ಫೋರಂ ಮಾಲ್ 'ಮೈ ಸ್ಕೂಲ್ಬ್ಯಾಗ್'ನಿಂದ 175 ಮಕ್ಕಳಿಗೆ ಉಚಿತ ಬ್ಯಾಗ್

ಮಕ್ಕಳಿಗೆ ಬ್ಯಾಗ್ ವಿತರಿಸುತ್ತಿರುವುದು
ಮಕ್ಕಳಿಗೆ ಬ್ಯಾಗ್ ವಿತರಿಸುತ್ತಿರುವುದು

ಬೆಂಗಳೂರು: ವೈಟ್‍ಫೀಲ್ಡ್‍ನಲ್ಲಿರುವ ಫೋರಂ ವ್ಯಾಲ್ಯೂ ಮಾಲ್, ವಾರ್ಷಿಕ ಮೈ ಸ್ಕೂಲ್‍ಬ್ಯಾಗ್” ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದು, ಇದರ ಅಂಗವಾಗಿ, ಇತ್ತೀಚಿಗೆ ವೈಟ್‍ಫೀಲ್ಡ್‍ನ ಗಾಂಧಿಪುರ ಸರ್ಕಾರಿ ಹೈಯರ್ ಪ್ರೈಮರಿ ಸ್ಕೂಲ್‍ನ 175 ಮಕ್ಕಳಿಗೆ ಉಚಿತವಾಗಿ ಬ್ಯಾಗ್ಗಳನ್ನು ನೀಡಲಾಯಿತು.

ಕ್ಯಾಪಿಟಾಮಾಲ್ಸ್ ಏಷ್ಯಾದ ಮೈ ಸ್ಕೂಲ್ ಬ್ಯಾಗ್ ಕಾರ್ಯಕ್ರಮವು ವಾರ್ಷಿಕ ಕಾಪೆರ್Çರೇಟ್ ಸಾಮಾಜಿಕ ಹೊಣೆಗಾರಿಕೆ (ಸಿಎಸ್‍ಆರ್) ಆಗಿದ್ದು, ಸಂಸ್ಥೆಯ ಅಡಿಯಲ್ಲಿನ ಮಾಲ್ ಕಾರ್ಯನಿರ್ವಹಿಸುತ್ತಿರುವ ಐದು ದೇಶಗಳಲ್ಲಿ ಬಡ ಮಕ್ಕಳಿಗೆ ಶಾಲಾ ಬ್ಯಾಗ್‍ಗಳು ಮತ್ತು ನಿತ್ಯದ ಅಗತ್ಯ ಸಾಮಗ್ರಿಗಳನ್ನು ನೀಡಲಾಗುತ್ತದೆ. ಕ್ಯಾಪಿಟಾ ಲ್ಯಾಂಡ್‍ನ ದತ್ತಿ ಸಂಸ್ಥೆಯಾಗಿರುವ ಕ್ಯಾಪಿಟಾಲ್ಯಾಂಡ್ ಹೋಪ್ ಫೌಂಡೇಶನ್‍ನ ಮೂಲಕ ಧನಸಹಾಯ ಪಡೆಯಲಾಗುತ್ತದೆ. 2009ರಲ್ಲಿ ಮೊದಲ ಬಾರಿಗೆ ಸಿಂಗಾಪುರದಲ್ಲಿ ಮೈ ಸ್ಕೂಲ್‍ಬ್ಯಾಗ್ ಕಾರ್ಯಕ್ರಮವು ಆರಂಭವಾಯಿತು ನಂತರದಲ್ಲಿ 2011ರಲ್ಲಿ ಬೆಂಗಳೂರಿಗೂ ವಿಸ್ತರಿಸಿತು.

ಶಾಲಾಬ್ಯಾಗ್‍ಗಳ ಹೊರತಾಗಿ ಸ್ಟೇಷನರಿ ಮತ್ತು ಇತರ ದೈನಂದಿನ ಅಗತ್ಯಗಳಾದ ಶಾಲಾ ಶೂಗಳು, ಊಟದ ಡಬ್ಬಿಯನ್ನೂ ಮಕ್ಕಳಿಗೆ ನೀಡಲಾಗುತ್ತದೆ. ಅಲ್ಲದೇ ಮೆಕ್‍ಡೊನಾಲ್ಡ್ಸ್‍ನಲ್ಲಿ ಊಟ ಮತ್ತು ಟೈಮ್‍ಜೋನ್‍ನಲ್ಲಿ ಆಟ ಆಡುವ ಅವಕಾಶವೂ ದೊರೆಯುತ್ತದೆ. ವಿಶೇಷ ಸಂತಾ ಶೋವನ್ನು ಕೂಡ ಮಕ್ಕಳಿಗೆ ಆಯೋಜಿಸಲಾಗುತ್ತದೆ. ಸಾಂತಾ ಮಕ್ಕಳನ್ನು ಈ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವಂತೆ ಮಾಡಿ ಮತ್ತು ಉಡುಗೊರೆಗಳನ್ನು ನೀಡುತ್ತಾರೆ. ವಿಚಾರಣೆಗಾಗಿ ಕರೆ ಮಾಡಿ: 080 25043800.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com