
ಬೆಂಗಳೂರು: ನಗರದಲ್ಲಿಂದು ಒಂದೇ ದರೋಡೆಕೋರರ ಗುಂಪಿನಿಂದ ಸರಣಿ ಕಳ್ಳತನ ನಡೆದಿದೆ. ಪಲ್ಸರ್ ಬೈಕ್‌ನಲ್ಲಿ ಬಂದ ಇಬ್ಬರು ಖದೀಮರು 3 ದರೋಡೆಯನ್ನು ನಡೆಸಿದ್ದಾರೆ.
ಬೆಂಗಳೂರಿನ ಲಗ್ಗೆರೆಯ ಬೃಂದಾವನ ರಸ್ತೆ ಘಟನೆ ನಡೆದಿದೆ. ಇಂದು ಮುಂಜಾನೆಯಿಂದ ಇಬ್ಬರು ಪಾದಚಾರಿಗಳು ಹಾಗೂ ಒಬ್ಬ ಬೈಕ್ ಸವಾರನಿಂದ ಚಿನ್ನಾಭರಣ ದೋಚಿ ಪರಾರಿಯಾಗಿದ್ದಾರೆ.
ಇಂದು ಮುಂಜಾನೆ ರಾಜಗೋಪಾನ ನಗರ ನಿವಾಸಿಯಾದ ಮರಿಬಿಟ್ಟೇಗೌಡ ಎಂಬುವರು ತಮ್ಮ ಪತ್ನಿ ಹಾಗೂ ಮಗುವಿನೊಂದಿಗೆ ದೇವಾಲಯಕ್ಕೆ ತೆರಳುತ್ತಿದ್ದರು. ಈ ವೇಳೆ ಪಲ್ಸರ್ ಬೈಕ್‌ನಲ್ಲಿ ಬಂದ ಇಬ್ಬರು ಖದೀಮರು ಅವರನ್ನು ಅಡ್ಡಗಟ್ಟಿ ಚಿನ್ನಾಭರಣ ನೀಡುವಂತೆ ಬೆದರಿಕೆ ಹಾಕಿದರು.
ಮರಿಬಿಟ್ಟೆಗೌಡ ಎಂಬುವರಿಂದ 2 ಚಿನ್ನದ ಚೈನ್ ಹಾಗೂ ಅವರ ಪತ್ನಿ ಬಳಿಯಿದ್ದ ಚಿನ್ನದ ನೆಕ್ಲೆಸ್ ಅನ್ನು ದರೋಡೆಕೋರರು ದೋಚಿದ್ದಾರೆ. ಈ ವೇಳೆ ಪತ್ನಿ ಬಳಿಯಿದ್ದ 16 ಚಿನ್ನದ ಮಾಂಗಲ್ಯ ಚೈನ್‌ನ್ನು ಈ ಕಳ್ಳರ ಗುಂಪು ಪಡೆಯಲು ನಿರಾಕರಿಸಿದ್ದಾರೆ ಎನ್ನಲಾಗಿದೆ.
ಇದರ ಬಳಿಕ 2ನೇ ಕಳವಿಗೆ ಮುಂದಾಯಿತು ಈ ದರೋಡೆ ಗುಂಪು. ಮುಂಜಾನೆ 5 ಗಂಟೆಗೆ ಮತ್ತೊಬ್ಬ ಪಾದಾಚಾರಿ ಕೃಷ್ಣಮೂರ್ತಿ ಜೋಯಿಸ ಎಂಬವರಿಂದ 1 ಚಿನ್ನದ ಸರವನ್ನು ದೋಚಿ ಪರಾರಿಯಾಗಿದೆ.
ಮತ್ತೆ ಅದೇ ಪ್ರದೇಶದಲ್ಲಿ ಮುಂಜಾನೆ ಬೈಕ್‌ನಲ್ಲಿ ತೆರಳುತ್ತಿದ್ದ ರಾಜೇಶ್ ಎಂಬುವರ ಮೇಲೆ ಕಣ್ಣಾಕಿದರು. ಬೈಕ್ ಸಾವರನ್ನು ಅಡ್ಡಗಟ್ಟಿದ ಈ ಖದೀಮರು, ಅವರ ಬಳಿಯಿದ್ದ ಚಿನ್ನದ ಸರವನ್ನು ನೀಡುವಂತೆ ಬೆದರಿಕೆ ಹಾಕಿ, ಕಸಿದುಕೊಂಡಿದ್ದಾರೆ.
ಈ ಮೂರು ದರೋಡೆ ಪ್ರಕರಣಗಳು ಬೃಂದಾವನ ರಸ್ತೆಯಲ್ಲೇ ನಡೆದಿದ್ದು, ಈ ಘಟನೆ ಸ್ಥಳೀಯರಲ್ಲಿ ಆತಂಕ ಮೂಡಿಸಿದೆ. ಈ ಕುರಿತು ರಾಜಗೋಪಾಲ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದು, ಪೊಲೀಸರು ಖದೀಮರಿಗಾಗಿ ಜಾಲ ಬೀಸಿದ್ದಾರೆ.
Advertisement