
ಬೆಂಗಳೂರು: ಸರ್ಕಾರ ಇನ್ನು ಮುಂದೆ ಸರ್ಕಾರಿ ಗುತ್ತಿಗೆ ಕೆಲಸಗಳಿಗೆ ದಲಿತರ ಮೀಸಲಾತಿ ಕಲ್ಪಿಸಲಿದೆ ಎಂದು ಸೋಮವಾರ ಹೈಕೋರ್ಟ್ ಗೆ ತಿಳಿಸಿದೆ.
ಸದ್ಯಕ್ಕೆ ಜಾರಿಯಲ್ಲಿರುವ ಕರ್ನಾಟಕ ಪರಿಶಿಷ್ಟ ಜಾತಿ, ಪರಿಶಿಷ್ಟ ವರ್ಗದ ಹಾಗೂ ಹಿಂದುಳಿದ ವರ್ಗ (ನೇಮಕಾತಿ ಮೀಸಲಾತಿ) ನೀತಿಯಲ್ಲಿ ೧೯೯೦, ಗುತ್ತಿಗೆ ಕೆಲಸಗಳಿಗೆ ಮೀಸಲಾತಿಯನ್ನು ನಿರಾಕರಿಸುವ ಅವಕಾಶವಿದ್ದುದ್ದನ್ನು, ಭಜಂತ್ರಿ ಮಾದಪ್ಪ ಎಂಬುವವರು ಈ ನೀತಿಯಿಂದ ಎಸ್ ಸಿ, ಎಸ್ ಟಿ ಮತ್ತು ಹಿಂದುಳಿದ ವರ್ಗದವರು ಗುತ್ತಿಗೆ ಉದ್ಯೋಗಗಳಿಂದ ವಂಚಿತರಾಗುತ್ತಿದ್ದಾರೆ ಎಂದು ಉಚ್ಛ ನ್ಯಾಯಾಲಯದಲ್ಲಿ ಪ್ರಶ್ನಿಸಿದ್ದರು. ಇದರ ವಿಚಾರಣಾ ವೇಳೆಯಲ್ಲೇ ಸರ್ಕಾರ ತನ್ನ ನಿರ್ಧಾರವನ್ನು ನ್ಯಾಯಾಲಯಕ್ಕೆ ತಿಳಿಸಿದೆ.
ಕೇಂದ್ರ ನೀತಿಯ ಪ್ರಕಾರ ಅಂತಹ ಯಾವುದೇ ವಿನಾಯಿತಿ ಇಲ್ಲ, ಕರ್ನಾಟಕದಲ್ಲಿ ಮಾತ್ರ ಈ ಮೀಸಲಾತಿಯನ್ನು ಗುತ್ತಿಗೆ ಕೆಲಸಗಳಿಂದ ಕೈಬಿಡಲಾಗಿದೆ ಅಂದು ಅರ್ಜಿದಾರರ ವಕೀಲರು ನ್ಯಾಯಾಲಯಕ್ಕೆ ಸಲ್ಲಿಸಿದ್ದ ಅರ್ಜಿಯಲ್ಲಿ ತಿಳಿಸಿದ್ದರು.
ಸರ್ಕಾರ ತನ್ನ ನಿರ್ಧಾರವನ್ನು ನ್ಯಾಯಾಲಯಕ್ಕೆ ತಿಳಿಸಿದ ಮೇಲೆ, ಈ ಅರ್ಜಿ ಇತ್ಯರ್ಥಗೊಂಡಿದೆ.
Advertisement