಇತಿಹಾಸವಿದೆ. ದ್ವಾಪರ ಯುಗದ ಯುದಿಷ್ಠಿರನ ಮೊಮ್ಮಗ ಪರೀಕ್ಷಿತನ ರಾಜಾಸನವಾಗಿತ್ತು ಈ ಸಿಂಹಾಸನ. ಪಾಂಡವರ ಬಳಿಕ ತೆಲುಗುಂಡಿಯ ಕಂಪಿಲರಾಯ 13 ವರ್ಷಗಳ ಕಾಲ ಇದನ್ನಾ ಅಲಂಕರಿಸಿದ. ದ್ವಾಪರ ಯುಗದಿಂದ ಕಂಪಿಲರಾಯನವರೆಗೂ ಒಟ್ಟು 4,437 ವರ್ಷಗಳ ಕಾಲ ಈ ಸಿಂಹಾಸನ ವಿವಿಧ ರಾಜವಂಸ್ಥರ ವಶದಲ್ಲಿತ್ತು. ಆನಂತರದ ಕೆಲ ಅನಿವಾರ್ಯ ಪರಿಸ್ಥಿತಿಗಳಿಂದಾಗಿ ಈ ಸಿಂಹಾಸನ ನೆಲಮಾಳಿಗೆಯ ಕತ್ತಲೆ ಕೋಣೆ ಸೇರ್ಪಟಿತ್ತು. ಸಿಂಹಾಸನವನ್ನಾ ಎಲ್ಲಿ ಹೂತಿಟ್ಟಿದ್ದಾರೆ ಎಂದು ಯಾರಿಗೂ ತಿಳಿದಿರಲಿಲ್ಲ. ಆಗ ಈ ಸಿಂಹಾಸನವನ್ನು ಹೂತಿಟ್ಟಿದ್ದ ರಹಸ್ಯ ಸ್ಥಳವನ್ನಾ ವಿದ್ಯಾರ್ಯಣ್ಯಾ ಗುರುವರ್ಯಾ ಮಾಧವರು ವಿಜಯನಗರ ಸಾಮ್ರಾಜ್ಯ ಸ್ಥಾಪಕರಾಗದ ಅಕ್ಕ-ಬುಕ್ಕರಿಗೆ ತೋರಿಸಿಕೊಟ್ಟರು. ಆ ಸಹೋದರರ ಪೈಕಿ ಹಿರಿಯವರಾದ ಹರಿಹರ ರಹಸ್ಯ ಸ್ಥಳವನ್ನಾ ಭೇದಿಸಿ ಸಿಂಹಾಸನವನ್ನಾ ಹೊರತೆಗೆದ. ಬಳಿಕ ಹೋಮ ಹವನಗಳನ್ನು ಮಾಡಿಸಿ 1259ರಲ್ಲಿ ಪ್ರಪಥಮ ಬಾರಿಗೆ ಸಿಂಹಾಸನ ರೂಢನಾದ. ಅಲ್ಲಿಂದ ಸುಮಾರು 274 ವರ್ಷಗಳ ಕಾಲ ಈ ಸಿಂಹಾಸನ ವಿಜನಗರ ಚಕ್ರವರ್ತಿಗಳ ರಾಜಧಾನಿ ಆನೆಗುಂದಿಯಲ್ಲಿ ವಿಜೃಂಭಿಸಿತು. 
17ನೇ ಶತಮಾನದ ಪ್ರಾರಂಭದಲ್ಲಿ, ದೊರೆ ತಿರುಮಲರಾಯ ತನ್ನ ಪುತ್ರ ಶ್ರೀರಂಗರಾಯನಿಗೆ ಶ್ರೀರಂಗಪಟ್ಟಣದ ಜೊತೆಗೆ ಈ ಸಿಂಹಾಸನವನ್ನು ಹಸ್ತಾಂತರಿಸಿದ. ಅದನ್ನು ಸ್ವೀಕರಿಸಿದ ಶ್ರೀರಂಗರಾಯ ಶ್ರೀರಂಗಪಟ್ಟಣಕ್ಕೆ ಬಂದು ನೆಲೆಸಿದ್ದ. ದೊರೆ ಶ್ರೀರಂಗರಾಯನಿಗೆ ಆರೋಗ್ಯ ಸಮಸ್ಯೆ ಉಲ್ಭಣಿಸಿದಾಗ, ಸಿಂಹಾಸವನ್ನು ಸುರಕ್ಷಿತವಾಗಿ ಕಾಪಾಡುವವರು ಯಾರು, ಅನ್ನೋ ಪ್ರಶ್ನೆ ಎದುರಾಗಿತ್ತು. ಆಗ ಎಲ್ಲಾ ವಿದ್ಯೆಗಳಲ್ಲೂ ನಿಪುಣರಾಗಿದ್ದ, ಬಲಾಢ್ಯ ಸೈನ್ಯವನ್ನು ಹೊಂದಿದ್ದ, ಹಿಂದೂ ರಾಜರಾದ ಮೈಸೂರಿನ ಯುದು ವಂಶದ ಅರಸರು ಇದನ್ನು ಕಾಪಾಡುತ್ತಾರೆ ಅನ್ನೋ ನಂಬಿಕೆ ಶ್ರೀರಂಗರಾಯನಿಗೆ ಬಂದಿತ್ತು. ಹೀಗಾಗಿ ರಾಜ ಶ್ರೀರಂಗರಾಯ ಈ ಸಿಂಹಾಸನ ಹಾಗೂ ತನ್ನ ಎಲ್ಲಾ ಜವಾಬ್ದಾರಿಗಳನ್ನಾ ಮೈಸೂರು ಅರಸರಿಗೆ ನೀಡಿಬಿಟ್ಟರು. ಹೀಗೆ ಕ್ರಿ.ಶ 1610ರಲ್ಲಿ ಈ ಸಿಂಹಾಸನ ಮೈಸೂರು ಅರಸರ ವಶಕ್ಕೆ ಬಂತು. 
ಕ್ರಿ.ಶ 1610ರಲ್ಲಿ ಮೊಟ್ಟ ಮೊದಲ ಬಾರಿಗೆ ಮೈಸೂರಿನ ಯದುವಂಶದ ರಾಜ ಒಡೆಯರ್ ಈ ಸಿಂಹಾಸನವನ್ನಾ ಅತ್ಯಂತ ವೈಭವದಿಂದ ಅಲಂಕರಿಸಿದರು. ಮೈಸೂರು ರಾಜರು ಮೊಟ್ಟಮೊದಲ ಬಾರಿಗೆ ಶ್ರೀರಂಗಪಟ್ಟಣದಲ್ಲಿ ಆಚರಿಸುತ್ತಾರೆ. ಈ ರೀತಿ ಒಂದು ಸಾಂಸ್ಕೃತಿಕ ಪರಂಪರೆ ಮೈಸೂರಿಗೆ ಕೊಡುಗೆಯಾಗಿ ಸಿಕ್ಕಿತು. 
ಸಿಂಹಾಸನ ನೆಲ ಮಾಳಿಗೆ ಸೇರಿದ್ದು ಯಾಕೆ?
ಮೈಸೂರಿನ ಯದುವಂಶದ ದೊರೆಗಳಿಗೆ ಈ ರತ್ನಸಿಂಹಾಸನ ಹೇಗೆ ಪ್ರಾಪ್ತವಾಯ್ತು ಅನ್ನೊ ಬಗ್ಗೆ ಮತ್ತೊಂದು ಚರಿತ್ರೆ ಇದೆ. ಅದು 1672ರಿಂದ 1704ರವರೆಗೆ ಮೈಸೂರು ಸಂಸ್ಥಾನದ ಪ್ರಭುವಾಗಿದ್ದ ಚಿಕ್ಕದೇವರಾಜ ಒಡೆಯರ್ ಗೆ ಸಂಬಂಧಿಸಿದ ಪ್ರಸಂಗ. ಆ ದಿನಗಳಲ್ಲಿ ಮೊಗಲ್ ಸಾರ್ಮಾಟ ಔರಂಗಜೇಬ್ ನ ಆಡಳಿತ ಇತ್ತು. ಆತನ ಹುಕುಂ ಇಲ್ಲದೇ ಯಾವ ರಾಜರು ಸಿಂಹಾಸನದ ಮೇಲೆ ಕೂರುವ ಹಾಗಿರಲಿಲ್ಲ. ಅಂತಹವರ ವಿರುದ್ಧ ದಂಡೇತ್ತಿ ಹೋಗುತ್ತಿದ್ದ ಔರಂಗಜೇಬ. ಹೀಗಿದ್ರೂ ಔರಂಗಜೇಬ ಮತ್ತು ಚಿಕ್ಕದೇವರಾಜ ಒಡೆಯರ್ ನಡುವೆ ಉತ್ತಮ ಬಾಂಧವ್ಯ ಇತ್ತು. ಕೆಲ ವಿದೇಶಿ ಇತಿಹಾಸಕಾರರ ಪ್ರಕಾರ ಔರಂಗಜೇಬನ ಅನುಮತಿ ಮೇರೆಗೆ ಚಿಕ್ಕದೇವರಾಜ ಒಡೆಯರು ಸಿಂಹಾಸನ ರೂಢರಾಗಿದ್ದರು ಎನ್ನಲಾಗುತ್ತೆ. 
ಹೈದರಾಲಿ ಮತ್ತು ಟಿಪ್ಪು ಸುಲ್ತಾನ್ ಅವಧಿಯಲ್ಲಿ ಈ ರತ್ನ ಕಚಿತ ಸಿಂಹಾಸನಕ್ಕೆ ಆತಂಕ ಎದುರಾಗಿತ್ತು ಎನ್ನಲಾಗುತ್ತೆ. ಅದೇ ಕಾರಣಕ್ಕೋ ಏನೋ ಈ ಸಿಂಹಾಸನವನ್ನು ಪೆನೊಂಡಿಯಾದಲ್ಲಿ ಭೂಮಿಯೊಳಗೆ ಹೂತಿಟ್ಟು, 400 ವರ್ಷಗಳ ನಂತರ ಪುನಃ ಈ ಸಿಂಹಾಸನ ಕತ್ತಲೆ ಕೋಣೆ ಸೇರುವಂತಾಗಿತ್ತು. ಟಿಪ್ಪು ಅಧಿಕಾರವಧಿಯಲ್ಲಿ ಅನೇಕ ವರ್ಷಗಳ ಕಾಲ ಈ ಸಿಂಹಾಸನವನ್ನಾ ಮೂರು ಭಾಗಗಳನ್ನಾಗಿ ಬೇರ್ಪಡಿಸಿ ಶ್ರೀಂರಗಪಟ್ಟಣದ ಅರಮನೆಯ ಕತ್ತಲೆ ಕೋಣೆಯಲ್ಲಿ ಇಡಲಾಗಿತ್ತು. 1799ರಲ್ಲಿ ಬ್ರಿಟಿಷರ ವಿರುದ್ಧದ ಹೋರಾಟದಲ್ಲಿ ಟಿಪ್ಪು ಸುಲ್ತಾನ್ ವೀರ ಮರಣ ಹೋಂದುತ್ತಾರೆ. ಆ ನಂತರ ಬಾಲ ಮಹಾರಾಜ ಮುಮ್ಮುಡಿ ಕೃಷ್ಣ ರಾಜ ಒಡೆಯರ್ ಪಟ್ಟಾಭಿಷೇಕಕ್ಕೆ ತಯಾರಾಗುತ್ತೆ. ಆ ಸಂದರ್ಭದಲ್ಲಿ ಕತ್ತಲೆ ಕೋಣೆಯಲ್ಲಿದ್ದ ಸಿಂಹಾಸವನ್ನು ಹೊರೆ ತೆಗೆಯಲಾಗುತ್ತೆ. ಸಿಂಹಾಸವನ್ನು ರಿಪೇರಿ ಮಾಡುವ ಮೂಲಕ ರಾಜರು ಸಿಂಹಾಸನ ರೂಢರಾಗುತ್ತಾರೆ. 
ರಾಜರ ಈ ಸಿಂಹಾಸನ ಅಂಜುರ ಮರದಿಂದ ಮಾಡಿರುವಂತದು. ಹಲವಾರು ರಾಜರು ತಮ್ಮ ಕಲಾಭಿರುಚಿಗೆ ತಕ್ಕಂತೆ ಸಿಂಹಾಸನದ ಮೂಲ ಸ್ವರೂಪವನ್ನು ಬದಲಾವಣೆ ಮಾಡುತ್ತಾ ಬಂದಿದ್ದರು. ಮುಮ್ಮುಡಿ ಕೃಷ್ಣ ರಾಜ ಒಡೆಯರ್ ಅವರು 1912 ಮತ್ತು 1914ರಲ್ಲಿ ಸಿಂಹಾಸನದ ಸೌಂದರ್ಯ ಹಾಗೆ ಆಕರ್ಷಣೆ ಹೆಚ್ಚಿಸಲು ಹಲವಾರು ಮಾರ್ಪಾಡು ಮಾಡಿ ಸಿಂಹಾಸನಕ್ಕೆ ಹೊಸ ರೂಪ ನೀಡಿದ ರುವಾರಿ ಎನಿಸಿದರು. ಮುತ್ತು, ಹವಳ, ರತ್ನ, ಪಚ್ಚೆ, ಕೆಂಪು, ನೀಲ, ವಜ್ರ, ಹಾಗೂ ಗೋಮೇದಕಗಳನ್ನಾ ಶಾಸ್ತ್ರೋತ್ತವಾಗಿ ಸೇರಿಸಿ ಸಿಂಹಾಸವನ್ನು ನವರತ್ನ ಖಚಿತಗೊಳಿಸಿದರು. ಅಪ್ಪಟ ಚಿನ್ನದ ಪಟ್ಟಿಗಳು, ಆಸು, ಲೇಪಗಳು ಮತ್ತಷ್ಟು ಸೌಂದರ್ಯದ ವಿಜೃಂಭಣೆಗೆ ಮೆರಗು ನೀಡಿದವು, ಸಿಂಹಾಸನದ ಹೊರ ಮೈ ಮೇಲೆ ಚಿನ್ನದ ಲೇಪ ಮಾಡಿದ ಬೆಳ್ಳಿಯ ತಗಡನ್ನು ಜೋಡಿಸಲಾಯಿತು. ಚಿನ್ನದ ಅಲಂಕಾರಿಕ ಎಲೆಗಳನ್ನಾ ಹೊಸದಾಗಿ ಕೂಡಿಸಲಾಯಿತು. ಕೆಲ ದಿನಗಳ ಬಳಿಕ ಹೊರ ಮೈ ಮೇಲಿದ್ದ ಬೆಳ್ಳಿಯ ತಗಡನ್ನು ತೆಗೆಸಿ, ಸಂಪೂರ್ಣ ಶುದ್ಧ ಸ್ವರ್ಣ ಫಲಕವನ್ನು ಜೋಡಿಸಲಾಯಿತು. ಯದುವಂಶದ ಅರಸರ ಈ ಸಿಂಹಾಸನದ ತೂಕ ಬರೋಬ್ಬರಿ 250 ಕೆಜಿ. 
ಈ ಸಿಂಹಾಸವನ್ನು ಏರಲು ಒಟ್ಟು 7 ಮೆಟ್ಟಿಲುಗಳಿವೆ. ಆ ಮೆಟ್ಟಿಲುಗಳು ಸುಂದರವಾದ ಎಂಟು ಸಾಲ ಬಂಜಿಕೆಯರಿಂದ ಅಲಂಕೃತಗೊಂಡಿವೆ. ಮೆಟ್ಟಿಲುಗಳನ್ನು ಏರಿದ ಬಳಿಕ ಕುಳಿತುಕೊಳ್ಳಲು ಕುರ್ಮಾಸನ ಮಾದರಿಯ ವಿಶಾಲವಾದ ಪೀಠವಿದೆ. ಆ ಪೀಠದಲ್ಲಿ ಅಷ್ಟದಳಾಕೃತಿಯ ಶ್ರೀಚಕ್ರವಿದ್ದು, ಅದರ ಮೇಲೆ ಸಂಸ್ಕೃತದಲ್ಲಿ ಅಕ್ಷರ ಮಾಲೆಯನ್ನಾ ಕೆತ್ತಲಾಗಿದೆ. ಇನ್ನು ಪೀಠದಲ್ಲಿ ವರಗೋ ಬೆನ್ನಿನ ಮೇಲ್ಭಾಗದಲ್ಲಿ ಒಂದು ನಯನ ಮನೋಹರ ಸ್ವರ್ಣ ಛತ್ರವಿದೆ. ಮಹಾರಾಜರ ಈ ಸಿಂಹಾಸನದ ಬಗ್ಗೆ ಸ್ವತಃ ಮುಮ್ಮುಡಿ ಕೃಷ್ಣ ರಾಜ ಒಡೆಯರು ತಮ್ಮ ದೇವತಾ ನಾಮ ಕುಸುಮಾ ಮಂಜರಿ ಅನ್ನೋ ಸಂಸ್ಕೃತ ಗ್ರಂಥದಲ್ಲಿ ವಿವಿರವಾಗಿ ಬಣ್ಣಿಸಿದ್ದಾರೆ. 
ಮೈಸೂರು ಅರಸರ ಸಿಂಹಾಸವನ್ನು ನೋಡುವುದೇ ಒಂದು ಹಬ್ಬವಾಗಿದೆ. ಸಿಂಹಾಸನದ ಪೂರ್ವಕ್ಕೆ ಆನೆ, ದಕ್ಷಿಣಕ್ಕೆ ಕುದುರೆ, ಪಶ್ಚಿಮಕ್ಕೆ ಯೋಧರು, ಉತ್ತರಕ್ಕೆ ರಥಗಳನ್ನಾ ರೂಪಿಸಿ ಚತುರಂಗ ಬಲ ಈ ಸಿಂಹಾಸನ್ನು ರಕ್ಷಿಸುತ್ತೆ ಅನ್ನೋ ಕಲ್ಪನೆಯನ್ನಾ ಸಾಕಾರಗೊಳಿಸಲಾಗಿದೆ. ಅದೇ ರೀತಿ ಮಹೇಶ್ವರನನ್ನಾ ಉತ್ತರಕ್ಕೆ, ಬ್ರಹ್ಮನನ್ನಾ ದಕ್ಷಿಣಕ್ಕೆ ಮತ್ತು ವಿಷ್ಣು ದೇವನನ್ನಾ ನಡುವೆ ಕಲಾತ್ಮಕವಾಗಿ ಕೆತ್ತಿ ಸೃಷ್ಟಿ, ಸ್ಥಿತಿ, ಲಯ ಕಲ್ಪಿಸಿದೆ. ಸಿಂಹಾಸನದ ನಾಲ್ಕು ಮೂಲೆಗಳನ್ನಾ ಸಿಂಹಗಳಿಂದ, ಹಂಸಗಳಿಂದ ಅಲಂಕರಿಸಿದ್ದು, ಪೂರಾಣದ ಶಾರ್ದೂಲ, ಅಶ್ವಗಳನ್ನಾ ಕೂಡ ಈ ಮೂಲೆಗಳಲ್ಲಿ ಕೆತ್ತಿ ಶೋಭೆ ಹೆಚ್ಚಿಸಲಾಗಿದೆ. ಸ್ವರ್ಣ ಛತ್ರದ ಸುತ್ತ ಇರುವ ಚಿನ್ನದ ಹೊರಸುತ್ತು ಕಟ್ಟಿನ ಮೇಲೆ ಅಂಧವಾದ ಸ್ಫುಟವಾದ ಪುಟ್ಟಪುಟ್ಟ ಅಕ್ಷರಗಳಲ್ಲಿ ಅನುಷ್ಟ್ಯಪ್ ಛಂದಸ್ಸಿನ 24 ಶ್ಲೋಕಗಳನ್ನಾ ಸಂಸ್ಕೃತ ಭಾಷೆಯಲ್ಲಿ ಬಿಡಿಸಲಾಗಿದೆ. ಅದರಲ್ಲಿ ಮುಮ್ಮುಡಿ ಕೃಷ್ಣರಾಜ ಒಡೆಯರ್ ಆಳ್ವಿಕೆಯ ಜಯ ಯಶಸ್ಸು ಸಮೃದ್ಧಿ ಕೋರುವ ಮಾಹಿತಿ ಇದೆ. 1940ರಲ್ಲಿ ಯದುವಂಶದ 25ನೇ ಮಹಾರಾಜ ಜಯಚಾಮರಾಜಒಡೆಯರ್ ಸಿಂಹಾಸನರೋಹಣ ಮಾಡಿದರು. ಈ ವೇಳೆ ಅವರು ರಜತ ಫಲಕಗಳ ಮೇಲೆ ಸಿಂಹಾಸನದ ಬಗ್ಗೆ ಕೆಲವು ಪಾರಂಪರಿಕ ಮತ್ತು ಐತಿಹಾಸಿಕ ವಿವರಗಳನ್ನಾ ಕೆತ್ತಿಸಿ ಆ ರಜತ ಫಲಕಗಳನ್ನಾ ಸಿಂಹಾಸನದ ಪೀಠದ ಬಳಿ ಶಾಶ್ವತವಾಗಿ ಅಳವಡಿಸಿದರು. ಜಯಚಾಮರಾಜ ಒಡೆಯರ್ ಬರೆಸಿದ ಆ ನಿರೂಪಣೆ ಕನ್ನಡದಲ್ಲಿರುವುದು ವಿಶೇಷತೆ. 1947ರಲ್ಲಿ ಪ್ರಜಾರಾಜ್ಯ ಬಂದರೂ, ಜಯಚಾಮರಾಜ ಒಡೆಯರ್ ಪ್ರತಿನಿತ್ಯ ಸಿಂಹಾಸನಾರೋಹಣ ಮಾಡುತ್ತಿದ್ದರು. ಆದರೆ ಈಗ ಈ ಸಿಂಹಾಸನ ಸರ್ಕಾರದ ವಶದಲ್ಲಿದೆ. ಆದರೂ ನವರಾತ್ರಿಯ ವೇಳೆ 9 ದಿನಗಳ ಕಾಲ ರಾಜ ವಂಸ್ಥ ಖಾಸಗಿ ದರ್ಬಾರ್ ನಲ್ಲಿ ಸಿಂಹಾಸನಕ್ಕೆ ವಿಶೇಷ ಪೂಜೆ ಸಲ್ಲಿಸುವ ಮೂಲಕ ಸಿಂಹಾಸನರೂಢರಾಗುತ್ತಾರೆ. 
ಇದು ಸ್ವರ್ಣಾಸನವಾಗಿದ್ದು, ಪ್ರತಿ ವರ್ಷ ನವರಾತ್ರಿ ದಿನಗಳಲ್ಲಿ ಮಾತ್ರ ಈ ಸ್ವರ್ಣಾಸನ ಸಿಂಹಾಸನವಾಗುತ್ತೆ. ಪ್ರತಿಬಾರಿ ನವರಾತ್ರಿಗೂ ಮುನ್ನ ಸ್ವರ್ಣಾಸನಕ್ಕೆ ಸಿಂಹಾವನ್ನು ಜೋಡಿಸಿ ಅಂಬಾ ವಿಲಾಸದಲ್ಲಿ ನವ ರಾತ್ರಿಯಂದು ಪ್ರದರ್ಶನಕ್ಕೆ ಇಡುವುದು ವಿಶೇಷ. ಸಿಂಹವನ್ನಾ ಜೋಡಿಸಿ, ಹೋಮ ಹವನಗಳನ್ನಾ ಮಾಡಲಾಗುತ್ತೆ. ಈ ಮೂಲಕ ಅದಕ್ಕೆ ದೈವೀಶಕ್ತಿಯನ್ನಾ ಆಹ್ವಾನೆ ಮಾಡಲಾಗುತ್ತೆ. ಆಗ ಮಾತ್ರ ಸ್ವರ್ಣಾಸನ ಸಿಂಹಾಸನವಾಗುವುದು. ಈ ಸಿಂಹಾಸನದ ಮೇಲೆ ಕುಳಿತು ಮೈಸೂರು ರಾಜರು ಖಾಸಗಿ ದರ್ಬಾರ್ ಮಾಡುತ್ತಾರೆ. ಕೇವಲ ನವರಾತ್ರಿ ಸಂಧರ್ಭದಲ್ಲಿ ಮಾತ್ರ ಸಾರ್ವಜನಿಕ ವೀಕ್ಷಣೆಗೆ ಸಿಗುವ ರತ್ನ ಖಚಿತ ಸಿಂಹಾಸನವನ್ನು ನವರಾತ್ರಿ ಬಳಿಕ ಅರಮನೆಯ ರಹಸ್ಯ ಕೋಣೆಯೊಂದರಲ್ಲಿ ಇಡಲಾಗುತ್ತದೆ. ಒಮ್ಮೆ ಇಟ್ಟ ಸಿಂಹಾಸನದ ಬಾಗಿಲು ತೆಗೆಯುವುದು ಮತ್ತೆ ಮುಂದಿನ ವರ್ಷದ ನವರಾತ್ರಿ ಉತ್ಸವಕ್ಕೆ.
-ಮೈನಾಶ್ರೀ.ಸಿ

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com