ಒಲಿದು ವರಿಸಿದವಳ ಮಸಣಕ್ಕೆ ಅಟ್ಟಿದ ಪತಿರಾಯ

ಮುನೇಕೊಳಲು ಸಮೀಪದ ಭುವನೇಶ್ವರಿ ಬಡಾವಣೆಯಲ್ಲಿ ಪತಿಯೇ ಪತ್ನಿಯನ್ನು ಕೊಲೆಗೈದು ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಂತೆ ಬಿಂಬಿಸಲು ಯತ್ನಿಸಿ ಪೊಲೀಸರ ಬಲೆಗೆ ಬಿದ್ದಿದ್ದಾನೆ.
ಪತ್ನಿ ಕಲಾವತಿಯನ್ನು ಕೊಲೆಗೈದ ಆರೋಪ ಹೊತ್ತಿರುವ ಮುನಿರೆಡ್ಡಿ
ಪತ್ನಿ ಕಲಾವತಿಯನ್ನು ಕೊಲೆಗೈದ ಆರೋಪ ಹೊತ್ತಿರುವ ಮುನಿರೆಡ್ಡಿ
Updated on

ಬೆಂಗಳೂರು: ಮುನೇಕೊಳಲು ಸಮೀಪದ ಭುವನೇಶ್ವರಿ ಬಡಾವಣೆಯಲ್ಲಿ ಪತಿಯೇ ಪತ್ನಿಯನ್ನು ಕೊಲೆಗೈದು ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಂತೆ ಬಿಂಬಿಸಲು ಯತ್ನಿಸಿ ಪೊಲೀಸರ ಬಲೆಗೆ ಬಿದ್ದಿದ್ದಾನೆ.

ಕಲಾವತಿ (26) ಕೊಲೆಯಾದವರು. ಈಕೆಯ ಪತಿಯ ಮುನಿರೆಡ್ಡಿ (38)ಯನ್ನು ಎಚ್‌ಎಎಲ್ ಪೊಲೀಸರು ಬಂಧಿಸಿದ್ದಾರೆ. ಆಂಧ್ರ ಪ್ರದೇಶ ಮೂಲದ ಮುನಿರೆಡ್ಡಿ ಮತ್ತು ಕಲಾವತಿ 7 ವರ್ಷ ಹಿಂದೆ ಪ್ರೀತಿಸಿ ಪಾಲಕರ ವಿರೋಧದ ನಡುವೆ ಮದುವೆಯಾಗಿದ್ದರು. 5 ವರ್ಷದ ಮಗಳೊಂದಿಗೆ ಮುನೇಕೊಳಲುವಿನಲ್ಲಿ ಬಾಡಿಗೆ ಮನೆಯಲ್ಲಿ ವಾಸವಾಗಿದ್ದರು. ಕಲಾವತಿ ಬೇಬಿಕೇರ್‌ನಲ್ಲಿ ಕೆಲಸ ಮಾಡುತ್ತಿದ್ದು, ಮುನಿರೆಡ್ಡಿ ಬಟ್ಟೆ ಅಂಗಡಿಯೊಂದರಲ್ಲಿ ಉದ್ಯೋಗಿಯಾಗಿದ್ದ.

ಮಧ್ಯವ್ಯಸನಿಯಾಗಿದ್ದ ಮುನಿರೆಡ್ಡಿ, ಸಂಪಾದನೆ ಮಾಡಿದ ಹಣವನ್ನು ಮದ್ಯ ಸೇವನೆಗೆ ಖರ್ಚು ಮಾಡುತ್ತಿದ್ದ. ಈ ವಿಚಾರವಾಗಿ ದಂಪತಿ ನಡುವೆ ಆಗಾಗ ಜಗಳವಾಗುತ್ತಿತ್ತು. ಸೋಮವಾರ ಬೆಳಗ್ಗೆ ಶಾಲೆಗೆ ತೆರಳಿದ ಬಳಿಕ ದಂಪತಿ ನಡುವೆ ಜಗಳವಾಗಿದೆ. ಮಾತಿಗೆ ಮಾತು ಬೆಳೆದು ವಿಕೋಪಕ್ಕೆ ತಿರುಗಿದಾಗ ಮುನಿರೆಡ್ಡಿ, ಸೀರೆಯಿಂದ ಪತ್ನಿ ಕೊಲೆಗೈದು ಬಳಿಕ ನೇಣು ಬಿಗಿದುಕೊಂಡಿರುವಂತೆ ಬಿಂಬಿಸಲು ಶವಕ್ಕೆ ನೇಣು ಹಾಕಿದ್ದಾನೆ.

ನಂತರ ಮನೆಗೆ ಬೀಗ ಹಾಕಿಕೊಂಡು ಶಾಲೆಯಿಂದ ಮಗಳನ್ನು ಕರೆದೊಯ್ದು ಹೊಸೂರು ರಸ್ತೆಯಲ್ಲಿರುವ ಅಜ್ಜಿ ಮನೆಗೆ ಬಿಟ್ಟಿದ್ದಾನೆ. ಬಳಿಕ ಪತ್ನಿ ಸಹೋದರನಿಗೆ ಕರೆಮಾಡಿ, ಕಲಾವತಿ ಆತ್ಮಹತ್ಯೆ ಮಾಡಿಕೊಂಡು ಬಿಟ್ಟಿದ್ದಾಳೆ ಎಂದು ಹೇಳಿದ್ದಾನೆ. ಭಯಗೊಂಡ ಸಹೋದರ ಮಂಗಳವಾರ ಸಂಜೆ ಮನೆಗೆ ಬಂದಾಗ ಪ್ರಕರಣ ಬೆಳಕಿಗೆ ಬಂದಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com