ನರಭಕ್ಷಕ ಹುಲಿ ದಾಳಿಗೆ ಜಾರ್ಜ್ ಪುತ್ರನೇ ಕಾರಣ: ಶೆಟ್ಟರ್

ಭೀತಿ ಸೃಷ್ಟಿ ಮಾಡಿರುವ ನರಭಕ್ಷಕ ಹುಲಿ ದಾಳಿಗೆ ಗೃಹ ಸಚಿವ ಕೆಜೆ ಜಾರ್ಜ್ ಅವರ ಪುತ್ರ ರಾಣಾ ಜಾರ್ಜ್ ಅವರೇ ನೇರ ಕಾರಣ ಎಂದು...
ನರಭಕ್ಷಕ ಹುಲಿ ಮತ್ತು ಪ್ರತಿಪಕ್ಷ ನಾಯಕ ಜಗದೀಶ್ ಶೆಟ್ಟರ್
ನರಭಕ್ಷಕ ಹುಲಿ ಮತ್ತು ಪ್ರತಿಪಕ್ಷ ನಾಯಕ ಜಗದೀಶ್ ಶೆಟ್ಟರ್

ಬೆಳಗಾವಿ: ಗಡಿ ಜಿಲ್ಲೆ ಬೆಳಗಾವಿಯಲ್ಲಿ ಭೀತಿ ಸೃಷ್ಟಿ ಮಾಡಿರುವ ನರಭಕ್ಷಕ ಹುಲಿ ದಾಳಿಗೆ ಗೃಹ ಸಚಿವ ಕೆಜೆ ಜಾರ್ಜ್ ಅವರ ಪುತ್ರ ರಾಣಾ ಜಾರ್ಜ್ ಅವರೇ ನೇರ ಕಾರಣ ಎಂದು ಪ್ರತಿಪಕ್ಷ ನಾಯಕ ಮತ್ತು ಮಾಜಿ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ಅವರು ಆರೋಪಿಸಿದ್ದಾರೆ.

ಬೆಳಗಾವಿ ಸುತ್ತಮುತ್ತ ನರಭಕ್ಷಕ ಹುಲಿ ಹಾವಳಿ ಹೆಚ್ಚಾಗಿರುವ ಹಿನ್ನಲೆಯಲ್ಲಿ ರಾಜ್ಯಸರ್ಕಾರದ ವಿರುದ್ಧ ಬಿಜೆಪಿ ಪ್ರತಿಭಟನೆ ಹಮ್ಮಿಕೊಂಡಿದ್ದು, ಬೆಳಗಾವಿಯ ಖಾನಾಪುರದಲ್ಲಿ ಮಾಜಿ ಮುಖ್ಯಮಂತ್ರಿ ಜಗದೀಶ್  ಶೆಟ್ಟರ್ ಅವರ ನೇತೃತ್ವದಲ್ಲಿ ಪ್ರತಿಭಟನೆ ನಡೆಸಲಾಗುತ್ತಿದೆ. ಈ ವೇಳೆ ಮಾತನಾಡಿದ ಜಗದೀಶ್ ಶೆಟ್ಟರ್ ಅವರು, 'ಬೆಳಗಾವಿಯಲ್ಲಿ ನರಭಕ್ಷಕ ಹುಲಿ ದಾಳಿ ನಡೆಯಲು ಗೃಹ ಸಚಿವ ಕೆಜೆ ಜಾರ್ಜ್ ಅವರ ಪುತ್ರ ರಾಣಾ ಜಾರ್ಜ್ ಅವರೇ ನೇರಕಾರಣ'.

'ಈ ಹಿಂದೆ ಚಿಕ್ಕಮಗಳೂರಿನಲ್ಲಿ ಸೆರೆಸಿಕ್ಕಿದ್ದ ನರಭಕ್ಷಕ ಹುಲಿಯನ್ನು ರಾಣಾ ಅವರ ಆದೇಶದಂತೆ ಅಧಿಕಾರಿಗಳು ಭೀಮಘಡ ಅರಣ್ಯ ಪ್ರದೇಶಕ್ಕೆ ತಂದು ಬಿಟ್ಟಿದ್ದಾರೆ. ಇದೀಗ ಹುಲಿ ಮತ್ತೆ ಖಾನಾಪುರದಲ್ಲಿ ತನ್ನ ದಾಳಿ ಮುಂದುವೆರೆಸಿದೆ. ಹೀಗಾಗಿ ಈ ಬಗ್ಗೆ ತನಿಖೆ ನಡೆಯಬೇಕು' ಎಂದು ಶೆಟ್ಟರ್ ಅವರು ಹೇಳಿದರು.

ಈ ಹಿಂದೆ ಚಿಕ್ಕಮಗಳೂರಿನಲ್ಲಿ ಇಬ್ಬರ ಬಲಿ ಪಡೆದಿದ್ದ ಇದೇ ನರಭಕ್ಷಕ ಹುಲಿಯೇ ಇದೀಗ ಖಾನಾಪುರದಲ್ಲಿ ದಾಳಿ ನಡೆಸುತ್ತಿದ್ದು, ಇದೀಗ ಮತ್ತೆ ಇಬ್ಬರು ಸಾವಿಗೀಡಾಗಿದ್ದಾರೆ ಎಂದು ಬಿಜೆಪಿ ಆರೋಪಿಸಿದೆ. ಹೀಗಾಗಿ ಪ್ರಕರಣದ ಕುರಿತು ಕೂಲಂಕುಶ ತನಿಖೆ ನಡೆಸಬೇಕು ಎಂದು ಬಿಜೆಪಿ ಆರೋಪಿಸಿದೆ.

ಕಳೆದ ಹಲವು ದಿನಗಳಿಂದ ಗಡಿ ಜಿಲ್ಲೆ ಬೆಳಗಾವಿಯಲ್ಲಿ ತೀವ್ರ ಭೀತಿ ಸೃಷ್ಟಿ ಮಾಡಿರುವ ನರಭಕ್ಷಕ ಹುಲಿ ಖಾನಾಪುರದಲ್ಲಿ ಈಗಾಗಲೇ ಇಬ್ಬರನ್ನು ಬಲಿ ಪಡೆದುಕೊಂಡಿದೆ. ಹುಲಿಯನ್ನು ಸೆರೆ ಹಿಡಿಯಲು ಅಥವಾ ಅದನ್ನು ಹೊಡೆದುರುಳಿಸಲು ಅರಣ್ಯ ಇಲಾಖೆ ಸಿಬ್ಬಂದಿಗಳ ಅಹೋರಾತ್ರಿ ಕಾರ್ಯಾಚರಣೆ ನಡೆಸುತ್ತಿದ್ದು, ಪರಿಸ್ಥಿತಿ ಕೈ ಮೀರಿದರೆ ಹುಲಿಯನ್ನು ಕೊಲ್ಲಲು ಶಾರ್ಪ್ ಶೂಟರ್‌ಗಳನ್ನು ಕೂಡ ಸಿದ್ಧಪಡಿಸಿಕೊಳ್ಳಲಾಗಿದೆ. ಆದರೆ ಈವರೆಗೂ ಹುಲಿ ಮಾತ್ರ ಅವರ ಕಣ್ಣಿಗೆ ಕಾಣುತ್ತಿಲ್ಲ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com