ಲಾಡ್ಜ್ ಮೇಲೆ ಪೊಲೀಸ್ ದಾಳಿ: ಪಿಯು ವಿದ್ಯಾರ್ಥಿನಿ, ಯುವಕನ ಬಂಧನ

ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
Updated on

ನೆಲ್ಯಾಡಿ: ಇಲ್ಲಿನ ಲಾಡ್ಜ್‌ವೊಂದರ ಮೇಲೆ ದಾಳಿ ನಡೆಸಿ ಪಿಯು ವಿದ್ಯಾರ್ಥಿನಿ ಹಾಗೂ ಯುವಕನೋರ್ವನನ್ನು ನೆಲ್ಯಾಡಿ ಹೊರಠಾಣೆ ಹಾಗೂ ಉಪ್ಪಿನಂಗಡಿ ಪೊಲೀಸರು ಬಂಧಿಸಿದ್ದಾರೆ.

ಖಚಿತ ಮಾಹಿತಿ ಮೇರೆಗೆ ಪೊಲೀಸರು ಕೊಕ್ಕಡ ಜೋಡುಮಾರ್ಗದ ಬಳಿ ಇರುವ ಲಾಡ್ಚ್‌ವೊಂದರ ಮೇಲೆ ದಾಳಿ ಮಾಡಿದ್ದಾರೆ. ಈ ವೇಳೆ ಲಾಡ್ಜ್‌ನಲ್ಲಿ ತಂಗಿದ್ದ ಸುಳ್ಯ ಕಾಲೇಜಿನ ಪಿಯುಸಿ ವಿದ್ಯಾರ್ಥಿನಿ ಹಾಗೂ ರಾಮಕುಂಜ ಕೆದಿಲ ನಿವಾಸಿ ಪವನ್ ಕುಮಾರ್ ಭಂಡಾರಿ ಎಂಬಾತನನ್ನು ಬಂಧಿಸಿದ್ದಾರೆ.

ಇಂದು ಬೆಳಗ್ಗೆ ಕೊಕ್ಕಡ ಜೋಡು ಮಾರ್ಗದಲ್ಲಿರುವ ವಸತಿ ಗೃಹಕ್ಕೆ ಪವನ್ ಕುಮಾರ್ ವಿದ್ಯಾರ್ಥಿಯನ್ನು ಕರೆದುಕೊಂಡು ಬಂದಿದ್ದ. ಲಾಡ್ಜ್ ಸಿಬ್ಬಂದಿಗೆ ಈಕೆ ನನ್ನ ತಂಗಿ ಎಂದು ಹೇಳಿ ಇನ್ನೂ ನಾಲ್ಕು ಜನ ಸಂಬಂದಿಕರು ಬರಲಿದ್ದು ಅವರನ್ನು ನಾವು ತಂಗಿರುವ ಕೊಠಡಿಗೆ ಕಳಿಸುವಂತೆ ಹೇಳಿದ್ದ ಎಂದು ಪೊಲೀಸರಿಗೆ ಸಿಬ್ಬಂದಿ ವಿವರಿಸಿದ್ದಾರೆ.

ಪವನ್ ಕುಮಾರ್ ಭಂಡಾರಿಯ ಮೇಲೆ ಕಣ್ಣಿಟ್ಟಿದ್ದ ಕಡಬ ಪರಿಸರದ ಯುವಕರು ಆತನನ್ನು ಹಿಂಬಾಲಿಸಿಕೊಂಡ ಬಂದು ನೆಲ್ಯಾಡಿ ಹೊರಠಾಣೆ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಈ ಹಿನ್ನೆಲೆಯಲ್ಲಿ ಪೊಲೀಸರು ದಾಳಿ ಮಾಡಿದ್ದರಿಂದ ಪ್ರಕರಣ ಬೆಳಕಿಗೆ ಬಂದಿದೆ.

ದಾಳಿ ವೇಳೆ ವಶಕ್ಕೆ ಪಡೆದಿದ್ದ ವಿದ್ಯಾರ್ಥಿನಿಯನ್ನು ವಿಚಾರಣೆಗೊಳಪಡಿಸಿದಾಗ ನನಗೆ ತಪ್ಪು ಮಾಹಿತಿ ನೀಡಿ ಕರೆದುಕೊಂಡು ಬರಲಾಗಿತ್ತು ಎಂದು ಪೊಲೀಸರಿಗೆ ತಿಳಿಸಿದ್ದಾಳೆ. ದಾಳಿ ನಂತರ ಲಾಡ್ಜ್ ಎದುರ ಸುಮಾರು 500ಕ್ಕಿಂತಲೂಲ ಹೆಚ್ಚಿನ ಜನರು ಸೇರಿದ್ದು ಯಾವುದೇ ರೀತಿಯ ಅಹಿತಕರ ಘಟನೆ ನಡೆಯದಂತೆ ಉಪ್ಪಿನಂಗಡಿ ಎಸ್‌ಐ ಜಗದೀಶ್ ರೆಡ್ಡಿಯವರ ನೇತೃತ್ವದಲ್ಲಿ ಪೊಲೀಸರು ಮುನ್ನೆಚ್ಚರಿಕೆ ವಹಿಸಿದ್ದರು.

ಪವನ್ ಕುಮಾರ್ ಭಂಡಾರಿಯನ್ನು ವಿಚಾರಣೆಗೊಳಪಡಿಸಿದಾಗ ಆತ ತಪ್ಪು ಮಾಹಿತಿ ನೀಡಿ ಪಾರಾಗಲು ಯತ್ನಿಸಿದ ಆದರೆ ಪೊಲೀಸ್ ಸಿಬ್ಬಂದಿಗಳು ಪ್ರಕರಣವನ್ನು ಸಮರ್ಥವಾಗಿ ನಿಭಾಯಿಸಿ ಆರೋಪಿಯಿಂದ ಮಾಹಿತಿ ಕಲೆ ಹಾಕುವಲ್ಲಿ ಯಶಸ್ವಿಯಾಗಿದ್ದಾರೆ.

ಪವನ್ ವಿರುದ್ಧ ಹಲವು ಪ್ರಕರಣಗಳು
ಪವನ್ ಕುಮಾರ್ ಭಂಡಾರಿ ಹಲವು ಪ್ರಕರಣಗಳಲ್ಲಿ ಕಾಣಿಸಿಕೊಂಡಿದ್ದು ಇತ ಹುಡುಗಿಯರನ್ನು ದಾರಿ ತಪ್ಪಿಸಿ ದಂಧೆ ನಡೆಸುತ್ತಿರುವ ಬಗ್ಗೆ ಸಾರ್ವಜನಿಕರು ಅನುಮಾನ ವ್ಯಕ್ತಪಡಿಸಿದ್ದು, ಈ ಬಗ್ಗೆ ಕೂಲಂಕುಶ ತನಿಖೆ ನಡೆಸುವಂತೆ ಆಗ್ರಹಿಸಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com