
ಚಿಕ್ಕಮಗಳೂರು: ನಕ್ಸಲ್ ಹೋರಾಟ ಬಿಟ್ಟು ಶಸ್ತ್ರಾಸ್ತ್ರಗಳನ್ನು ತ್ಯಜಿಸಿ ಸಮಾಜದ ಮುಖ್ಯವಾಹಿನಿಗೆ ಬರಲು ತೀರ್ಮಾನಿಸಿದ್ದ ನಕ್ಸಲ್ ಮುಖಂಡರಾದ ಸಿರಿಮನೆ ನಾಗರಾಜ ಹಾಗೂ ನೂರ್ ಜುಲ್ಫೀಕರ್ ಅವರು ಸೋಮವಾರ ಚಿಕ್ಕಮಗಳೂರು ಜಿಲ್ಲಾಧಿಕಾರಿ ಶೇಖರಪ್ಪ ಅವರೆದುರು ಶರಣಾಗಿದ್ದಾರೆ.
ಸಿರಿಮನೆ ನಾಗರಾಜ್ ನೂರ್ ಜುಲ್ಫೀಕರ್ ನಕ್ಸಲ್ ಹೋರಾಟ ಬಿಟ್ಟು ಶಸ್ತ್ರಾಸ್ತ್ರಗಳನ್ನು ತ್ಯಜಿಸಿ ಇಬ್ಬರು ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಶರಣಾಗತರಾಗಿದ್ದಾರೆ. ಈ ವೇಳೆ ಪುನರ್ವಸತಿ ಸಮಿತಿಯ ರಾಜ್ಯ ಮತ್ತು ಜಿಲ್ಲಾ ಸದಸ್ಯರ ಸಮ್ಮುಖದಲ್ಲಿ ಶರಣಾಗತರಾಗಿದ್ದಾರೆ. ಈ ವೇಳೆ ಜಿಲ್ಲಾ ವರಿಷ್ಠಾಧಿಕಾರಿ ಆರ್. ಚೇತನ್ ಸೇರಿದಂತೆ ನಾಗರಿಕ ಸಮಾಜದ ಪ್ರತಿನಿಧಿಗಳು ಹಾಜರಿದ್ದರು.
ಸಾಮಾಜಿಕ ಹೋರಾಟಗಾರ್ತಿ ಗೌರಿ ಲಂಕೇಶ್ ಹಾಗೂ ಹಿರಿಯ ಸ್ವಾತಂತ್ರ್ಯ ಹೋರಾಟಗಾರರಾದ ದೊರೆಸ್ವಾಮಿ, ಬಿ.ಟಿ ಲಲಿತಾನಾಯಕ್ ಸೇರಿಂದಂತೆ ಪ್ರಮುಖರು ಈ ಕ್ಷಣಕ್ಕೆ ಸಾಕ್ಷಿಯಾಗಿದ್ದರು. ಹಲವು ದಿನಗಳಿಂದ ಗೊಂದಲಕ್ಕೆ ಕಾರಣವಾಗಿದ್ದ ನಕ್ಸಲ್ ಮುಖಂಡರ ಶರಣಾಗತಿಗೆ ಇಂದು ಕಾಲ ಕೂಡಿ ಬಂದಿದೆ.
Advertisement