ಬಾರ್ ಮತ್ತು ರೆಸ್ಟೋರೆಂಟ್‌ಗಳ ಶೇ.5.5 ತೆರೆಗೆ ಕಡಿತಕ್ಕೆ ಚಿಂತನೆ

ರಾಜ್ಯದ ಮದ್ಯಪ್ರಿಯರಿಗೆ ಸರ್ಕಾರ ಸದ್ಯದಲ್ಲೇ ಸಿಹಿ ಸುದ್ದಿ ನೀಡಲಿದೆ. ....
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಅಗ್ಗವಾಗಲಿದೆ ಮದ್ಯ, ಕೈಗೆ ಸಿಗಲಿದೆ ಸದ್ಯ
ಬೆಂಗಳೂರು:
ರಾಜ್ಯದ ಮದ್ಯ ಪ್ರಿಯರಿಗೆ ಸರ್ಕಾರ ಸದ್ಯದಲ್ಲೇ ಸಿಹಿ ಸುದ್ದಿ ನೀಡಲಿದೆ.
ಬಾರ್ ಆ್ಯಂಡ್ ರೆಸ್ಟೋರೆಂಟ್‌ಗಳಿಗೆ ಪೂರೈಕೆಯಾಗುತ್ತಿದ್ದ ಎಲ್ಲ ಬಗೆಯ ಮದ್ಯಗಳ ಮೇಲಿನ ಶೇ.5.5 ರಷ್ಟು ಮೌಲ್ಯವರ್ಧಿತ ತೆರಿಗೆ ತೆಗೆದು ಹಾಕಲು ಅಬಕಾರಿ ಇಲಾಖೆ ನಿರ್ಧರಿಸಿದೆ.

ಪತ್ರಿಕಾಗೋಷ್ಠಿಯಲ್ಲಿ ಬುಧವಾರ ಮಾತನಾಡಿದ ಅಬಕಾರಿ ಸಚಿವ ಸತೀಶ್ ಜಾರಕಿಹೊಳಿ, ವೈನ್ ಶಾಪ್‌ಗಳಲ್ಲಿ ಪೂರೈಕೆಯಾಗುತ್ತಿದ್ದ ಮದ್ಯದ ದರದಲ್ಲಿ ಈ ಕಾರಣಕ್ಕಾಗಿ ವ್ಯತ್ಯಾಸವಾಗುತ್ತಿತ್ತು. ಶೇ.5.5ರಷ್ಟು ವ್ಯಾಟ್ ವಿಧಿಸುತ್ತಿದ್ದರಿಂದ ಇಲ್ಲಿ ದರ ಹೆಚ್ಚಿತ್ತು.

ಕಳೆದ ಸಾಲಿನ ಬಜೆಟ್‌ನಲ್ಲಿ ಹೆಚ್ಚುವರಿಯಾಗಿ ವ್ಯಾಟ್ ವಿಧಿಸಿತ್ತು. ಆದರೆ, ಸಾರ್ವಜನಿಕರ ಆಗ್ರಹದ ಹಿನ್ನೆಲೆಯಲ್ಲಿ ವ್ಯಾಟ್ ಹಿಂಪಡೆಯಲು ನಿರ್ಧರಿಸಲಾಗಿದ್ದು, ಶೀಘ್ರ ಕಾನೂನು ತಿದ್ದುಪಡಿ ತರವಾಗುವುದು ಎಂದರು.

ರಾಜ್ಯ ಶೇ.95 ರಷ್ಟು ಕಳ್ಳಭಟ್ಟಿ ಮುಕ್ತವಾಗಿದೆ. ಕೆಲವು ಭಾಗಗಳಲ್ಲಿ ಸಮಸ್ಯೆ ಇರುವುದು ನಿಜವಾದರೂ ಮೊದಲಿನಂತಿಲ್ಲ. ಸೆಕೆಂಡ್ಸ್ ಮತ್ತು ಥರ್ಡ್ಸ್  ಹಾವಳಿ ಇಲ್ಲ. ನಮ್ಮ ಇಲಾಖೆ ಸಂಪೂರ್ಣವಾಗಿ ಭ್ರಷ್ಟಾಚಾರ ಮುಕ್ತವಾಗಿದೆ ಎನ್ನಲಾರೆ. ಆದರೆ, ನಾನಂತೂ ಭ್ರಷ್ಟಚಾರ ಮುಕ್ತನಾಗಿದ್ದೇನೆ ಎಂದು ತಿಳಿಸಿದರು.

ಇಲಾಖೆಯಲ್ಲಿ ಭ್ರಷ್ಟಾಚಾರ ನಡೆದಿದೆ. 300 ಕೋಟಿ ಲಂಚರೂಪದಲ್ಲಿ ಸಂಗ್ರಹಿಸಿ ಅಧಿಕಾರಿಗಳಿಗೆ ನೀಡಲಾಗಿದೆ ಎಂದು ಮದ್ಯ ಮಾರಾಟಗಾರರ ಸಂಘ ಆರೋಪಿಸಿರುವುದು ಗಮನಕ್ಕೆ ಬಂದಿದೆ. ಲಿಖಿತಿ ದೂರು ನೀಡಿದರೆ ತನಿಖೆ ನಡೆಸಬಹುದು. ಮುಖ್ಯಮಂತ್ರಿ ಅವರಿಗಾಗಲಿ, ನನಗಾಗಲಿ ದೂರು ನೀಡಬಹುದು. ಇಲ್ಲವಾದರೆ ಲೋಕಾಯುಕ್ತಕ್ಕೆ ದೂರು ಸಲ್ಲಿಸಬಹುದು ಎಂದು ಹೇಳಿದರು.

ಮದ್ಯದ ಅಂಗಡಿ ತೆರೆಯುವುದಕ್ಕೆ ಸಿಎಲ್ 2 ಮತ್ತು ಸಿಎಲ್ 9 ಪರವಾನಗಿ ನೀಡುವಾಗ ಪರಿಶಿಷ್ಟ ಜಾತಿ ಮತ್ತು ಪಂಗಡದವರಿಗೆ ಮೀಸಲು ನೀಡುವಂತೆ ವಿಧಾನಮಂಡಲದ ಅನುಸೂಚಿತ ಜಾತಿ ಮತ್ತು ಪಂಗಡಗಳ ಸಮಿತಿ ಶಿಫಾರಸು ಮಾಡಿದೆ. ಎಲ್ಲ ಇಲಾಖೆಯಲ್ಲಿ ಮೀಸಲು ಸೌಲಭ್ಯ ಇರುವಾಗ ನಮ್ಮ ಇಲಾಖೆಯಲ್ಲೂ ನೀಡಿದರೆ ತಪ್ಪಿಲ್ಲ ಎಂಬುದು ನನ್ನ ವೈಯಕ್ತಿಕ ಅಭಿಪ್ರಾಯ. ಈ ಬಗ್ಗೆ ಸಿಎಂ ಜತೆ ಚರ್ಚೆ ನಡೆಸಿಯೇ ತೀರ್ಮಾನ ತೆಗೆದುಕೊಳ್ಳಬೇಕಾಗುತ್ತದೆ ಎಂದರು.

  • ವ್ಯಾಟ್ ಕಡಿತಕ್ಕೆ ನಿರ್ಧರಿಸಿದ ಸರ್ಕಾರ: ಸಚಿವ ಜಾರಕಿಹೊಳಿ
  • ಸಾರ್ವಜನಿಕರ ಆಗ್ರಹದ ಹಿನ್ನೆಲೆ ಈ ಕ್ರಮ
  • ಸದ್ಯದಲ್ಲೇ ಕಾನೂನು ತಿದ್ದುಪಡಿಯ ಭರವಸೆ
ಪರವಾನಗಿ ಸದ್ಯಕ್ಕಿಲ್ಲ, ಸಾರಾಯಿ ನಿಷೇಧ ರದ್ದಿಲ್ಲ

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com