ಆತಂಕದ ನಡುವೆಯೂ ಸಂಭ್ರಮ

ನಗರದಲ್ಲಿ ಹೊಸ ವರ್ಷವನ್ನು ಹರ್ಷ ಹಾಗೂ ಸಂಭ್ರಮದಿಂದ ಬರಮಾಡಿಕೊಳ್ಳಲಾಯಿತು. ಆದರೆ, ಹೊಸ ವರ್ಷಾಚರಣೆಯ...
ಬ್ರಿಗೇಡ್ ರಸ್ತೆಯಲ್ಲಿ ಹೊಸ ವರ್ಷಾಚರಣೆ
ಬ್ರಿಗೇಡ್ ರಸ್ತೆಯಲ್ಲಿ ಹೊಸ ವರ್ಷಾಚರಣೆ
Updated on

ಬೆಂಗಳೂರು: ನಗರದಲ್ಲಿ ಹೊಸ ವರ್ಷವನ್ನು ಹರ್ಷ ಹಾಗೂ ಸಂಭ್ರಮದಿಂದ  ಬರಮಾಡಿಕೊಳ್ಳಲಾಯಿತು. ಆದರೆ, ಹೊಸ ವರ್ಷಾಚರಣೆಯ ಕೇಂದ್ರ ಸ್ಥಾನವಾಗಿರುವ ಎಂ.ಜೆ ರಸ್ತೆ ಹಾಗೂ ಬ್ರಿಗೇಡ್ ರಸ್ತೆಯಲ್ಲಿ ಆಚರಣೆ ಕಳಾಹೀನವಾಗಿತ್ತು. ಪ್ರಥಮ ಬಾರಿಗೆ ಜನರ ಸಂಖ್ಯೆ ಇಳಿಕೆಯಾಗಿತ್ತು.

ಬಾಂಬ್ ಸ್ಫೋಟ ಕರಿನೆರಳಿನಲ್ಲಿ ಪೊಲೀಸರ ಬಿಗಿ ಭದ್ರತೆ ನಡುವೆ ಎಂ.ಜಿ ರಸ್ತೆ, ಬ್ರಿಗೇಡ್ ರಸೆಯಲ್ಲಿ ನೂತನ ವರ್ಷ 2015ಕ್ಕೆ ಸ್ವಾಗತ ಕೋರಲಾಯಿತು. ಬಾಂಬ್ ಸ್ಫೋಟದ ಭೀತಿ ಹಿನ್ನೆಲೆಯಲ್ಲಿ ಜನರು ಎಂ.ಜಿ ರಸ್ತೆ ಕಡೆ ಮುಖ ಮಾಡಲೇ ಇಲ್ಲ. ಎಂ.ಜಿ ರಸ್ತೆ, ಬ್ರಿಗೇಡ್ ರಸ್ತೆಯಲ್ಲಿನ ಹಲವು ಸ್ಫೋಟದ  ಭೀತಿ ಹಿನ್ನೆಲೆಯಲ್ಲಿ ಜನರು ಎಂ.ಜಿ ರಸ್ತೆ  ಕಡೆ ಮುಖ ಮಾಡಲೇ ಇಲ್ಲ. ಎಂ.ಜಿ ರಸ್ತೆ, ಬ್ರಿಗೇಡ್ ರಸ್ತೆಯಲ್ಲಿನ ಹಲವು ಹೋಟೆಲ್‌ಗಳು, ರೆಸ್ಟೋರೆಂಟ್‌ಗಳು ಗ್ರಾಹಕರಿಲ್ಲದೆ ಖಾಲಿ ಹೊಡೆಯುತ್ತಿದ್ದು  ಸಾಮಾನ್ಯವಾಗಿತ್ತು. ಬಾಂಬ್ ಸ್ಫೋಟಗೊಂಡ ಚರ್ಚ್ ಸ್ಟ್ರೀಟ್ ನಲ್ಲಿರುವ  ಕೋಕನೆಟ್  ಗ್ರೋವ್ ಹೋಟೆಲ್‌ನಲ್ಲಂತೂ ಗ್ರಾಹಕರಿಲ್ಲದೇ ಹೋಟೆಲ್ ಭಣಗುಡುತ್ತಿತ್ತು.

ನಾಲ್ಕು ಲೋಹಶೋಧಕ ಯಂತ್ರ: ಮುಂಜಾಗ್ರತಾ ಕ್ರಮವಾಗಿ ಸಾರ್ವಜನಿಕರನ್ನು ಸಂಪೂರ್ಣವಾಗಿ ತಪಾಸಣೆಗೆ ಒಳಪಡಿಸಿದ್ದು ಇದೇ ಮೊದಲು. ಎಂಜಿ ರಸ್ತೆ ಕಡೆಯಿಂದ ಬ್ರಿಗೇಡ್ ರಸ್ತೆ ಕಡೆ ಪ್ರವೇಶಿಸುವ ಸ್ಥಳದ್ಲೇ ನಾಲ್ಕು  ಲೋಕಶೋಧಕ ಯಂತ್ರಗಳನ್ನು ಅಳವಡಿಸಿ ಪ್ರತಿಯೊಬ್ಬರನ್ನು ತೀವ್ರ ತಪಾಸಣೆಗೆ ಒಳಪಡಿಸಲಾಗುತ್ತಿತ್ತು. ಪ್ಯಾರಾ ಮಿಲಿಟರಿ ಪಡೆ, ಕೆಎಸ್ ಆರ್‌ಪಿ, ಸಿಎಆರ್ ಹೀಗೆ ಭಾರಿ ಪ್ರಮಾಣದಲ್ಲಿ ಪೊಲೀಸ್  ಬಂದೋಬಸ್ತ್ ಮಾಡಲಾಗಿತ್ತು. ಸಂಭ್ರಮ ಆಚರಿಸಲು ಬರುವ ಯುವ ಜನತೆ ಭದ್ರತೆ ಕಂಡು ಗಲಿಬಿಲಿಗೊಂಡರು. ಆದರೆ ತಾವು ಸುರಕ್ಷಿತರಾಗಿದ್ದೇವೆ ಎನ್ನುವ ಭಾವನೆ ಇದೆ ಎನ್ನುವ ಅಭಿಪ್ರಾಯ ವ್ಯಕ್ತಪಡಿಸಿದರು.

ಸಂಜೆಯಿಂದಲೇ ಪೊಲೀಸರು ಗಸ್ತು ತಿರುಗುತ್ತಿದ್ದರು. ವೀಕ್ಷಣಾ ಗೋಪುರ ಮೇಲೆ ನಿಂತಿದ್ದ ಪೊಲೀಸರು  ಬೈನ್ಯಾಕುಲರ್ ಮೂಲಕ ನಿಗಾ ವಹಿಸಿದರು. ಶ್ವಾನದಳ ಸಿಬ್ಬಂದಿ , ಬಾಂಬ್ ಪತ್ತೆ ಸಿಬ್ಬಂದಿ ಸುತ್ತುಮುತ್ತಲಿನ ರಸ್ತೆಗಳಲ್ಲಿ ತಪಾಸಣೆ ನಡೆಸಿದರು. ಸಾರ್ವಜನಿಕರ ಬ್ಯಾಗ್‌ಗಳನ್ನು ತಪಾಸಣೆ ನಡೆಸಿದರು.

ನೆಲಕ್ಕೆ ಬಿದ್ದ ಡ್ರೋನ್: ಮೊದಲ ಬಾರಿ ಬಳಸಲಾದ ಡ್ರೋನ್ ಏರಿಯಲ್ ಕ್ಯಾಮೆರಾ ಮೇಲಿನಿಂದ ನಿಗಾ ಇರಿಸಿತ್ತು . ಆದರೆ ಸೂಕ್ತ ನಿಯಂತ್ರಣವಿಲ್ಲದ ಕಾರಣ ದೂರವಾಣಿ ವೈರ್‌ಗೆ  ತಗುಲಿ ರಾತ್ರಿ 10 ಗಂಟೆ ಸುಮಾರಿಗೆ ಡ್ರೋನ್ ನೆಲಕ್ಕೆ ಬಿತ್ತು. ಬಳಿಕ ತಂತ್ರಜ್ಞರು ಡ್ರೋನ್ ನ್ನು ರಿಪೇರಿಗಾಗಿ ಕೊಂಡೊಯ್ದರು.

ಬಾಂಬ್ ಸ್ಫೋಟ  ಹಿನ್ನೆಲೆಯಲ್ಲಿ ಭೀತಿ ಇತ್ತು. ಆದರೆ ಇಲ್ಲಿನ ಪೊಲೀಸ್ ಭದ್ರತೆ ನೋಡಿದಾಗ ಖುಷಿಯಾಗಿದೆ. ಯಾವುದೇ ಭಯವಿಲ್ಲದೇ ಹೊಸ ವರ್ಷಕ್ಕೆ ಶುಭಾಶಯ ಕೋರುತ್ತೇವೆ ಎಂಗು ನಗರದ ಕಾಲೇಜುಗಳಲ್ಲಿ ವ್ಯಾಸಾಂಗ ಮಾಡುತ್ತಿರುವ  ಇರಾನ್ ಮೂಲದ ವಿದ್ಯಾರ್ಥಿಗಳು ಹೇಳಿದರು.

ಪೊಲೀಸರ ಭದ್ರತೆ ಇರುವುದರಿಂದ ನಮಗೆ ಭಯವಿಲ್ಲ ಎಂದು ಚರ್ಚ್‌ಸ್ಟ್ರೀಟ್‌ನಲ್ಲಿ ಬಾರ್‌ವೊಂದರಲ್ಲಿದ್ದ ಗ್ರಾಹಕ  ಹೇಳಿದರು.

ಭದ್ರತೆಗೆ 800 ಪೊಲೀಸ್ ಸಿಬ್ಬಂದಿ
ಹೆಚ್ಚುವರಿ ಪೊಲೀಸ್ ಆಯುಕ್ತ ಅಲೋಕ್ ಕುಮಾರ್, ಡಿಸಿಪಿ ಸಂದೀಪ್ ಪಾಟೀಲ್ ನೇತೃತ್ವದಲ್ಲಿ 800 ಪೊಲೀಸ್ ಸಿಬ್ಬಂದಿ ಭದ್ರತೆಗಿದ್ದರು. ಸುತ್ತಮುತ್ತಲಿನ ರಸ್ತೆಗಳಲ್ಲಿ ಸಹಾಯವಾಣಿ ಸಂಖ್ಯೆಗಳು ಇರುವ ಬೋರ್ಡ್ ಹಾಕಲಾಗಿತ್ತು. ಅಲ್ಲದೇ ಮಹಿಳೆಯರಿಗೆ ಗೌರವಿಸಿ, ಅನುಮಾನಾಸ್ಪದ ವಸ್ತುಗಳ ಬಗ್ಗೆ ಎಚ್ಚರದಿಂದ ಇರಿ ಎನ್ನುವ  ಸಂದೇಶವನ್ನು ಮೈಕ್ ಮೂಲಕ ನೀಡಲಾಗುತ್ತಿತ್ತು. ಬಾರ್ ಗಳಲ್ಲಿ ಯುವ ಜನತೆ ಸಂಖ್ಯೆ ಹೆಚ್ಚಿತ್ತು. ಆದರೆ, ಭೀತಿಯಿಂದಾಗಿ ಕುಟುಂಬ ಸಮೇತರಾಗಿ ಬರುವವರ ಸಂಖ್ಯೆ ಕಡಿಮೆಯಾಗಿತ್ತು. ಆದರೆ, ಇಂದಿರಾನಗರ, ಕೋರ ಮಂಗಲ ಸೇರಿದಂತೆ ಪ್ರಮುಖ ವಾಣಿಜ್ಯ ಕೇಂದ್ರಗಳಲ್ಲಿರುವ ರೆಸ್ಟೋರೆಂಟ್‌ಗಳು ಹೋಟೆಲ್‌ಗಳು  ಗ್ರಾಹಕರಿಂದ ತುಂಬಿ ತುಳುಕಿದವು. ಸ್ನೇಹಿತರು, ಸಂಬಂಧಿಗಳು ಶುಭಾಶಯ ಹೇಳುತ್ತಿರುವುದು ಎಲ್ಲೆಡೆ ಸಾಮಾನ್ಯವಾಗಿತ್ತು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X
Google Preferred source

Advertisement

X
Kannada Prabha
www.kannadaprabha.com