ಪಂಚಾಯತ್ ಪ್ರತಿನಿಧಿಗಳ ಗೌರವಧನ ದುಪ್ಪಟ್ಟು

ಗ್ರಾಪಂ, ತಾಪಂ, ಜಿಪಂ ಅಧ್ಯಕ್ಷರು, ಉಪಾಧ್ಯಕ್ಷರು, ಸದಸ್ಯರು, ಇದರ ಲಾಭ ಪಡೆಯಲಿದ್ದಾರೆ...
ಪಂಚಾಯತ್ ಪ್ರತಿನಿಧಿಗಳ ಗೌರವಧನ ಹೆಚ್ಚಳ
ಪಂಚಾಯತ್ ಪ್ರತಿನಿಧಿಗಳ ಗೌರವಧನ ಹೆಚ್ಚಳ

ಹುಬ್ಬಳ್ಳಿ: ಪಂಚಾಯತ್ ರಾಜ್ ಸಂಸ್ಥೆಗಳ ಚುನಾಯಿತ ಪ್ರತಿನಿಧಿಗಳಿಗೆ ನೀಡುತ್ತಿರುವ ಮಾಸಿಕ ಗೌರವಧನ ಇಮ್ಮಡಿಗೊಳಿಸಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ. ಗ್ರಾಪಂ, ತಾಪಂ, ಜಿಪಂ ಅಧ್ಯಕ್ಷರು, ಉಪಾಧ್ಯಕ್ಷರು, ಸದಸ್ಯರು, ಇದರ ಲಾಭ ಪಡೆಯಲಿದ್ದಾರೆ.

ನಗರದಲ್ಲಿ ಭಾನುವಾರ ಸುದ್ದಿಗಾರರ ಜತೆ ಮಾತನಾಡಿದ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಎಚ್.ಕೆ.ಪಾಟೀಲ, ಶನಿವಾರ ಅಧಿಕೃತ ಆದೇಶ ಹೊರಬಿದ್ದಿದೆ. ಈ ಮೂಲಕ ಪಂಚಾಯತ್ ರಾಜ್ ಸಂಸ್ಥೆಗಳ ಪ್ರತಿನಿಧಿಗಳ  ಬಹುವರ್ಷಗಳ ಬೇಡಿಕೆ ಈಡೇರಿದೆ ಎಂದರು.

ಯಾರಿಗೆಷ್ಟು ಹೆಚ್ಚಳ?
ಗ್ರಾಮ ಪಂಚಾಯ್ತಿ
ಅಧ್ಯಕ್ಷರು: ಮೊದಲು-ರೂ. 500, ಈಗ-ರೂ. 1000
ಉಪಾಧ್ಯಕ್ಷರು: ಮೊದಲು-ರೂ. 300, ಈಗ-ರೂ. 600
ಸದಸ್ಯರು: ಮೊದಲು-ರೂ. 250, ಈಗ-ರೂ. 500

ತಾಲೂಕು ಪಂಚಾಯ್ತಿ
ಅಧ್ಯಕ್ಷರು: ಮೊದಲು-ರೂ. 2,250, ಈಗ-ರೂ. 4,500
ಉಪಾಧ್ಯಕ್ಷರು: ಮೊದಲು-ರೂ. 1,500, ಈಗ-ರೂ. 3,000
ಸದಸ್ಯರು: ಮೊದಲು-ರೂ. 750 ಈಗ-ರೂ. 1,500

ಜಿಲ್ಲಾ ಪಂಚಾಯ್ತಿ
ಅಧ್ಯಕ್ಷರು: ಮೊದಲು-ರೂ. 3,000, ಈಗ-ರೂ. 6,000
ಉಪಾಧ್ಯಕ್ಷರು: ಮೊದಲು-ರೂ. 2,250 ಈಗ-ರೂ. 4,500
ಸದಸ್ಯರು: ಮೊದಲು-ರೂ. 1,500 ಈಗ-ರೂ. 3,000

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com