Close

  • Tag results for police

500 ಪ್ರಕರಣಗಳಲ್ಲಿ ಬೇಕಾಗಿದ್ದ ಮಾವೋವಾದಿ ಸಂಘಟನೆಯ ಅಗ್ರಗಣ್ಯ ನಾಯಕ ಬಿಹಾರದ ಗಯಾದಲ್ಲಿ ಶವವಾಗಿ ಪತ್ತೆ!

ಹಲವು ಪ್ರಕರಣಗಳಲ್ಲಿ ಪೊಲೀಸರಿಗೆ ಬೇಕಾಗಿದ್ದ, ಮಾವೋವಾದಿ ಸಂಘಟನೆಯ ಅಗ್ರಗಣ್ಯ ನಾಯಕ ಸಂದೀಪ್ ಯಾದವ್ ಅಲಿಯಾಸ್ ವಿಜಯ್ ಯಾದವ್ (55)  ಬಿಹಾರದ ಗಯಾ ಜಿಲ್ಲೆಯಲ್ಲಿ ಶವವಾಗಿ ಪತ್ತೆಯಾಗಿದ್ದಾರೆ. 

published on : 26th May 2022

ಪಾಗಲ್ ಪ್ರೇಮಿಯ ಹುಚ್ಚಾಟ?: ಶಾಲೆಯಿಂದ ರಸ್ತೆಯುದ್ದಕ್ಕೂ Sorry, Sorry ಬರಹ!!

ಬೆಂಗಳೂರಿನಲ್ಲಿ ಪಾಗಲ್ ಪ್ರೇಮಿಯೊಬ್ಬ ಮಾಡಿರುವ ಹುಚ್ಚಾಟ ಇದೀಗ ಭಾರಿ ಸುದ್ದಿಗೆ ಗ್ರಾಸವಾಗಿದ್ದು, ನಗರದ ಶಾಲೆಯೊಂದರ ಮೆಟ್ಟಿಲು, ಕಾಂಪೌಂಡ್ ಹಾಗೂ ರಸ್ತೆಯುದ್ದಕ್ಕೂ Sorry,  Sorry ಎಂದು ಬರೆಯಲಾಗಿದೆ.

published on : 24th May 2022

ಹುಬ್ಬಳ್ಳಿ: ಟ್ರಕ್- ಖಾಸಗಿ ಬಸ್ ನಡುವೆ ಭೀಕರ ಅಪಘಾತ; 8 ಸಾವು, 20ಕ್ಕೂ ಹೆಚ್ಚು ಮಂದಿಗೆ ಗಾಯ

ಹುಬ್ಬಳ್ಳಿ-ಧಾರವಾಡ ಬೈಪಾಸ್‌ನಲ್ಲಿ (ರಾಷ್ಟ್ರೀಯ ಹೆದ್ದಾರಿ 48) ಮಂಗಳವಾರ ಮುಂಜಾನೆ ಹುಬ್ಬಳ್ಳಿ ಸಮೀಪದ ರೇವಡಿಹಾಳ್ ಗ್ರಾಮದ ಬಳಿ ಖಾಸಗಿ ಬಸ್ ಮತ್ತು ಟ್ರಕ್ ನಡುವೆ ಸಂಭವಿಸಿದ ಅಪಘಾತದಲ್ಲಿ ಎಂಟು ಜನರು ಸಾವನ್ನಪ್ಪಿದ್ದಾರೆ.

published on : 24th May 2022

ಮೈಸೂರು: ತಾಳಿ ಕಟ್ಟುವಾಗ ಕೆಳಗೆ ಬಿದ್ದ ವಧು; ನನಗೆ ಮದುವೆ ಬೇಡ ಎಂದು ಹಠ, ಮಂಟಪದಲ್ಲಿ ನಡೆದ ಹೈಡ್ರಾಮಾ!

ತಾಳಿ ಕಟ್ಟುವ ಶುಭವೇಳೆಯಲ್ಲಿ ವಧು ಕುಸಿದು ಬಿದ್ದಂತೆ ನಟಿಸಿ ನಂತರ ನನಗೆ ಮದುವೆ ಬೇಡ. ನಾನು ನನ್ನ ಪ್ರಿಯಕರನನ್ನೇ ಮದುವೆಯಾಗುತ್ತೇನೆ ಎಂದು ಮದುವೆ ಮಂಟಪದಲ್ಲಿ ವಧು ಹೈಡ್ರಾಮಾ ನಡೆದಿದೆ. 

published on : 22nd May 2022

ಕಸ್ಟಡಿಯಲ್ಲಿದ್ದ ವ್ಯಕ್ತಿ ಸಾವು: ಅಸ್ಸಾಂ ಪೊಲೀಸ್ ಠಾಣೆಗೆ ಬೆಂಕಿ ಹಚ್ಚಿದ್ದ ಆರೋಪಿಗಳ 5 ಮನೆಗಳ ಧ್ವಂಸ ಮಾಡಿದ ಜಿಲ್ಲಾಡಳಿತ!!

ಪೊಲೀಸ್ ಕಸ್ಟಡಿಯಲ್ಲಿದ್ದ ವ್ಯಕ್ತಿ ಸಾವನ್ನಪ್ಪಿದ ವಿಚಾರಕ್ಕೆ ಸಂಬಂಧಿಸಿದಂತೆ ಪೊಲೀಸ್ ಠಾಣೆಗೆ ಬೆಂಕಿ ಹಾಕಿದ್ದ ಆರೋಪಿಗಳ ವಿರುದ್ಧ ಅಸ್ಸಾಂನ ನಾಗಾಂವ್ ಜಿಲ್ಲಾಡಳಿತ ಬುಲ್ಡೋಜರ್ ಕ್ರಮ ಕೈಗೊಂಡಿದ್ದು, ಆರೋಪಿಗಳ 5 ಮನೆಗಳನ್ನು ಧ್ವಂಸ ಮಾಡಿದೆ.

published on : 22nd May 2022

ಕುಖ್ಯಾತ ಓಜಿಕುಪ್ಪಂ ಗ್ಯಾಂಗ್‌ನ ದಂಪತಿ ಸೆರೆ: 1.22 ಕೋಟಿ ರೂ. ಬೆಲೆಯ ವಸ್ತುಗಳು ವಶ

ಸಾರ್ವಜನಿಕರ ಗಮನ ಬೇರೆಡೆ ಸೆಳೆದು ಹಾಗೂ ಕಾರಿನ ಗ್ಲಾಸ್ ಒಡೆದು ಹಣ, ಚಿನ್ನಾಭರಣ, ಬೆಲೆ ಬಾಳುವ ವಸ್ತುಗಳನ್ನು ದೋಚುತ್ತಿದ್ದ ಕುಖ್ಯಾತ ಒಜಿಕುಪ್ಪಂ ಗ್ಯಾಂಗ್‌ನ ದಂಪತಿ ಸೇರಿ ಮೂವರನ್ನು ಬಂಧಿಸಿ ಭರ್ಜರಿ ಬೇಟೆಯಾಡಿರುವ ದಕ್ಷಿಣ ವಿಭಾಗದ ಪೊಲೀಸರು 1.22 ಕೋಟಿ ರೂ. ಮೌಲ್ಯದ ವಸ್ತುಗಳನ್ನು ವಶಪಡಿಸಿಕೊಂಡಿದ್ದಾರೆ.

published on : 21st May 2022

ಬೆಂಗಳೂರು ಶಾಪಿಂಗ್ ಮಾಲ್‌ನಲ್ಲಿ ಆಯತಪ್ಪಿ ಬಿದ್ದ ಸ್ನೇಹಿತರು: ಯುವತಿ ಸಾವು

ಬೆಂಗಳೂರಿನ ಬ್ರಿಗೇಡ್ ರಸ್ತೆಯ ‘5 ಅವೆನ್ಯೂ’ ಶಾಪಿಂಗ್ ಮಾಲ್‌ವೊಂದರ ಕಟ್ಟಡದಿಂದ ಯುವಕ-ಯುವತಿಯರಿಬ್ಬರು ಆಯತಪ್ಪಿ ಬಿದ್ದಿದ್ದು, ಯುವತಿ ಸಾವನ್ನಪ್ಪಿ ಯುವಕ ಗಂಭೀರವಾಗಿ ಗಾಯಗೊಂಡಿದ್ದಾನೆ.

published on : 21st May 2022

ಶಿವಾಜಿ ಮಹಾರಾಜ್ ನೆಲೆಸಿದ್ದ ಲಾಲ್ ಮಹಲ್ ನಲ್ಲಿ ನೃತ್ಯ: ನಟಿ ವೈಷ್ಣವಿ ಪಾಟೀಲ್ ವಿರುದ್ಧ ಪ್ರಕರಣ

ಛತ್ರಪತಿ ಶಿವಾಜಿ ಮಹಾರಾಜರು ತಮ್ಮ ಆರಂಭಿಕ ಜೀವನದ ಹಲವು ವರ್ಷಗಳನ್ನು ಕಳೆದ ಪುಣೆಯ ಲಾಲ್ ಮಹಲ್‌ನ ಆವರಣದಲ್ಲಿ ಲಾವಣಿ ನೃತ್ಯ ಮಾಡಿದ ಆರೋಪದ ಮೇಲೆ ಮರಾಠಿ ಕಲಾವಿದೆ ಸೇರಿದಂತೆ ಇತರ ಮೂವರ ವಿರುದ್ಧ ಪ್ರಕರಣ ದಾಖಲಾಗಿದೆ.

published on : 21st May 2022

ತುಮಕೂರು: ಬೈಕ್‌ಗಳ ಮುಖಾಮುಖಿ ಡಿಕ್ಕಿ: ನಾಲ್ವರ ಸಾವು

ದ್ವಿಚಕ್ರ ವಾಹನಗಳ ಮಧ್ಯೆ ನಡೆದ ಅಪಘಾತದಲ್ಲಿ ನಾಲ್ವರು ಮೃತಪಟ್ಟ ಘಟನೆ ತುಮಕೂರಿನಲ್ಲಿ ಶುಕ್ರವಾರ ಸಂಜೆ ನಡೆದಿದೆ.

published on : 20th May 2022

ಶಿಗ್ಗಾಂವಿ ಥಿಯೇಟರ್ ನಲ್ಲಿ ಗುಂಡಿನ ದಾಳಿ: ತಿಂಗಳ ನಂತರ ಆರೋಪಿ ಬಂಧನ

ಹಾವೇರಿ ಜಿಲ್ಲೆಯ ಶಿಗ್ಗಾಂವಿಯ ಥಿಯೇಟರ್ ನಲ್ಲಿ ಗುಂಡಿನ ದಾಳಿ ಪ್ರಕರಣದ ಆರೋಪಿಯನ್ನು 30 ದಿನಗಳ ನಂತರ ಗುರುವಾರ ಬೆಳಗ್ಗೆ ಹಾವೇರಿ ಪೊಲೀಸರು ಬಂಧಿಸಿದ್ದಾರೆ. ಆರೋಪಿ ಮಂಜುನಾಥ್ ಆಲಿಯಾಸ್ ಮಲ್ಲಿಕ್ ಪಾಟೀಲ್ ಘಟನೆ ನಡೆದ ಬಳಿಕ ತಲೆಮರೆಸಿಕೊಂಡಿದ್ದ. ಉತ್ತರ ಕನ್ನಡ ಜಿಲ್ಲೆಯ ಮುಂಡಗೋಡದಲ್ಲಿ ಆತನನ್ನು ಬಂಧಿಸಲಾಗಿದೆ.

published on : 20th May 2022

ಅಪರಾಧ ನಡೆಸುವ ಪೊಲೀಸರಿಗೆ ಕ್ಷಮೆ ಇಲ್ಲ: ಗೃಹ ಸಚಿವ ಆರಗ ಜ್ಞಾನೇಂದ್ರ

ಅಪರಾಧಿ ಗಳನ್ನು ಹಿಡಿಯಬೇಕಾದ ಪೊಲೀಸರು, ಅಪರಾಧಗಳಲ್ಲಿ ಭಾಗಿಯಾಗುವುದನ್ನು, ಸಹಿಸುವುದಿಲ್ಲ ಎಂದು ಗೃಹ ಸಚಿವ ಶ್ರೀ ಆರಗ ಜ್ಞಾನೇಂದ್ರರವರು ಎಚ್ಚರಿಕೆ ನೀಡಿದ್ದಾರೆ.

published on : 19th May 2022

ಮತಾಂತರ ಆರೋಪ: ಕೊಡಗಿನಲ್ಲಿ ದಂಪತಿ ವಿರುದ್ಧ ಪ್ರಕರಣ ದಾಖಲು!!

ಮತಾಂತರ ಕಾಯ್ದೆಗೆ ರಾಜ್ಯಪಾಲಕ ಅಂಕಿತ ಬಿದ್ದ ಬೆನ್ನಲ್ಲೇ ಇತ್ತ ಕೊಡಗಿನಲ್ಲಿ ದಂಪತಿ ವಿರುದ್ಧ ಬಲವಂತದ ಮತಾಂತರ ಪ್ರಕರಣ ದಾಖಲಾಗಿದೆ.

published on : 18th May 2022

ರಾಜ್ಯದಲ್ಲಿ ಸೈಬರ್ ಅಪರಾಧದ ವಿರುದ್ಧ ಹೋರಾಡಲು ತಾಂತ್ರಿಕ ಪರಿಣಿತರ ಬಳಸಿಕೊಳ್ಳಲಾಗುತ್ತದೆ: ನೂತನ ಪೊಲೀಸ್ ಆಯುಕ್ತ

1991ನೇ ಬ್ಯಾಚ್‌ನ ಐಪಿಎಸ್‌ ಅಧಿಕಾರಿ ಸಿಎಚ್‌ ಪ್ರತಾಪ್‌ ರೆಡ್ಡಿ ಅವರು ಬೆಂಗಳೂರಿನ 37ನೇ ಪೊಲೀಸ್‌ ಆಯುಕ್ತರಾಗಿ ಮಂಗಳವಾರ ಪೊಲೀಸ್‌ ಆಯುಕ್ತರ ಕಚೇರಿಯಲ್ಲಿ ಅಧಿಕಾರ ಸ್ವೀಕರಿಸಿದರು.

published on : 18th May 2022

ಆ್ಯಸಿಡ್ ಆರೋಪಿಯನ್ನು ಇನ್ನೂ ವಶಕ್ಕೆ ಪಡೆದು ವಿಚಾರಣೆ ಆರಂಭಿಸದ ಕಾಮಾಕ್ಷಿಪಾಳ್ಯ ಪೊಲೀಸರು!

ಪರಾರಿಯಾಗಲು ಯತ್ನಿಸಿ ಕಾಲಿಗೆ ಗುಂಡು ಹಾರಿಸಿದ್ದ ಆ್ಯಸಿಡ್ ದಾಳಿ ಪ್ರಕರಣದ ಆರೋಪಿ ನಾಗೇಶ್ ಆಸ್ಪತ್ರೆಯಲ್ಲಿ ಚೇತರಿಸಿಕೊಳ್ಳುತ್ತಿರುವ ಹಿನ್ನೆಲೆಯಲ್ಲಿ ಕಾಮಾಕ್ಷಿಪಾಳ್ಯ ಪೊಲೀಸರು ಇನ್ನೂ ಪೊಲೀಸ್ ಕಸ್ಟಡಿಗೆ ತೆಗೆದುಕೊಂಡಿಲ್ಲ.

published on : 17th May 2022

ಬೆಂಗಳೂರು ನಗರ ನೂತನ ಪೂಲೀಸ್ ಆಯುಕ್ತರಾಗಿ ಸಿ.ಹೆಚ್ ಪ್ರತಾಪ್ ರೆಡ್ಡಿ ಅಧಿಕಾರ ಸ್ವೀಕಾರ

ಬೆಂಗಳೂರು ನಗರದ ನೂತನ ಪೊಲೀಸ್ ಆಯುಕ್ತರಾಗಿ ಸಿ.ಹೆಚ್. ಪ್ರತಾಪ್ ರೆಡ್ಡಿ ಅವರಿಂದು ಅಧಿಕಾರ ವಹಿಸಿಕೊಂಡರು. ಪೊಲೀಸ್ ಆಯುಕ್ತರ ಕಚೇರಿಯಲ್ಲಿ ನಿರ್ಗಮಿತ ಕಮೀಷನರ್ ಕಮಲ್ ಪಂತ್ ಅವರು ಪ್ರತಾಪ್ ರೆಡ್ಡಿ ಅವರಿಗೆ ಬ್ಯಾಟನ್ ಹಸ್ತಾಂತರಿಸಿದರು. 

published on : 17th May 2022
1 2 3 4 5 6 > 

ರಾಶಿ ಭವಿಷ್ಯ