ನೈಸ್: ಯಾವುದೇ ತನಿಖೆಗೆ ಸಿದ್ದ

ದೇವೆಗೌಡರು ತಮ್ಮ ವಿರುದ್ದ ಮಾಡಿರುವ ಆರೋಪದಲ್ಲಿ ಯಾವುದೇ ಹುರುಳಿಲ್ಲ...
ಸಚಿವ ಡಿ.ಕೆ.ಶಿವಕುಮಾರ್
ಸಚಿವ ಡಿ.ಕೆ.ಶಿವಕುಮಾರ್

ಬೆಂಗಳೂರು: ನೈಸ್ ಭೂಮಿ ಒತ್ತುವರಿ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾಜಿ ಪ್ರಧಾನಿ ದೇವೆಗೌಡರು ತಮ್ಮ ವಿರುದ್ದ ಮಾಡಿರುವ ಆರೋಪಕ್ಕೆ ಸಚಿವ ಡಿ.ಕೆ.ಶಿವಕುಮಾರ್ ಖಾರವಾಗಿ ಪ್ರತಿಕ್ರಿಯಿಸಿದ್ದು, ಈ ಕುರಿತ ಯಾವುದೇ ತನಿಖೆಗೂ ತಾವು ಸಿದ್ದ ಎಂದು ಘೋಷಿಸಿದ್ದಾರೆ.

ನಗರದಲ್ಲಿ ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ದೇವೆಗೌಡರು ತಮ್ಮ ವಿರುದ್ದ ಮಾಡಿರುವ ಆರೋಪದಲ್ಲಿ ಯಾವುದೇ ಹುರುಳಿಲ್ಲ ಎಂದು ಸ್ಪಷ್ಟಪಡಿಸಿದರು. ರಾಮನಗರ ಲೋಕಸಭಾ ಕ್ಷೇತ್ರದ ಫಲಿತಾಂಶ ಹಾಗೂ ತಮ್ಮ ಪಕ್ಷದೊಳಗಿನ ಆಂತರಿಕ ಹಾಗೂ ತಮ್ಮ ಪಕ್ಷದೊಳಗಿನ ಆಂತರಿಕ ಭಿನ್ನಾಭಿಪ್ರಾಯಗಳ ಹತಾಶೆಯಿಂದ ದೇವೆಗೌಡರು ತಮ್ಮ ವಿರುದ್ದ ವಿನಾಕಾರಣ ಆರೋಪ ಮಾಡುತ್ತಿದ್ದಾರೆಂದು ತಿರುಗೇಟು ನೀಡಿದರು.

ನೈಸ್ ಭೂಮಿ ಒತ್ತುವರಿ ವಿಚಾರದಲ್ಲಿ ಗೌಡರು ಮಾಡಿರುವ ಆರೋಪದಂತೆ ಆ ಸಂದರ್ಭದಲ್ಲಿ ನಾನು ಯಾವುದೇ ಸಚಿವನೂ ಆಗಿರಲಿಲ್ಲ. ಹಗರಣದ ತನಿಖೆಗೆ ದೇವೆಗೌಡರು ಒತ್ತಾಯಿಸುವುದು ಬೇಡ, ನಾನೇ ಖುದ್ದು ಮುಖ್ಯ ಮಂತ್ರಿಯವರಿಗೆ ಪತ್ರ ಬರೆದು ತನಿಖೆ ನಡೆಸುವಂತೆ ಕೇಳಿಕೊಂಡಿದ್ದೇನೆ.

ಸಮಿತಿಯೊಂದನ್ನು ನೇಮಿಸಿ ಸೂಕ್ತ ತನಿಖೆಗೆ ನಡೆಸುವಂತೆಯೂ ವಿನಂತಿಸಿಕೊಂಡಿದ್ದೇನೆ. ಅವರು ಯಾವುದೇ ರೀತಿಯ ತನಿಖೆಗೆ ಸೂಚಿಸಿದರೂ ಪ್ರಾಮಾಣಿಕವಾಗಿ ಸಹಕರಿಸಲು ಸಿದ್ಧನಿದ್ದೇನೆ. ರಾಜ್ಯದ ಜನತೆಗೆ ಹೀಗಾದರೂ ವಾಸ್ತವ ಗೊತ್ತಾಗಲಿ ಎಂದು ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com